Raichur Love Case: ಪ್ರಿಯತಮೆ ಕೊಲೆ: ಕೃತ್ಯ ನಡೆದ 33 ದಿನಗಳ ಬಳಿಕ ಪಾಗಲ್ ಪ್ರೇಮಿಯ ಶವ ಪತ್ತೆ

By Girish Goudar  |  First Published Mar 29, 2022, 10:23 AM IST

*  ರಾಯಚೂರು ಜಿಲ್ಲೆಯ ಮಸ್ಕಿ‌ ಪಟ್ಟಣದಲ್ಲಿ ನಡೆದ ಘಟನೆ
* ಫೆ. 25 ರಂದು ನಡೆದ್ದ ಕೊಲೆ
* ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
 


ರಾಯಚೂರು(ಮಾ.29): ಪ್ರಿಯತಮೆಯನ್ನ(Lover) ಕೊಂದಿದ್ದ ಜಾಗದಲ್ಲೇ ಪಾಗಲ್ ಪ್ರೇಮಿಯ ಶವ(Deadbody) ಪತ್ತೆಯಾದ ಘಟನೆ ಜಿಲ್ಲೆಯ ಮಸ್ಕಿ‌ ಪಟ್ಟಣದಲ್ಲಿ ಇಂದು(ಮಂಗಳವಾರ) ನಡೆದಿದೆ. ಕೃತ್ಯ ನಡೆದ 33 ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 

ಇದೇ ಫೆ. 25 ರಂದು ಭೂಮಿಕಾ(15) ಎಂಬ ವಿದ್ಯಾರ್ಥಿನಿಯ(Student) ಕೊಲೆಯಾಗಿತ್ತು(Murder). ಭೂಮಿಕಾಳನ್ನು ಸೋದರ ಮಾವನ ಮಗ ರಮೇಶ್ ಕೊಲೆಗೈದಿದ್ದನು. ಸಾನಬಾಳ ರಸ್ತೆಯ ಪೊದೆಯಲ್ಲಿ ಭೂಮಿಕಾ ಹತ್ಯೆ ಮಾಡಲಾಗಿತ್ತು. ಅದೇ ಜಾಗದ ಪಕ್ಕದ ಪೊದೆಯಲ್ಲಿ ರಮೇಶ್‌ನ ಶವ ಕೂಡ ಪತ್ತೆಯಾಗಿದೆ.  

Tap to resize

Latest Videos

ಶಾಲೆಯ ಹೊರಭಾಗದಲ್ಲಿ ವಾಗ್ವಾದ: ಗುಂಡಿಕ್ಕಿ ವಿದ್ಯಾರ್ಥಿಯ ಹತ್ಯೆ

ಪೊದೆಯಲ್ಲಿದ್ದ ಮೃತದೇಹವನ್ನ ನಾಯಿಗಳು ಎಳೆದುತಂದಿದ್ದವು. ಇದನ್ನ ನೋಡಿದ ಕುರಿಗಾಯಿಗಳು ಪೊಲೀಸರು ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಮಸ್ಕಿ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭೂಮಿಕಾ ಕೊಲೆ ಮಾಡಿದ ಎರಡು ಮೂರು ದಿನಗಳ ಬಳಿಕ ರಮೇಶ್ ಆತ್ಮಹತ್ಯೆ(Suicide) ಮಾಡಿಕೊಂಡಿರಬಹುದು ಅಂತ ಪೊಲೀಸುರ ಶಂಕೆ ವ್ಯಕ್ತಪಡಿಸಿದ್ದಾರೆ. ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ‌ ಶಂಕೆ ವ್ಯಕ್ತವಾಗಿದೆ.  ಭೂಮಿಕಾ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. 

ಭೂಮಿಕಾ ಕೊಲೆಯಾದ ಜಾಗದಲ್ಲಿ ವಿಷದ ಬಾಟಲಿ ಬಿದ್ದಿದೆ. ಹೀಗಾಗಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.  ಸೋದರ ಅತ್ತೆ ಮಗಳಾಗಿದ್ದ ಭೂಮಿಕಾಳನ್ನು ರಮೇಶ ಪ್ರೀತಿಸಿದ್ದನು(Love) ಎಂದು ಹೇಳಲಾಗುತ್ತಿದೆ. ಮೊದಲು ಮದುವೆಗೆ ಒಪ್ಪಿ, ಕೊನೆಗೆ ಮದುವೆಗೆ ನಿರಾಕರಿಸಲಾಗಿತ್ತು. ಶಾಲೆಯಿಂದ ಕರೆತರುವ ನೆಪದಲ್ಲಿ ರಮೇಶ ಭೂಮಿಕಾಳನ್ನು ಹತ್ಯೆಗೈದಿದ್ದನು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಸ್ಪೆಷಲ್‌ ಟೀಂಗಳು ಕಳೆದ 33 ದಿನಗಳಿಂದ ಕಾರ್ಯಾಚರಣೆ ನಡೆಸಿದ್ದರು.  ಬೆಂಗಳೂರು, ಮಸ್ಕಿ, ರಾಯಚೂರು(Raichur) ಸೇರಿ ವಿವಿಧೆಡೆ ಆರೋಪಿ ರಮೇಶ್‌ಗಾಗಿ ಹುಡುಕಾಟ ನಡೆಸಲಾಗಿತ್ತು. ಈ ಸಂಬಂಧ ಮಸ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ವಿಚ್ಛೇದನ ಕೋರಿದ್ದ ಪತ್ನಿಯನ್ನ ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಗಂಡ..!

ಬೆಳಗಾವಿ: ವಿಚ್ಛೇದನ(Divorce) ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಪತ್ನಿಯನ್ನು ಪತಿಯೇ ಸಾರ್ವಜನಿಕರವಾಗಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ(Murder) ಮಾಡಿರುವ ಘಟನೆ ಮಾ.25 ರ ಮಧ್ಯಾಹ್ನ ನಗರದ ಕೋಟೆ ಕೆರೆಯ ಹತ್ತಿರದ ನಡೆದಿತ್ತು. ಈ ಘಟನೆಯಿಂದಾಗಿ ನಗರದ ಜನತೆ ಬೆಚ್ಚಿ ಬಿಳ್ಳುವಂತಾಗಿತ್ತು. 

ಇಲ್ಲಿನ ಗಾಂಧಿ ನಗರದ ಹೀನಾ ಕೌಸರ್‌ ಮಂಜೂರ ಇಲಾಹಿ ನದಾಫ (27) ಹತ್ಯೆಗೀಡಾದ ಮಹಿಳೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಮಂಜೂರ್‌ ಇಲಾಹಿ ನದಾಫ (34) ಹತ್ಯೆ ಮಾಡಿದ ಆರೋಪಿ(Accused). ಹೀನಾಕೌಸರ್‌ ಕಳೆದ ನಾಲ್ಕು ವರ್ಷಗಳ ಹಿಂದೆ ಮಂಜೂರ್‌ ಜತೆ ವಿವಾಹವಾಗಿದ್ದರು(Marriage). ಈ ದಂಪತಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ತಾಯಿ ಮೃತಪಟ್ಟಿದ್ದು(Death), ತಂದೆ ಜೈಲು ಪಾಲಾದ ಕಾರಣಕ್ಕೆ ನಾಲ್ಕು ವರ್ಷದ ಮಗು ಈಗ ಅನಾಥವಾಗಿದೆ. ಮಂಜೂರ ಕೆಲ ವರ್ಷಗಳಿಂದ ಹೀನಾ ಕೌಸರ ಮೇಲೆ ದೈಹಿಕ ಹಲ್ಲೆ(Assault) ಜತೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಕಾರಣಕ್ಕೆ ಹೀನಾಕೌಸರ್‌ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಹತ್ಯೆಗೈದು ಆರೋಪಿ ಮಂಜೂರ್‌ ಹಾಗೂ ಹತ್ಯೆಗೀಡಾದ ಹೀನಾಕೌಸರ್‌ ನಡುವೆ ಕೌಟುಂಬಿಕ ಕಲಹವಿತ್ತು. ಈ ಕಾರಣದಿಂದಾಗಿ ಕಳೆದ ಎಂಟು ತಿಂಗಳ ಹಿಂದೆ ಹೀನಾಕೌಸರ್‌ ವಿಚ್ಛೇದನ ಕೋರಿ, ಬೆಳಗಾವಿಯ(Belagavi) ಕೌಟುಂಬಿಕ ನ್ಯಾಯಾಲಯದಲ್ಲಿ(Family Court) ಅರ್ಜಿ ಸಲ್ಲಿಸಿದ್ದರು. 

ಮೈಸೂರು:  ತಂದೆ-ತಾಯಿ ಇಬ್ಬರು ಮದ್ಯ ವ್ಯಸನಿ... ಜಗಳದಲ್ಲಿ ಕೊಲೆಯಾದ ಅಪ್ಪ!

ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿ ಗಾಂಧಿನಗರದಲ್ಲಿ ಇರುವ ತವರು ಮನೆಗೆ ಹೀನಾಕೌಸರ್‌ ವಾಪಸ್‌ ಆಗುತ್ತಿದ್ದರು. ಈ ವೇಳೆ ಕೋಟೆ ಕೆರೆ ಬಳಿ ಬಂದ ಮಂಜೂರ್‌ ನಡೆದುಕೊಂಡು ಹೋಗುತ್ತಿದ್ದ ಹೀನಾಕೌಸರ್‌ ಅವರನ್ನು ಅಡ್ಡಗಟ್ಟಿ ಕೆಲಹೊತ್ತು ವಾಗ್ವಾದ ಮಾಡಿದ್ದಾನೆ. ಬಳಿಕ ತನ್ನ ಬ್ಯಾಗ್‌ನಲ್ಲಿ ತಂದಿದ್ದ ಮಚ್ಚಿನಿಂದ ಬರ್ಬರವಾಗಿ ನಡುರಸ್ತೆಯಲ್ಲಿಯೇ ಹೀನಾಕೌಸರ್‌ ಕುತ್ತಿಗೆ ಹಾಗೂ ಕೈಗೆ ಮಚ್ಚಿನಿಂದ ಕೊಚ್ಚಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಆಕೆಯನ್ನು, ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಮಾರ್ಗ ಮಧ್ಯೆಯೇ ಹೀನಾಕೌಸರ್‌ ಮೃತಪಟ್ಟಿದ್ದರು. 

ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಹಾಗೂ ಮಾರ್ಕೆಟ್‌ ಹಾಗೂ ಮಾಳಮಾರುತಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಈ ಕುರಿತು ಮಾಳಮಾರುತಿ ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
 

click me!