
ತುಮಕೂರು: ತವರಿಗೆ ಹೋದ ಹೆಂಡತಿ ಮರಳಿ ಬಾರದೆ ಇದ್ದುದರಿಂದ ಮನನೊಂದ ನವ ವಿವಾಹಿತನೊಬ್ಬ ನೇಣಿಗೆ ಶರಣಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಮೃತಪಟ್ಟವನನ್ನು ಪಟ್ಟಣದ ಮಹಾವೀರ ನಗರದ ವಾಸಿ ಅವಿನಾಶ್ (26) ಎಂದು ಗುರುತಿಸಲಾಗಿದೆ. ಮೃತಪಟ್ಟ ಅವಿನಾಶ್ ಕೆಲ ತಿಂಗಳ ಹಿಂದೆ ತಾನು ಪ್ರೀತಿಸಿದ್ದ ಧಾಮಿನಿ (22) ಎಂಬ ಯುವತಿಯನ್ನು ಮದುವೆಯಾಗಿದ್ದ. ಆಷಾಢ ಮಾಸದ ಹಿನ್ನೆಲೆಯಲ್ಲಿ ತವರಿಗೆ ಹೋಗಿದ್ದ ಧಾಮಿನಿಗೆ ಗುರುವಾರ ರಾತ್ರಿ ಕರೆ ಮಾಡಿದ್ದ ಅವಿನಾಶ ಬರುವಂತೆ ತಿಳಿಸಿದ್ದ. ಆದರೆ ಹೆಂಡತಿ ಧಾಮಿನಿ ನಾಗರ ಪಂಚಮಿ ಹಬ್ಬ ಮುಗಿಸಿ ಬರುವುದಾಗಿ ತಿಳಿಸಿದ್ದು ಈ ವೇಳೆ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.
ತಡರಾತ್ರಿ ಅವಿನಾಶ ತಮ್ಮನಿಗೆ ವಾಟ್ಸಪ್ ಮೂಲಕ ಮೆಸೇಜ್ ಮಾಡಿದ್ದು, ಹೆಂಡತಿಗೆ ಶಿಕ್ಷೆಯಾಗಬೇಕು. ನನ್ನ ಸಾವಿಗೆ ಅವಳೇ ಕಾರಣ ಎಂದು ತಿಳಿಸಿದ್ದ. ಬೆಳಿಗ್ಗೆ ಮೆಸೇಜ್ ನೋಡಿದ ಸೋದರ, ಆತನ ರೂಮಿಗೆ ಹೋಗಿ ಬಾಗಿಲು ಒಡೆದು ನೋಡಿದಾಗ ಅವಿನಾಶ ನೇಣಿಗೆ ಶರಣಾಗಿದ್ದು ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸದುರ್ಗ: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಪತಿಯು ತನ್ನ ಪತ್ನಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಾಲೂಕಿನ ಶ್ರೀರಾಂಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.
ಹಿರಿಯೂರು ತಾಲೂಕು ಕುಂಟಪ್ಪನಹಳ್ಳಿ ಗ್ರಾಮದ ನೇತ್ರಾವತಿ (30) ಹಲ್ಲೆಗೊಳಗಾದ ಮಹಿಳೆ. ಈಕೆಯ ಗಂಡ ತಿಪ್ಪೆಸ್ವಾಮಿ ಹಲ್ಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.
ಹಿರಿಯೂರು ತಾಲೂಕು ಕುಂಟಪ್ಪನಹಳ್ಳಿ ಗ್ರಾಮದ ನೇತ್ರಾವತಿ ತನ್ನ ಗಂಡ ಹಾಗೂ ಇಬ್ಬರು ಮಕ್ಕಳೋಂದಿಗೆ ಕೂಲಿ ಕೆಲಸಕ್ಕಾಗಿ ಶ್ರೀರಾಂಪುರಕ್ಕೆ ಬಂದು ಇಲ್ಲಿಯೇ ಕಳೆದ 20 ದಿನಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗುರುವಾರ ರಾತ್ರಿ ಹೊಸದುರ್ಗಕ್ಕೆ ಹೊಗಿದ್ದ ಗಂಡ ತಿಪ್ಪೆಸ್ವಾಮಿ ಮನೆಗೆ ಬಂದಾಗ ಇವರೊಂದಿಗೆ ಕೆಲಸ ಮಾಡುತ್ತಿದ್ದ ಕಂಚೀಪುರ ಗ್ರಾಮದ ವಿಜಯಕುಮಾರ ಎಂಬಾತ ತನ್ನ ಮನೆಯಲ್ಲಿರುವುದನ್ನು ಕಂಡು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ.
ಇದನ್ನೂ ಓದಿ: ಬಸ್‌ನಲ್ಲೂ ವಂದೇ ಭಾರತ್ ವೈಭೋಗ: ಶೌಚಾಲಯ, ಪ್ಯಾಂಟ್ರಿ ಹೊಂದಿರುವ ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ KSRTC!
ಗಂಡನ ಗಲಾಟೆಯಿಂದ ಬೇಸತ್ತ ನೇತ್ರಾವತಿ ಶ್ರೀರಾಂಪುದ ಪೊಲೀಸ್ ಠಾಣೆಗೆ ದೂರು ನೀಡಲು ಮನೆಯಿಂದ ಹೊರ ಬಂದಾಗ ಅವಳನ್ನೆ ಹಿಂಬಾಲಿಸಿಕೊಂಡು ಬಂದು ಶ್ರೀರಾಂಪುರದ ಅಂಬೇಡ್ಕರ್ ವೃತ್ತದ ಬಳಿ ಚಾಕುವಿನಿಂದ ಮುಖ ಹಾಗೂ ಮೈ ಕೈಗೆ ಗಾಯಗೊಳಿಸಿದ್ದಾನೆ. ನಂತರ ಇದನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೋಲೀಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಸರ್ಕಾರದ ₹100 ಕೋಟಿಯ 1.37 ಎಕರೆ ಕಬಳಿಕೆ, ದಾಖಲೆ ಸಹಿತ ಲೋಕಾಯುಕ್ತ, ಜಿಬಿಎ ದಕ್ಷಿಣ ನಗರ ಪಾಲಿಕೆ ಆಯುಕ್ತರಿಗೆ ದೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ