Latest Videos

ಮೈಸೂರಲ್ಲಿ ಟಿಕ್‌ಟಾಕ್‌ ಸ್ಟಾರ್‌ ನವೀನ್‌ ಮರ್ಡರ್‌: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ..!

By Girish GoudarFirst Published Sep 1, 2023, 12:31 PM IST
Highlights

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ನಾಲೆ ಬಳಿ ಕೊಳತೆ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪೊದೆಯೊಳಗೆ ಕೊಳತೆ ನಾರುತ್ತಿದ್ದ ಶವ ಹೊರ ತೆಗೆದು ಪರಿಶೀಲಿಸಿದ ಪೊಲೀಸರಿಗೆ, ಇದು ಮರ್ಡರ್ ಅನ್ನೋದು ಖಾತ್ರಿಯಾಗಿತ್ತು. ಪೂರ್ವಾಪರ ವಿಚಾರಿಸಿದಾಗ ಗೊತ್ತಾಗಿದ್ದು ಮೃತ ವ್ಯಕ್ತಿ ನವೀನ್ ಅಲಿಯಾಸ್ ಸ್ಮೈಲ್ ನವೀನ್ ಅಲಿಯಾಸ್ ಟಿಕ್‌ಟಾಕ್ ಸ್ಟಾರ್ ನವೀನ್ ಅಂತ. 

ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು

ಮೈಸೂರು(ಸೆ.01): ಟಿಕ್‌ಟಾಕ್ ಕಾಲದಲ್ಲೂ ಮಿಂಚಿದ್ದ. ರೀಲ್ಸ್‌ನಲ್ಲೂ ಜನಪ್ರಿಯ ಆಗಿದ್ದ ನವೀನ್ ಅರಮನೆ ಬಳಿ ಕಿಡ್ನಾಪ್ ಆಗಿದ್ದಾತ, ಹೆಣವಾಗಿ ಪತ್ತೆಯಾಗಿದ್ದಾನೆ. ಆದರೆ ಜನಪ್ರಿಯ ವ್ಯಕ್ತಿಯ ಸಾವಿನ ಹಿಂದೆ ಹಳೆ ಕೊಲೆಯ ದ್ವೇಷ ಇದೆ ಅನ್ನೋದೇ ವಿಪರ್ಯಾಸ. 

ಒಂದೊಂದು ಟಿಟ್‌ಟಾಕ್‌ನಲ್ಲೂ ಸಮಾಜಕ್ಕೆ ಸಂದೇಶಗಳನ್ನು ಕೊಡುತ್ತಿದ್ದ ನವೀನ್‌ ಅಲಿಯಾಸ್ ಸ್ಮೈಲಿ ನವೀನ್. ಸ್ಮೈಲಿ ನವೀನ್ ಅನ್ನುವ ಹೆಸರಿನಿಂದ ಫೇಮಸ್ ಆಗಿದ್ದ ಇವರು ಬೆಂಗಳೂರು ನಗರದ ಯಲಚನಹಳ್ಳಿ ಬಳಿಯ ಹರಿನಗರ ನಿವಾಸಿ. 27 ವರ್ಷದ ನವೀನ್ ಅರ್ಧಂಬರ್ಧ ಓದು ನಿಲ್ಲಿಸಿ, ಬೆಂಗಳೂರಿನಲ್ಲಿ ಅದು ಇದು ಕೆಲಸ ಮಾಡಿಕೊಂಡಿದ್ದ. ಟಿಕ್ ಟಾಕ್ ಕಾಲದಲ್ಲಿ ಕಂಡ ಕಂಡ ವಿಚಾರಕ್ಕೆ ವೀಡಿಯೋ ಮಾಡಿ ಸಾಕಷ್ಟು ಫೇಮಸ್ ಆಗಿದ್ದ. ಅಂತಹವನು ಮೈಸೂರಿಗೆ ಬಂದು ರೀಲ್ಸ್ ಮಾಡುವಾಗ ಕಿಡ್ನಾಪ್ ಆಗಿ ಕೊಲೆ ಆಗಿದ್ದಾನೆ.

ಕಂಡವರ ಸಂಸಾರದಲ್ಲಿ ಮೂಗು ತೂರಿಸಿದ್ದೇ ತಪ್ಪಾ ? ಎರಡನೇ ಪ್ರಯತ್ನದಲ್ಲಿ ದಲಿತ ನಾಯಕನ ಕೊಲೆ..!

ಅಂದ ಹಾಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ನಾಲೆ ಬಳಿ ಕೊಳತೆ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪೊದೆಯೊಳಗೆ ಕೊಳತೆ ನಾರುತ್ತಿದ್ದ ಶವ ಹೊರ ತೆಗೆದು ಪರಿಶೀಲಿಸಿದ ಪೊಲೀಸರಿಗೆ, ಇದು ಮರ್ಡರ್ ಅನ್ನೋದು ಖಾತ್ರಿಯಾಗಿತ್ತು. ಪೂರ್ವಾಪರ ವಿಚಾರಿಸಿದಾಗ ಗೊತ್ತಾಗಿದ್ದು ಮೃತ ವ್ಯಕ್ತಿ ನವೀನ್ ಅಲಿಯಾಸ್ ಸ್ಮೈಲ್ ನವೀನ್ ಅಲಿಯಾಸ್ ಟಿಕ್‌ಟಾಕ್ ಸ್ಟಾರ್ ನವೀನ್ ಅಂತ. 

ನವೀನ್ ಟಿಕ್‌ಟಾಕ್ ವಿಡಿಯೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪಾಪ್ಯೂಲರ್ ಆಗಿದ್ದ. ಟಿಕ್‌ಟಾಕ್ ಬ್ಯಾನ್ ಆದ ರೀಲ್ಸ್ ವಿಡಿಯೋ ಮಾಡಿ ಫೇಸ್‌ಬುಕ್, ಇನ್‌ಸ್ಟಾಗ್ರಾಂಗೆ ಅಪ್‌ಲೋಡ್ ಮಾಡಿ ಮತ್ತೆ ಫೇಮಸ್ ಆಗಿದ್ದ. ಆಗಸ್ಟ್ 27ರಂದು ರಾತ್ರಿ 9.45ರ ಸುಮಾರಿಗೆ ಮೈಸೂರು ಅರಮನೆ ಮುಂದೆ ರೀಲ್ಸ್ ವಿಡಿಯೋ ಮಾಡುವಾಗ ಕಿಡ್ನಾಪ್ ಆಗಿದ್ದ. ಆತನ ಜತೆಗಿದ್ದ ಇಬ್ಬರು ಯುವತಿಯರು ಮೂಕವಿಸ್ಮಿತರಾಗಿದ್ದರು. ತಡೆಯಲು ಹೋದ ಪವನ್ ಎಂಬ ಸ್ನೇಹಿತನನ್ನೂ ಕಿಡ್ನಾಪರ್‌ಗಳು ಎತ್ತಿಕೊಂಡು ಹೋಗಿದ್ದರು ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.  

ಅಪಹರಣ ಮಾಡಿದ ಆರೋಪಿಗಳು ಪವನ್ ನನ್ನು ಮೈಸೂರು ಹೊರ ವಲಯದಲ್ಲಿ ಬಿಟ್ಟು ಕಳುಹಿಸಿದ್ದರು. ನವೀನ್‌ನನ್ನು ಕಾರಿನಲ್ಲೇ ಕೊಲೆಗೈದು ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ನಾಲೆ ಬಳಿ ಬಿಸಾಡಿ ಹೋಗಿದ್ದರು. ಶವದ ಸುಳಿವು ಬೆನ್ನತ್ತಿದ್ದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, 8 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮೈಸೂರು ಅರಮನೆ ಬಳಿ ಕಿಡ್ನಾಪ್ ಆಗಿದ್ದ ಕಾರಣಕ್ಕೆ ಪ್ರಕರಣ ಜಿಲ್ಲಾ ಪೊಲೀಸರಿಂದ ನಗರ ಪೊಲೀಸರಿಗೆ ವರ್ಗಾವಣೆ ಆಗಿದೆ.
ಈವರೆಗಿನ ವಿಚಾರಣೆ ಪ್ರಕಾರ, ಇದೊಂದು ಹಳೇ ವೈಷಮ್ಯದ ಕಾರಣಕ್ಕೆ ನಡೆದ ಕೊಲೆ. ಬೆಂಗಳೂರಿನ ಕಾರ್ಪೋರೇಟರ್ ಸಂಬಂಧಿ ವಿನೋದ್ ಎರಡು ವರ್ಷದ ಹಿಂದೆ ಕೊಲೆಯಾಗಿದ್ದ. ಈ ಸಂಬಂಧ ರಾಮನಗರ ಜಿಲ್ಲೆ ಕಗ್ಗಲಿಪುರ ಠಾಣೆ ಪೊಲೀಸರು 13 ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ಪೈಕಿ ಸ್ಮೈಲ್ ನವೀನ್ ಕೂಡ ಒಬ್ಬ. ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗೆ ಬಿಡುಗಡೆ ಆಗಿದ್ದ ನವೀನ್, ಈಗ ಮೈಸೂರಿನಲ್ಲಿ ಹೆಣವಾಗಿದ್ದಾನೆ.

ಕೊಲೆ ಹಿಂದಿನ ಕಾರಣ ರೋಚಕವಾಗಿದ್ದು, ರಾಮನಗರ ಜಿಲ್ಲೆ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ವರ್ಷದ ಹಿಂದೆ ನಡೆದಿದ್ದ ಬಿಬಿಎಂಪಿ ಅಂಜನಾಪುರ ವಾರ್ಡ್ ಬಿಜೆಪಿ ಕಾರ್ಪೊರೇಟರ್ ಸೋಮಣ್ಣ ಅವರ ಅಣ್ಣನ ಮಗ ವಿನೋದ್ ಹತ್ಯೆಗೆ ಪ್ರತೀಕಾರವಾಗಿ ಸ್ಟೈಲ್ ನವೀನ್‌ನನ್ನು ಹತ್ಯೆ ಮಾಡಿರಬಹುದು ಎಂದು ಹೇಳಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ವಿನೋದ್ ಅವರನ್ನು 2020ರ ಜುಲೈ ತಿಂಗಳಿನಲ್ಲಿ ಸ್ಟೈಲ್ ನವೀನ್ ಸೇರಿದಂತೆ 13 ಮಂದಿಯ ತಂಡ ಕಗ್ಗಲಿ ಪುರ ಠಾಣಾ ವ್ಯಾಪ್ತಿಯಲ್ಲಿ ಬರ್ಬರವಾಗಿ ಹತ್ಯೆಗೈದಿತ್ತು. ಈ ಪ್ರಕರಣದಲ್ಲಿ ತನ್ನ ನಾಲ್ವರು ಸ್ನೇಹಿತರೊಂದಿಗೆ ಸ್ಟೈಲ್ ನವೀನ್ ಪೊಲೀಸರಿಗೆ ಶರಣಾಗಿದ್ದ. ಪೊಲೀಸರು ಎಲ್ಲಾ 13 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನವೀನ್ ಇತ್ತೀಚೆಗೆ ಅನಾರೋಗ್ಯ ಕಾರಣ ನೀಡಿ ಪೆರೋಲ್ ಮೇಲೆ ಹೊರಗೆ ಬಂದಿದ್ದ.

ಅರಮನೆ ಮುಂದೆ ಸ್ಟೈಲ್ ನವೀನ ತನ್ನ ಸ್ನೇಹಿತ ಪವನ್ ಹಾಗೂ ಇಬ್ಬರು ಯುವತಿಯೊಂದಿಗೆ ಆಗಸ್ಟ್ 27ರಂದು ಮೈಸೂರಿಗೆ ಆಗಮಿಸಿದ್ದ. ಅಂದು ರಾತ್ರಿ 9.45ರ ಸುಮಾರಿನಲ್ಲಿ ಮೈಸೂರು ಅರಮನೆಯ ವರಹಾ ಗೇಟ್ ಮುಂಭಾಗದ ರಸ್ತೆಯಲ್ಲಿ ಈತ ರೀಲ್ಸ್ ವಿಡಿಯೋ ಮಾಡುತ್ತಿದ್ದಾಗ ಆ ಸ್ಥಳಕ್ಕೆ ಬಿಳಿ ಬಣ್ಣದ ಸ್ಕಾರ್ಪಿಯೋ ಮತ್ತು ಕೆಂಪು ಬಣ್ಣದ ಸ್ಯಾಂಟ್ರೋ ಕಾರು ಬಂದು ನಿಂತಿದೆ. ಸ್ಕಾರ್ಪಿಯೋದಲ್ಲಿದ್ದವರು ನವೀನ ಮತ್ತು ಪವನ್‌ನನ್ನು ಹಿಡಿಯಲು ಹೋದಾಗ ಅವರಿಬ್ಬರು ತಪ್ಪಿಸಿಕೊಂಡು ಓಡಲು ಯತ್ನಿಸಿ ದ್ದಾರೆ. ಈ ವೇಳೆ ಸ್ಯಾಂಟ್ರೋ ಕಾರಿನಿಂದ ಇವರಿಬ್ಬ ರನ್ನು ಗುದ್ದಿದಾಗ ಕೆಳಗೆ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಎರಡೂ ಕಾರುಗಳಲ್ಲಿದ್ದ ಸುಮಾರು 10 ಮಂದಿ ದುಷ್ಕರ್ಮಿಗಳು ಇವರಿಬ್ಬರನ್ನು ಕಾರಿಗೆ ಎತ್ತಿಹಾಕಿ ಕೊಂಡಿದ್ದಾರೆ. ಆ ಮೇಳೆ ನವೀನ್ ಮತ್ತು ಪವನ್, “ಪರಮಿ ಅಣ್ಣ, ನಾನಲ್ಲ, ನನ್ನನ್ನು ಬಿಟ್ಟುಬಿಡಿ” ಎಂದು ಕೂಗಾ ಡಿದ್ದಾರೆ ಎನ್ನಲಾಗಿದೆ. ಇದನ್ನು ಕಂಡ ಅರಮನೆಯ ಗೈಡ್ ಒಬ್ಬರು ಕೆ.ಆರ್. ಠಾಣೆಗೆ ದೂರು ಸಲ್ಲಿಸಿದ್ದಾರೆ. 

ಹೆಂಡ್ತಿ ತಂಗಿಯನ್ನು ಮುಟ್ತಿದ್ದ ಅಪ್ರಾಪ್ತ ಬಾಲಕನ ಕೊಂದು ಬಾಡಿ ಪೀಸ್‌ ಪೀಸ್‌ ಮಾಡಿದ ಆಟೋ ಡ್ರೈವರ್!

ಪೊಲೀಸರು ಬೆನ್ನತ್ತಿದ್ದರೂ ಕೂಡ ಅಪಹರಣಕಾರರು ಸಿಗಲಿಲ್ಲ ಎಂದು ಹೇಳಲಾಗಿದೆ. ಮರುದಿನ ಸಂಜೆ 4.30ರ ವೇಳೆಗೆ ನಂಜನಗೂಡು ತಾಲೂಕು ಗೋಳೂರಿನ ಹುಲ್ಲಹಳ್ಳಿ ನಾಲೆ ಬಳಿ ಮೊದೆಯಲ್ಲಿ ಸ್ಟೈಲ್ ನವೀನ್‌ನ ಶವ ದೊರೆತಿದೆ. ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಅಪರಿಚಿತನ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಸದ್ಯಕ್ಕೆ ಕೊಲೆ ಮಾಡಿದ 8 ಆರೋಪಿಗಳನ್ನು ನಂಜನಗೂಡು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕೊಲೆ ಆರೋಪಿಗಳಾದ ಪುನೀತ್, ಅಭಿಷೇಕ್, ಅಜಿತ್, ರಘು, ಪ್ರಕಾಶ್, ರಾಕೇಶ್, ಸುನೀಲ್ ಕುಮಾರ್, ವಿಜಯ್ ಕುಮಾರ್, ಭರತ್ ಜೈಲಿನಲ್ಲಿದ್ದು ಟಿಕ್‌ಟಾಕ್ ವೀರನ ಕೊಲೆಗೆ ಸುಫಾರಿ ಕೊಟ್ಟವರ ಮಾಹಿತಿ ಇನ್ನೂ ಬಹಿರಂಗವಾಗಬೇಕಿದೆ. 

click me!