* ಅಂಕೋಲಾ ಪೊಲೀಸರು ಯಶಸ್ವಿ ಕಾರ್ಯಾಚರಣೆ
* ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸಿದ ಪೊಲೀಸರು
* 4.47 ಲಕ್ಷ ನಗದು, ಬೈಕ್, ಮೊಬೈಲ್ ಹಾಗೂ ಚೆಕ್ ವಶ
ಅಂಕೋಲಾ(ಡಿ.18): ತೀವ್ರ ಕುತೂಹಲ, ಆತಂಕಕ್ಕೆ ಕಾರಣವಾಗಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ದರೋಡೆ(Robbery) ಪ್ರಕರಣವನ್ನು ಭೇದಿಸುವಲ್ಲಿ ಅಂಕೋಲಾ ಪೊಲೀಸರು(Police) ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಗೋಪನಕೊಪ್ಪದ ನಿವಾಸಿ ಉಮೇಶ ಭೀಮಪ್ಪಾ ಬಂಕಾಪುರ, ಹುಬ್ಬಳ್ಳಿಯ ತಾರಿಹಾಳದ ಪರಶುರಾಮ ವಡ್ಡರ್, ಓರ್ವ ಬಾಲಾಪರಾಧಿಯನ್ನು(Juvenile) ಬಂಧಿಸಲಾಗಿದೆ(Arrest).
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನಾ ಡಿ. ಪೆನ್ನೆಕರ್, ಅಂಕೋಲಾ -ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ(Ankola-Hubballi National Highway) 63ರ ಠಾಕೂರ ಡಾಬಾದ ಬಳಿ ಗುರುವಾರ ಮುಂಜಾನೆ ಬೈಕ್ ಮೇಲೆ ಬಂದ ಅಪರಿಚಿತರ ತಂಡ ಚಲಿಸುತ್ತಿದ್ದ ಕಾರಿನ ಮೇಲೆ ಕಲ್ಲು ಎಸೆದು ಜಖಂಗೊಳಿಸಿತು. ಕಾರು ನಿಲ್ಲಿಸಿದ ವೇಳೆ ಆರೋಪಿಗಳು(Accused) 6 ಲಕ್ಷ ರೂ. ನಗದು, ಮೊಬೈಲ್, ಚೆಕ್ ಹಾಗೂ ವ್ಯವಹಾರದ ಪುಸ್ತಕಗಳನ್ನು ಸುಲಿಗೆ ಮಾಡಿ ನಾಪತ್ತೆಯಾಗಿತ್ತು. ಪ್ರಕರಣದಲ್ಲಿ ನೊಂದ ಬಾಲಚಂದ್ರ ಬನ್ಸಾಲಿ ಹಾಗೂ ಕೇವಲಚಂದ್ ಜೈನ್ ಅವರು ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ, ಕಾರ್ಯಾಚರಣಗೆ ಇಳಿದ ಪೊಲೀಸರು ಸುಂಕಸಾಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರೋಪಿಗಳನ್ನು ಕೇವಲ 24 ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
undefined
Drive Against Drug Menace Bengaluru: ಹೊಸ ವರ್ಷಕ್ಕೆ ನಶೆ ಏರಿಸಲು ಡ್ರಗ್ಸ್ ತಂದವರ ಬಂಧನ!
ಆರೋಪಿತರಿಂದ 4.47 ಲಕ್ಷ ನಗದು, ಬೈಕ್, ಮೊಬೈಲ್ ಹಾಗೂ ಚೆಕ್ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯ ತಂಡದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ ಎಸ್., ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಶೆಟ್ಟಿ, ಪೊಬೆಷನರಿ ಪಿಎಸೈ ಮುಶಾದ್ ಅಹ್ಮದ್ ಸಿಬ್ಬಂದಿಗಳಾದ ಪರಮೇಶ ಎಸ್. ಆಸಿಫ್ ಕುಂಕುರ, ಮಂಜುನಾಥ ಲಕ್ಷ್ಮಾಪುರ, ಸುರೇಶ ಬಳ್ಳೊಳ್ಳಿ, ಗುರುರಾಜ್ ಜಿ. ನಾಯ್ಕ, ಚಾಲಕರಾದ ಸತೀಶ ನಾಯ್ಕ, ಜಗದೀಶ ನಾಯ್ಕ ಪಾಲ್ಗೊಂಡಿದ್ದರು.
ದರೋಡೆ ಪ್ರಕರಣದಲ್ಲಿ ಪಿರ್ಯಾದುದಾರ ಕಾರು ಚಾಲಕನೇ ಮುಖ್ಯ ಆರೋಪಿ. ಈತ ದರೋಡೆಗೆ ಸಂಬಂಧಿಸಿ ಎಲ್ಲ ತಂತ್ರಗಳನ್ನು ರೂಪಿಸಿದ್ದ. ಎರಡು ತಿಂಗಳ ಹಿಂದೆ ದರೋಡೆಗೆ ಯೋಜನೆ ರೂಪಿಸಲಾಗಿತ್ತು. ಪಿರ್ಯಾದಿದಾರರು ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಹಣವನ್ನು ಹುಬ್ಬಳ್ಳಿ ಮಾರ್ಗವಾಗಿ ಒಯ್ಯುತ್ತಿರುವ ಮಾಹಿತಿಯನ್ನು ಚಾಲಕ ಅರಿತು ಕೃತ್ಯ ಎಸಗಿದ್ದ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನಾ ಡಿ. ಪೆನ್ನೆಕರ್ ತಿಳಿಸಿದ್ದಾರೆ.
ಚಿನ್ನದಂಗಡಿಗೆ ಕನ್ನ ಹಾಕಿಸಿದ್ದ ವ್ಯಾಪಾರಿಗಳು! 9 ಮಂದಿ ಸೆರೆ
ಕೋಟ್ಯಂತರ ರುಪಾಯಿ ನಷ್ಟಅನುಭವಿಸಿದ ವ್ಯಾಪಾರಿಗಳು ಸುಪಾರಿ ಕೊಟ್ಟು ಚಿನ್ನಾಭರಣ ಮಳಿಗೆಗಳನ್ನು ದರೋಡೆ ಮಾಡಿಸುವ ದಂಧೆಗೆ ಇಳಿದು ಪೊಲೀಸರ (Police) ಅತಿಥಿಗಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Gold Chain Theft: ಆಸ್ಪತ್ರೇಲಿ ವೃದ್ಧೆಯ ಸರ ಕದ್ದವ 8 ತಿಂಗಳ ಬಳಿಕ ಅರೆಸ್ಟ್
ನಗರದಲ್ಲಿ ಚಿನ್ನಾಭರಣ ಮಳಿಗೆ ಹೊಂದಿದ್ದ ರಾಜಸ್ಥಾನ (Rajasthan) ಮೂಲದ ವ್ಯಾಪಾರಿಗಳಾದ ದೇವರಾಮ್ ಹಾಗೂ ಡವರ್ ಲಾಲ್ ಎಂಬುವರು ಈ ದಂಧೆಗೆ ಪ್ರಯತ್ನಿಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಇವರಲ್ಲದೆ, ಇವರಿಗೆ ಸಾಥ್ ನೀಡಿದ ಮೊಂಬತ್ತಿ ತಯಾರಿಕಾ ಘಟಕದ ಮಾಲೀಕ ಸುನೀಲ್, ದರೋಡೆ ತಂಡದ ಧೀರಜ್, ದಿನೇಶ್, ರಾಜೇಂದ್ರ, ಅಶೋಕ್ ಕುಮಾರ್, ಗೋವರ್ಧನ್ ಸಿಂಗ್ ಹಾಗೂ ಶ್ರೀರಾಮ್ ಪೊಲೀಸರ ಬಂಧನಕ್ಕೆ (Arrest) ಸಿಲುಕಿದ್ದಾರೆ. ಈ ಆರೋಪಿಗಳಿಂದ 450 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ದರೋಡೆ ತಂಡದ ಪ್ರಮುಖ ಆರೋಪಿಗಳಾದ ಸುಗುಣ, ರವೀಂದ್ರ ಪಾಲ್ ಹಾಗೂ ವಿನೋದ್ ಪತ್ತೆಗೆ ತನಿಖೆ ನಡೆದಿದೆ.
ಕೆಲ ದಿನಗಳ ಹಿಂದೆ ಮಕ್ಕಳ ಸ್ಟ್ರೀಟ್‌ನಲ್ಲಿರುವ ಗಣೇಶ್ ಪವಾರ್ ಎಂಬುವರಿಗೆ ಸೇರಿದ ‘ಗಣೇಶ್ ಕಾರ್ಪ್’ ಹೆಸರಿನ ಚಿನ್ನಾಭರಣ ಮಳಿಗೆಗೆ (Jewellery Shop) ರಾತ್ರಿ ವೇಳೆ ಆರೋಪಿಗಳು ಕನ್ನ ಹಾಕಿದ್ದರು. ಈ ಕೃತ್ಯದ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಸಿ.ವಿ.ದೀಪಕ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಎಂ.ಸಿ.ಮಲ್ಲಿಕಾರ್ಜುನ್ ನೇತೃತ್ವದ ತಂಡವು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿತ್ತು.