Living Together: ಮದುವೆಗೆ ಒತ್ತಾಯ ಮಾಡಿದ ಪ್ರೇಯಸಿಯನ್ನೇ ಕೊಂದ ಶಿಕ್ಷಕ

By Kannadaprabha News  |  First Published Dec 18, 2021, 4:57 AM IST

*  ಲಿವಿಂಗ್‌ ಟುಗೆದರ್‌ನಲ್ಲಿ ನೆಲೆಸಿದ್ದ ಪ್ರೇಮಿಗಳು
*  ಹಣದ ವಿಚಾರಕ್ಕೆ ಗಲಾಟೆ
*  ಆರೋಪಿಯನ್ನ ಬಂಧಿಸಿದ ಪೊಲೀಸರು 
 


ಬೆಂಗಳೂರು(ಡಿ.18): ಮದುವೆಗೆ(Marriage) ಒತ್ತಾಯಿಸಿದ ಕಾರಣಕ್ಕೆ ತನ್ನ ಲಿವಿಂಗ್‌ ಟುಗೆದರ್‌(Living Together) ಪ್ರಿಯತಮೆಯನ್ನು ಕೊಂದಿದ್ದ ಯೋಗ ಶಿಕ್ಷಕನೊಬ್ಬನನ್ನು ಯಲಹಂಕ ನಗರ ಉಪ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಉಪ ನಗರದ 3ನೇ ಹಂತದ ನಿವಾಸಿ ಗಂಗಾ (34) ಹತ್ಯೆಗೀಡಾದ(Murder) ದುರ್ದೈವಿ. ಈ ಪ್ರಕರಣ ಸಂಬಂಧ ಮೃತಳ ಪ್ರಿಯಕರ ಸಾಹು ಅಲಿಯಾಸ್‌ ಶ್ಯಾಮ್‌ (27)ನನ್ನು ಪೊಲೀಸರು(Police) ಬಂಧಿಸಿದ್ದಾರೆ(Arrest).

ಮೂರು ದಿನಗಳ ಹಿಂದೆ ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ಆರೋಪಿ, ಗಂಗಾಳ ತಲೆಗೆ ಕಬ್ಬಿಣದ ದೇವರ ವಿಗ್ರಹದಿಂದ ತಲೆಗೆ ಹೊಡೆದಿದ್ದಾನೆ. ಈ ಗಲಾಟೆ ಶಬ್ಧ ಕೇಳಿ ಮನೆ ಮಾಲೀಕರು, ಗಂಗಾಳ ಮನೆಗೆ ಬಂದಿದ್ದಾರೆ. ಆಗ ಆಕೆಯನ್ನು ರಕ್ಷಿಸಿ ನೆರೆಹೊರೆಯವರು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ಚಿಕಿತ್ಸೆ(Treatment) ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಕೃತ್ಯ ಬೆಳಕಿಗೆ ಬಂದ ಕೂಡಲೇ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

Bus And Car Accident: ಕಾರಿನಲ್ಲಿ ಮದ್ವೆಗೆ ಹೊರಟಿದ್ದ ನಾಲ್ವರು ಮಸಣ ಸೇರಿದ್ರು

1 ಲಕ್ಷ ಸಾಲ ತಂದ ಕುತ್ತು: 

ಉಡುಪಿ ಜಿಲ್ಲೆಯ ಮೃತ ಗಂಗಾ, ಯಲಹಂಕ ಸಮೀಪ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಿಯಾಗಿದ್ದಳು. ಮೂರು ವರ್ಷಗಳ ಹಿಂದೆ ಯೋಗ ತರಗತಿಯಲ್ಲಿ ಆಕೆಗೆ ಉತ್ತರ ಕನ್ನಡ(Uttara Kannada) ಜಿಲ್ಲೆ ದಾಂಡೇಲಿಯ ಸಾಹು ಪರಿಚಯವಾಗಿತ್ತು. ಕಾಲ ಕ್ರಮೇಣ ಈ ಗೆಳೆತನವು ಪ್ರೇಮಕ್ಕೆ(Love) ತಿರುಗಿತು.

ತರುವಾಯ ಯಲಹಂಕ ಉಪ ನಗರದ 3ನೇ ಹಂತದಲ್ಲಿ ಒಟ್ಟಿಗೆ ಅವರು ನೆಲೆಸಿದ್ದರು. ಹೀಗಿರುವಾಗ ಪ್ರಿಯಕರನಿಂದ ಆಕೆ 1 ಲಕ್ಷ ಸಾಲ ಪಡೆದಿದ್ದಳು. ಇತ್ತೀಚೆಗೆ ಮದುವೆ ಆಗುವಂತೆ ಗಂಗಾ ಒತ್ತಾಯಿಸುತ್ತಿದ್ದರೂ ಸಾಹು ಆಸಕ್ತಿ ತೋರಿಸಿರಲಿಲ್ಲ. ಇದೇ ವಿಷಯವಾಗಿ ಇಬ್ಬರ ಮಧ್ಯೆ ಮನಸ್ತಾಪವಾಗಿದ್ದು, ಆಗಾಗ್ಗೆ ಅವರು ಜಗಳವಾಡುತ್ತಿದ್ದರು. ಅಂತೆಯೇ ಮಂಗಳವಾರ ಹಣದ ವಿಚಾರವಾಗಿ ಗಂಗಾ ಮತ್ತು ಸಾಹು ಮಧ್ಯೆ ಜಗಳ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೋಪಗೊಂಡ ಗಂಗಾ, ಸಾಹುನನ್ನು ಅವಾಚ್ಯ ಶಬ್ಧಗಳಿಂದ ಬಾಯಿಗೆ ಬಂದಂತೆ ನಿಂದಿಸಿದ್ದಾಳೆ. ಆಗ ಕೆರಳಿದ ಆತ, ಮನೆಯಲ್ಲಿದ್ದ ಕಬ್ಬಿಣ ದೇವರ ವಿಗ್ರಹ ತೆಗೆದುಕೊಂಡು ಗಂಗಾ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡು ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಣ್ಣೆ ಹಾಕಲು ನೂರು ರೂ. ಕೇಳಿದವನ ಕೊಲೆ ಮಾಡಿದ ಗೆಳೆಯ!

ಇತ್ತೀಚೆಗೆ ಮದ್ಯಪಾನ ಮಾಡಲು 100 ಕೇಳಿದವನಿಗೆ ತೂಕ ಮಾಡುವ ಬಟ್‌ನಿಂದ ತಲೆಗೆ ಹೊಡೆದು ಕೊಂದು ಬಳಿಕ ಅಪಘಾತವಾಗಿದೆ(Accident) ಎಂದು ಸುಳ್ಳಿನ ಕತೆ ಹೇಳಿ ತಪ್ಪಿಸಿಕೊಂಡಿದ್ದ ಮಾಂಸದಂಗಡಿ ಕೆಲಸಗಾರನೊಬ್ಬ ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

Lover Commit Suicide: ಪ್ರೇಮಿ ಸಾವಿವ ಸುಳ್ಳು ಸುದ್ದಿಗೆ ಪ್ರೇಯಸಿ ಬಲಿ..!

ಮತ್ತಿಕೆರೆ ನಿವಾಸಿ ಪ್ರತೀಕ್‌.ಎಸ್‌.ಯಾದವ್‌ (28) ಕೊಲೆಯಾದ(Murder) ದುರ್ದೈವಿ. ಈ ಹತ್ಯೆ ಸಂಬಂಧ ಕೇರಳ(Kerala) ಮೂಲದ ಸಮೀಶ್‌ನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ(Arrest). ಕೆಲ ದಿನಗಳ ಹಿಂದೆ ಕೊಡಿಗೇಹಳ್ಳಿ ತಿಂಡ್ಲು ಸರ್ಕಲ್‌ನ ಕರ್ನಾಟಕ ಫೋರ್ಕ್ ಮಟನ್‌ ಸ್ಟಾಲ್‌ನಲ್ಲಿ ಈ ಕೃತ್ಯ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ತನಿಖೆ ಕೈಗೆತ್ತಿಕೊಂಡ ಪೊಲೀಸರು, ಕೂಡಲೇ ಸುಬ್ರಮಣಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಂದು ತಮ್ಮ ಮಾಂಸದ ಅಂಗಡಿಯಲ್ಲಿ ನಡೆದ ಗಲಾಟೆ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ನಂತರ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಸಮೀಶ್‌ನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!