ಕಲಬುರಗಿ: ಪತಿ ಕೊಲೆ, ಪತ್ನಿ ಸೇರಿ ಮೂವರ ಬಂಧನ

By Kannadaprabha News  |  First Published Jul 12, 2023, 10:45 PM IST

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ನೀಲಮ್ಮಾ ಅಲಿಯಾಸ್‌ ಚಂದ್ರಕಲಾ, ಜೇವರ್ಗಿ ತಾಲೂಕಿನ ಬುಟ್ನಾಳ್‌ ಗ್ರಾಮದ ಸುನೀಲ ಅವರಾದ ಮತ್ತು ಸುನೀಲ ಹತ್ತಿಗುಡೂರ ಎಂಬುವವರನ್ನು ಬಂಧಿಸಿದ ಪೊಲೀಸರು. 


ಕಲಬುರಗಿ(ಜು.12):  ಪತಿಯನ್ನು ಕೊಲೆ ಮಾಡಿ ಸಾಕ್ಷಿ ನಾಶ ಪಡಿಸಲು ಯತ್ನಿಸಿದ ಪತ್ನಿ ಸೇರಿ ಮೂವರನ್ನು ಫರಹತಾಬಾದ ಪೊಲೀಸರು ಬಂಧಿಸಿದ್ದಾರೆ. ಅರಳಗುಂಡಿ ಗ್ರಾಮದ ಹಳ್ಳೆಪ್ಪಾ ಎಂಟಮನ್‌ ಎಂಬಾತನನ್ನು ಕೊಲೆ ಮಾಡಿ ಶವವನ್ನು ಇಟಗಾ (ಕೆ) ಗ್ರಾಮದ ಸೇತುವೆ ಕೆಳಗೆ ಮುಳ್ಳುಕಂಠಿಯಲ್ಲಿ ಎಸೆಯಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ನೀಲಮ್ಮಾ ಅಲಿಯಾಸ್‌ ಚಂದ್ರಕಲಾ, ಜೇವರ್ಗಿ ತಾಲೂಕಿನ ಬುಟ್ನಾಳ್‌ ಗ್ರಾಮದ ಸುನೀಲ ಅವರಾದ (28) ಮತ್ತು ಸುನೀಲ ಹತ್ತಿಗುಡೂರ (28) ಎಂಬುವವರನ್ನು ಬಂಧಿಸಿದ್ದಾರೆ.

ಹಿನ್ನೆಲೆ:

Latest Videos

undefined

ಕಳೆದ ಜೂ.29ರಂದು ಇಟಗಾ (ಕೆ) ಗ್ರಾಮದ ಸೇತುವೆ ಕೆಳಗೆ ಮುಳ್ಳುಕಂಠಿಯಲ್ಲಿ 45ರಿಂದ 50 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಸಂಬಂಧ ಫರಹತಾಬಾದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೊಲೆ ಪ್ರಕರಣ ತನಿಖೆಗೆ ನಗರ ಪೊಲೀಸ್‌ ಆಯುಕ್ತ ಆರ್‌.ಚೇತನ್‌, ಉಪ ಪೊಲೀಸ್‌ ಆಯುಕ್ತರಾದ ಆಡೂರು ಶ್ರೀನಿವಾಸಲು, ಚಂದ್ರಪ್ಪ, ಸಬ್‌ ಅರ್ಬನ್‌ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ಗೀತಾ ಬೇನಾಳ ಅವರ ಮಾರ್ಗದರ್ಶನದಲ್ಲಿ ಫರಹತಾಬಾದ ಪೊಲೀಸ್‌ ಠಾಣೆಯ ಪಿಐ ರಾಘವೇಂದ್ರ ಭಜಂತ್ರಿ, ಸಿಬ್ಬಂದಿ ಧರ್ಮಣ್ಣಾ, ವಿಜಯಕುಮಾರ, ರಾಜಕುಮಾರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಬೆಳಗಾವಿ ಜೈನಮುನಿಗೆ ಕರೆಂಟ್‌ ಶಾಕ್‌ ಕೊಟ್ಟು ಕೊಲೆ: ದೇಹ ತುಂಡರಿಸಿ ಗದ್ದೆಗೆ ಬೀಸಾಡಿದರು

ಈ ತಂಡ ತನಿಖೆ ನಡೆಸಿದಾಗ ಹಳ್ಳೆಪ್ಪ ಎಂಟಮನ್‌ ಕಾಣೆಯಾಗಿ 3-4 ದಿನಗಳಾಗಿದ್ದರೂ ಅವರ ಪತ್ನಿ ನೀಲಮ್ಮ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದೇ ಇರುವುದು ಬೆಳಕಿಗೆ ಬಂದಿತ್ತು. ಇದರಿಂದ ಸಂಶಯ ಬಂದು ವಿಚಾರಣೆ ನಡೆಸಿದಾಗ ನೀಲಮ್ಮ ಅವರು ಸುನೀಲ ಹತ್ತಿಗುಡೂರ ಮತ್ತು ಸುನೀಲ ಅವರಾದ ಜೊತೆ ಸೇರಿ ಹಳ್ಳೆಪ್ಪಾ ಕೊಲೆ ಮಾಡಲು ಸಂಚು ರೂಪಿಸಿದ್ದರು.

ಜೂ.28ರಂದು ಯಡ್ರಾಮಿಯಲ್ಲಿ ನಡೆದ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ ಅವರ ಜಯಂತಿ ವೇಳೆ ಸಿಕ್ಕ ಹಳ್ಳೆಪ್ಪನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಜೇವರ್ಗಿ ತಾಲೂಕಿನ ವರ್ಚನಳ್ಳಿ ಸೀಮಾಂತರದ ಹಳ್ಳದ ಹತ್ತಿರ ಹಗ್ಗದಿಂದ ಬಿಗಿದು ಕೊಲೆ ಮಾಡಿ ನಂತರ ಮೃತ ದೇಹವನ್ನು ಇಟಗಾ (ಕೆ) ಗ್ರಾಮದ ಸೇತುವೆ ಕೆಳಗೆ ಮುಳ್ಳುಕಂಠಿಯಲ್ಲಿ ಎಸೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ನೀಲಮ್ಮ, ಸುನೀಲ ಅವರಾದ ಮತ್ತು ಸುನೀಲ ಹತ್ತಿಗುಡೂರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕೊಲೆ ಪ್ರಕರಣ ಭೇದಿಸಿ, ಕೊಲೆ ಆರೋಪಿಗಳನ್ನು ಬಂಧಸಿದ ಫರಹತಾಬಾದ ಪೊಲೀಸ್‌ ಠಾಣೆಯ ಪಿಐ ರಾಘವೇಂದ್ರ ಭಜಂತ್ರಿ, ಸಿಬ್ಬಂದಿಗಳಾದ ಧರ್ಮಣ್ಣಾ, ವಿಜಯಕುಮಾರ, ರಾಜಕುಮಾರ, ಪ್ರಕಾಶ ಮತ್ತು ತಿರುಪತಿ ಅವರ ಕಾರ್ಯವನ್ನು ನಗರ ಪೊಲೀಸ್‌ ಆಯುಕ್ತ ಆರ್‌. ಚೇತನ್‌ ಅವರು ಶ್ಲಾಘಿಸಿದ್ದಾರೆ.

click me!