ಕಳ್ಳನ ತಪ್ಪೊಪ್ಪಿಗೆ ವಿಡಿಯೋ ವೈರಲ್: ಪೊಲೀಸರನ್ನೇ ಬೈಯ್ಯಲು ಶುರು ಮಾಡಿದ ಜನ

Published : Dec 05, 2022, 03:22 PM IST
ಕಳ್ಳನ ತಪ್ಪೊಪ್ಪಿಗೆ ವಿಡಿಯೋ ವೈರಲ್: ಪೊಲೀಸರನ್ನೇ ಬೈಯ್ಯಲು ಶುರು ಮಾಡಿದ ಜನ

ಸಾರಾಂಶ

ಪೊಲೀಸರ ಮುಂದೆ ಕಳ್ಳನೋರ್ವ ಕ್ಷಮೆ ಯಾಚಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಬಳಿಕ ಜನ ಪೊಲೀಸರನ್ನೇ ಬೈಯ್ಯಲು ಶುರು ಮಾಡಿದ್ದಾರೆ.

ಛತ್ತೀಸ್‌ಗಡ: ಪೊಲೀಸರ ಮುಂದೆ ಕಳ್ಳನೋರ್ವ ಕ್ಷಮೆ ಯಾಚಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕದ್ದ ಬಳಿಕ ಪೊಲೀಸರಿಗೆ ಕಳ್ಳನೋರ್ವ ಸಿಕ್ಕಿಬಿದ್ದಿದ್ದಾನೆ. ಆತನನ್ನು ಠಾಣೆಗೆ ಕರೆತಂದು ಪೊಲೀಸರು ಡ್ರಿಲ್ಲಿಂಗ್ ಶುರು ಮಾಡಿದ್ದು, ಈ ವೇಳೆ ಏಕೆ ಕಳ್ಳತನಕ್ಕೆ ಇಳಿದೆ ಎಂದು ಆತನನ್ನು ಕೇಳಿದ್ದಾರೆ. ಈ ವೇಳೆ ಆತ ತಾನು ಕದ್ದ ಹಣವನ್ನು ಬೀದಿ ದನಗಳಿಗೆ ಆಹಾರ ನೀಡುವ ಸಲುವಾಗಿ ಬಳಸಿದೆ. ಅಲ್ಲದೇ ಕೆಲವು ಬಡವರಿಗೆ ಅದರಿಂದ ಬೆಡ್‌ಶಿಟ್ ಖರೀದಿಸಿ ನೀಡಿದೆ ಎಂದು ಆತ ಹೇಳಿಕೊಂಡಿದ್ದಾನೆ. 

ಈತನ ಮಾತು ಕೇಳಿ ಪೊಲೀಸರು ನಗಲು ಶುರು ಮಾಡಿದ್ದಾರೆ. ವಿಡಿಯೋದಲ್ಲಿ ಛತ್ತೀಸ್‌ಗಡದ (Chhattisgarh) ದುರ್ಗ ಪೊಲೀಸ್ ಠಾಣೆಯ ಅಭಿಷೇಕ್ ಪಲ್ಲವ್ (Dr Abhishek Pallava) ಅವರು ಆತನನ್ನು ವಿಚಾರಣೆ ಮಾಡುತ್ತಿದ್ದಾರೆ. ಈ ವೇಳೆ ಆತ ಹೇಳಿದ ಮಾತು ಕೇಳಿ ಪೊಲೀಸರು ಜೋರಾಗಿ ನಕ್ಕಿದ್ದಾರೆ. ಅಷ್ಟೇ ಅಲ್ಲದೇ ಕಳ್ಳ, ತನಗೆ ಕಳ್ಳತನ ಮಾಡುವಾಗ ಖುಷಿ ಆಗುತ್ತಿತ್ತು. ಆದರೆ ನಂತರ ಕದ್ದಿರುವುದಕ್ಕೆ ಬೇಸರವಾಗಿದೆ ಎಂದು ಹೇಳಿಕೊಂಡಿದ್ದಾನೆ. ಕಳವಿನಿಂದ ಎಷ್ಟು ಹಣ ನಿನಗೆ ಸಿಕ್ಕಿತು ಎಂದು ಪೊಲೀಸರು ಕೇಳಿದ್ದು, ಅದಕ್ಕೆ ಆತ 10 ಸಾವಿರ ಸಿಕ್ಕಿದ್ದು, ಆ ಹಣವನ್ನು ಬಡವರಿಗೆ ದಾನ ಮಾಡಿರುವುದಾಗಿ ಆತ ಹೇಳಿದ್ದಾನೆ. ಇತ್ತ ಈ ವಿಡಿಯೋ ನೋಡಿದ ಜನ ಪೊಲೀಸರಿಗೆ ಬೈದು ಕಳ್ಳನನ್ನು ಹೊಗಳಲು ಶುರು ಮಾಡಿದ್ದಾರೆ. 

ನಶೆಯಲ್ಲಿ ಮಲಗಿದ್ದವನ ಜೇಬಿಂದ ₹70 ಸಾವಿರ ಎಗರಿಸಿದ ಚೋರರು!

ಅನೇಕರು ನಿಮಗಿಂತ ಆ ಕಳ್ಳನೇ ವಾಸಿ ಎಂದು ಹೇಳಿದ್ದಾರೆ. ಈತ ಬಡವರಿಗಾಗಿ ಕಳ್ಳತನ ಮಾಡಿದರೆ ಈ ಪೊಲೀಸರು ಬಡವರಿಂದ ಮಾಮೂಲಿ ವಸೂಲಿ ಮಾಡುತ್ತಾರೆ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಈತ ನಲಸಪೊರಾದ ರಾಬಿನ್‌ಹುಡ್ ಎಂದು ಕಳ್ಳನನ್ನು ಕೊಂಡಾಡಿದ್ದಾರೆ. ಈತ ಶ್ರೀಮಂತರಿಂದ ಕಿತ್ತುಕೊಂಡು ಬಡವರಿಗೆ ನೀಡುತ್ತಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಕಳ್ಳನನ್ನು ರಾಕಿಭಾಯ್‌ಗೆ(ಕೆಜಿಎಫ್ ಸಿನಿಮಾ ಹೋಲಿಸಿದ್ದು, ಇವನು ನಿಜವಾದ ಹೀರೋ ರಾಕಿಭಾಯ್ ಎಂದು ಹೇಳಿದ್ದಾರೆ. ಈತ ರಾಜಕಾರಣಿಗಳಿಗಿಂತ 99 ಶೇಕಡಾ ಒಳ್ಳೆಯವನು ಎಂದು ಕಾಮೆಂಟ್ ಮಾಡಿದ್ದಾರೆ. ಅಂತೂ ಇಲ್ಲಿ ಜನ ಕದ್ದ ಕಳ್ಳನನ್ನು ಹೊಗಳಲು ಶುರು ಮಾಡಿದರೆ, ಆತನನ್ನು ಹಿಡಿದ ಪೊಲೀಸರನ್ನು ಬೈಯ್ಯಲು ಶುರು ಮಾಡಿದ್ದಾರೆ.

ಬೆಂಗಳೂರು: ಬೈಕ್‌ ಕಳ್ಳರ ಸುಳಿವು ಕೊಟ್ಟ ಜಿಪಿಎಸ್‌..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ