ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೀರಗೊಂಡನಹಳ್ಳಿಯಲ್ಲಿ 30 ವರ್ಷದ ಆರೋಪಿ ರವಿ 80 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹೊನ್ನಾಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ದಾವಣಗೆರೆ: (ಡಿಸೆಂಬರ್ 5, 2022) - ಜಿಲ್ಲೆಯ ಹೊನ್ನಾಳಿ (Honnali) ತಾಲ್ಲೂಕಿನಲ್ಲಿ 80 ವರ್ಷದ ಒಂಟಿ ವೃದ್ಧೆ ಮೇಲೆ 30ರ ಯುವಕ ಅತ್ಯಾಚಾರ (Rape) ಎಸಗಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೀರಗೊಂಡನಹಳ್ಳಿಯಲ್ಲಿ ಇಂತಹ ಪೈಶಾಚಿಕ ಕೃತ್ಯದ ಘಟನೆ ವರದಿಯಾಗಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಎಸ್. ರವಿ (30) ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ ಪಾಪಿ ಆರೋಪಿಯಾಗಿದ್ದು (Accused), ಕಳೆದ ಶನಿವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಆರೋಪಿ ರವಿ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹೊನ್ನಾಳಿ ಪೊಲೀಸರು (Police) ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿವರ:
ಕಳೆದ ಶನಿವಾರ ಬೆಳ್ಳಂಬೆಳಗ್ಗೆ ಮನೆಯಲ್ಲಿ ಒಂಟಿಯಾಗಿದ್ದ 80 ವರ್ಷದ ವೃದ್ಧೆಯನ್ನು ಗಮನಿಸಿದ ಆರೋಪಿ ಎಸ್. ರವಿ ಮನೆಯೊಳಗೆ ನುಗ್ಗಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇನ್ನು ಮನೆಯ ಅಡುಗೆ ಕೋಣೆಗೆ ವೃದ್ಧೆಯನ್ನು ಎಳೆದೊಯ್ದ ಆರೋಪಿ, ವೃದ್ಧೆ ಪರಿಪರಿಯಾಗಿ ಎಷ್ಟೇ ಬೇಡಿಕೊಂಡ್ರು ಕೂಡ ಆಕೆಯನ್ನು ಬಿಡದ ರವಿ ಪೈಶಾಚಿಕ ಕೃತ್ಯ ಎಸಗಿದ್ದಾನೆ ಎಂದು ಹೊನ್ನಾಳಿ ಪೊಲೀಸರು ತಮ್ಮ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಕೊಂಡಿದ್ದಾರೆ.
ಇದನ್ನು ಓದಿ: Anekal News: ಚಿನ್ನಾಭರಣದ ಆಸೆಗೆ ವೃದ್ಧೆ ಕೊಲೆ ಮಾಡಿ ಶವ ವಾರ್ಡ್‌ರೋಬ್‌ನಲ್ಲಿಟ್ಟ ಪಾಪಿ ಮಹಿಳೆ..!
ಒಂಟಿಯಾಗಿ ಜೀವನ ನಡೆಸುತ್ತಿದ್ದ ವೃದ್ದೆಯನ್ನು ಗಮನಿಸಿ ಕೃತ್ಯ..!
20 ವರ್ಷಗಳ ಹಿಂದೆ ವೃದ್ಧೆಯ ಪತಿ ಮೃತಪಟ್ಟಿದ್ದು, ಹಾಗೂ ಸಂತ್ರಸ್ಥೆಗೆ ಮಕ್ಕಳು ಸಹ ಇಲ್ಲ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಆಕೆ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಹಾಗೂ, ವೃದ್ಧೆ ಕೂಲಿ ಮಾಡುತ್ತಾ ತನ್ನ ಜೀವನದ ಬಂಡಿ ಸಾಗಿಸುತ್ತಿದ್ದರು, ಇದನ್ನು ಗಮನಿಸಿದ ಆರೋಪಿ ಎಸ್. ರವಿ 80 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಇನ್ನು, ಈ ಕೃತ್ಯವನ್ನು ಗಮನಿಸಿದ ಸ್ಥಳೀಯರು ವೃದ್ಧೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೊನ್ನಾಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಲ್ಲಿನ ಸಿಪಿಐ ಸಿದ್ದನಗೌಡ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆನೇಕಲ್‌ನಲ್ಲಿ 80 ವರ್ಷದ ಮಹಿಳೆ ಕೊಲೆ
ಬೆಂಗಳೂರು ಹೊರವಲಯದಲ್ಲಿ ಇತ್ತೀಚೆಗಷ್ಟೇ 80 ವರ್ಷದ ಪಾರ್ವತಮ್ಮ ಅವರನ್ನು ಮುಸ್ಲಿಂ ಮಹಿಳೆಯೊಬ್ಬರು ಕೊಲೆ ಮಾಡಿ ವೃದ್ಧೆಯ ಮೃತದೇಹವನ್ನು ಆಕೆಯ ನಿವಾಸದ ವಾರ್ಡ್‌ರೋಬ್‌ನಲ್ಲಿಟ್ಟು ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಆನೇಕಲ್ ತಾಲೂಕಿನ ನೆರಳೂರು ಬಳಿ ಈ ಕೊಲೆ ನಡೆದಿದ್ದು, ಮುಸ್ಲಿಂ ಮಹಿಳೆಯೊಬ್ಬರು ಕೃತ್ಯವೆಸಗಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಚಿನ್ನಾಭರಣದ ಆಸೆಗಾಗಿ ಈ ಕೃತ್ಯ ನಡೆಸಲಾಗಿದೆ ಎಂದೂ ಶಂಕೆ ವ್ಯಕ್ತಪಡಿಸಿದ್ದಾರೆ. 80 ವರ್ಷ ವಯಸ್ಸಿನ ಪಾರ್ವತಮ್ಮ ತನ್ನ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದರು. ಆಕೆಯನ್ನು ತನ್ನ ಮನೆಗೆ ಕರೆಸಿಕೊಂಡು ಈ ಕೃತ್ಯವೆಸಗಿ ಆರೋಪಿ ಮಹಿಳೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Mumbai News: ಮಹಿಳೆಯ ಖಾಸಗಿ ಅಂಗವನ್ನು ಸಿಗರೇಟ್‌ನಿಂದ ಸುಟ್ಟು, ಕಾಮುಕರಿಂದ ಗ್ಯಾಂಗ್‌ರೇಪ್..!
ಕಳೆದ 4 ದಿನಗಳ ಹಿಂದೆ ಅಜ್ಜಿಯನ್ನು ಮುಸ್ಲಿಂ ಮಹಿಳೆ ತನ್ನ ಮನೆಗೆ ಕರೆದಿದ್ದರು. ಬಳಿಕ ಅಜ್ಜಿಯನ್ನು ಹುಡುಕಾಡಿದ್ದರೂ ಸಹ ಮನೆಯವರಿಗೆ ಆಕೆ ಸಿಕ್ಕಿರಲಿಲ್ಲ. ಇನ್ನು, ಕೊಲೆ ಮಾಡಿ ಒಂದು ದಿನದ ಬಳಿಕ ಮುಸ್ಲಿಂ ಮಹಿಳೆ ಮನೆಯಿಂದ ಎಸ್ಕೇಪ್ ಆಗಿದ್ದು, ಅಜ್ಜಿ ಹಾಗೂ ಆರೋಪಿ ಮಹಿಳೆ ಇಬ್ಬರೂ ಕಾಣದ ಹಿನ್ನೆಲೆ ಅಜ್ಜಿಯ ಮನೆಯವರು ಮುಸ್ಲಿಂ ಮಹಿಳೆ ವಾಸವಿದ್ದ ಮನೆಯ ಬೀಗ ತೆಗೆಸಿದ್ದಾರೆ. ನಂತರ ಆ ಮನೆಯಲ್ಲಿ ಹುಡುಕಾಡಿದ ನಂತರ ವಾರ್ಡ್‌ರೋಬ್‌ನಲ್ಲಿ ಶವ ದೊರೆತಿತ್ತು. ಈ ಸಂಬಂಧ ಆನೇಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈಗ, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಲ್ಲಿ 80ರ ವೃದ್ಧೆ ಮೇಲೆ ಅತ್ಯಾಚಾರ ನಡೆದಿರುವ ವರದಿಯಾಗಿದೆ. ಒಟ್ಟಾರೆ, ಹಿರಿಯ ನಾಗರಿಕರ ಮೇಲೆ ಇಂತಹ ದುಷ್ಕೃತ್ಯ ನಡೆಸುತ್ತಿರುವುದು ಆಘಾತಕಾರಿಯಾಗಿದ್ದು, ಇಂತಹವರಿಗೆ ಹೆಚ್ಚಿನ ಭದ್ರತೆ ನೀಡಬೇಕಾಗಿದೆ. ಹಾಗೂ ಸರ್ಕಾರವೂ ಇಂತಹ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ನಡೆಸಬೇಕಿದೆ.
ಇದನ್ನೂ ಓದಿ: Udupi: 80 ವಯಸ್ಸಿನ ಅಜ್ಜಿಯ ಅತ್ಯಾಚಾರ ಮಾಡಿದವರಿಗೆ ಕಠಿಣ ಶಿಕ್ಷೆ: ಉಡುಪಿ ನ್ಯಾಯಾಲಯ ಆದೇಶ