ಪ್ರತಿನಿತ್ಯ ಉದ್ಯಮ ಹಾಗೂ ಕೌಟುಂಬಿಕ ವಿಚಾರದಲ್ಲಿ ಉಪಟಳ ನೀಡುತ್ತಿದ್ದಾನೆ ಎಂದು ಸ್ವಂತ ಮಗನನ್ನೇ ಉದ್ಯಮಿ ತಂದೆ ಕೊಲೆ ಮಾಡಿಸಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹುಬ್ಬಳ್ಳಿ (ಡಿ.5): ಖ್ಯಾತ ಉದ್ಯಮಿಯ ಕುಕೃತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ. ಇವರು ಕೊಲೆ ಮಾಡಿದ್ದು ಬೇರೆ ಯಾರನ್ನೂ ಅಲ್ಲ. ತಾನು ಹೆತ್ತು ಹೊತ್ತು, ಸಾಕಿ ಸಲಹಿದ ಮಗನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ. ಅದಯ ಕೂಡ ಮಗನ ಉಪಟಳ ತಾಳಲಾರದೇ ಕೊಲೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮೃತಪಟ್ಟ ವ್ಯಕ್ತಿ ನಿಖಿಲ್ ಜೈನ್ (30) ಆಗಿದ್ದಾನೆ. ಇನ್ನು ಘಟನೆಯ ವಿವರಕ್ಕೆ ಬರುವುದಾದರೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಹಿಂದೆ ಮೃತನ ಸಹೋದರ ಬಂದು ತನ್ನ ಅಣ್ಣ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದನು. ಈ ಕುರಿತು ಅವರ ತಂದೆ ಭರತ್ ಜೈನ್ ಕೂಡ ಮಗ ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಹೈ ಡ್ರಾಮಾ ಮಾಡಿದ್ದರು. ಈ ಕುರಿತು ಶನಿವಾರ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಚುರುಕು ಮಾಡಿದ್ದರು. ಈ ಕೊಲೆಯಾದ ನಿಖಿಲ್ ಜೈನ್ ಮಾಡುತ್ತಿದ್ದ ಚಟುವಟಿಕೆಗಳನ್ನು ಗಮನಿಸಿದ ಪೊಲೀಸರಿಗೆ ಕಾಣೆಯಾದ ವ್ಯಕ್ತಿಯ ತಂದೆ ಭರಜ್ ಜೈನ್ ಮೇಲೆ ಅನುಮಾನ ಬಂದಿದೆ.
Belagavi: ಪತ್ನಿಯೊಂದಿಗೆ ಅಕ್ರಮ ಸಂಬಂಧ ಸಂಶಯಕ್ಕೆ ಅಣ್ಣನನ್ನೇ ಕೊಂದ ತಮ್ಮ
ಸುಪಾರಿ ನೀಡಿದ್ದಾಗಿ ಒಪ್ಪಿಕೊಂಡ ತಂದೆ: ಪೊಲೀಸರು ಕಾಣೆಯಾದ ವ್ಯಕ್ತಿಯ ತಂದೆ ಭರತ್ ಜೈನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಸ್ಥಳೀಯ ಹಂತಕರಿಗೆ ತನ್ನ ಮಗನನ್ನೇ ಕೊಲೆ ಮಾಡಲು ಸುಪಾರಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. ತಂದೆಯ ಹೇಳಿಕೆಯ ಮೇಲೆ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ. ತಾಲೂಕಿನ ದೇವರಗಿಡಿಹಾಳ ಗ್ರಾಮದಲ್ಲಿನ ಭರತ್ ಜೈನ್‌ಗೆ ಸೇರಿದ ತೋಟದ ಮನೆಯಲ್ಲಿ ಮಗನ ಮೃತ ದೇಹ ಪತ್ತೆಯಾಗಿದೆ. ಈ ಮೃತದೇವಹವನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕೊಲೆ ಪ್ರಕರಣವನ್ನು ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಕೇವಲ 48 ಗಂಟೆಗಳಲ್ಲಿ ಬೇಧಿಸಿದ್ದಾರೆ.