ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ 52,800 ರು.ಗಳನ್ನು ಹಾಕಿ ಬಂದಿದ್ದ ಹಣವನ್ನು ಅಪರಿಚಿತ ವ್ಯಕ್ತಿಯೊಬ್ಬರು ತೆಗೆದುಕೊಂಡು ಹೋದ ಘಟನೆ ನಗರದ ಪಿಬಿ ರಸ್ತೆಯ ಐಸಿಐಸಿಐ ಬ್ಯಾಂಕ್‌ನ ಎಟಿಎಂನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದಾವಣಗೆರೆ (ಜು.14) : ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ 52,800 ರು.ಗಳನ್ನು ಹಾಕಿ ಬಂದಿದ್ದ ಹಣವನ್ನು ಅಪರಿಚಿತ ವ್ಯಕ್ತಿಯೊಬ್ಬರು ತೆಗೆದುಕೊಂಡು ಹೋದ ಘಟನೆ ನಗರದ ಪಿಬಿ ರಸ್ತೆಯ ಐಸಿಐಸಿಐ ಬ್ಯಾಂಕ್‌ನ ಎಟಿಎಂನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಗರದ ಕೆಬಿ ಬಡಾವಣೆಯ ದಕ್ಷಿತ್ ಎಂಟರ್ ಪ್ರೈಸಸ್(ಏರ್‌ಟೆಲ್ ಡಿಟಿಎಚ್) ಸೇಲ್ಸ್ ಮತ್ತು ಸವೀರ್‍ಸ್ ಪಾರ್ಟನರ್ಸ್ನ ನೌಕರ ಎಸ್.ರಾಘವೇಂದ್ರ ಜೂ.29ರಂದು ತಮ್ಮ ಕಚೇರಿಯ ಒಟ್ಟು 52,800 ರು.ಗಳನ್ನು ಪಿಬಿ ರಸ್ತೆಯ ಐಸಿಐಸಿಐ ಬ್ಯಾಂಕ್ ಎಟಿಎಂನಲ್ಲಿ ಜಮಾ ಮಾಡಿದ್ದರು. ಹಣ ಜಮಾ ಮಾಡಿದ ನಂತರ ಎಟಿಎಂನಿಂದ ಹೊರ ಬಂದು 10 ನಿಮಿಷಗಳ ನಂತರ ತಮ್ಮ ಮೊಬೈಲ್‌ನಲ್ಲಿ ಹಣ ಜಮಾ ಮಾಡಿದ ಸಂದೇಶ ಬರದ ಕಾರಣ ವಾಪಸ್ ಎಟಿಎಂಗೆ ಹೋಗಿ, ಪರಿಶೀಲಿಸಿದಾಗ ಅಲ್ಲಿನ ಮಿಷಿನ್‌ನಲ್ಲಿ ಹಣ ಇರಲಿಲ್ಲ.
ತಮಿಳುನಾಡು ಎಟಿಎಂ ದರೋಡೆ ಪ್ರಕರಣ, ಆರೋಪಿಗಳು ಕೋಲಾರದಲ್ಲಿ ಅರೆಸ್ಟ್!
ಮರುದಿನ ಬೆಳಗ್ಗೆಯೇ ಎಸ್.ರಾಘವೇಂದ್ರ ಐಸಿಐಸಿಎ ಬ್ಯಾಂಕ್‌ಗೆ ಹೋಗಿ, ವಿಚಾರಿಸಿದಾಗ ತಮ್ಮ ಕಂಪನಿ ಹೆಸರಿಗೆ ಹಣ ಜಮಾ ಆಗಿಲ್ಲವೆಂಬುದು ಗೊತ್ತಾಗಿದೆ. ಎಟಿಎಂನಿಂದ ಹೊರ ಬಂದ ನಂತರ ಅದೇ ಎಟಿಎಂಗೆ ಬಂದ ಯಾರೋ ವ್ಯಕ್ತಿ 52,800 ರು.ಗಳನ್ನು ತೆಗೆದುಕೊಂಡು ಹೋಗಿದ್ದಾರೆಂಬುದು ರಾಘವೇಂದ್ರಗೆ ಮನವರಿಕೆಯಾಗಿದೆ. ತಕ್ಷಣ ಬ್ಯಾಂಕ್‌ನ ಎಟಿಎಂನಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿ ಗಮನಿಸಿದಾಗ ಬರ್ಮುಡಾ ಹಾಗೂ ಟಿ-ಶರ್ಚ್ ಧರಿಸಿ, ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬರು ತಮ್ಮ ಕಂಕುಳಲ್ಲಿ ಪ್ಲಾಸ್ಟಿಕ್ ಕವರ್ ಇಟ್ಟುಕೊಂಡು, ಎಟಿಎಂ ಒಳಗೆ ಬಂದ ದೃಶ್ಯ ಗಮನಿಸಿದ್ದಾರೆ.
Asianet Suvarna FIR: ಸಿನಿಮಾ ಸ್ಟೈಲ್‌ನಲ್ಲಿ ಎಟಿಎಂ ದೋಚಿದ ಲವರ್ಸ್, ಪ್ಲಾನ್ ಹೇಗಿತ್ತು ನೋಡಿ..!
ಎಟಿಎಂನಲ್ಲಿ ಹಣ ಬಿಡಿಸಿಕೊಳ್ಳಲು ಬಂದಿದ್ದ ವ್ಯಕ್ತಿಯ ಕೈಗೆ ಹಣದ ಕಂತೆ ಬರುವುದು ಗೊತ್ತಾಗಿದೆ. ಇದು ರಾಘವೇಂದ್ರ ತಮ್ಮ ಕಂಪನಿಗೆ ಪಾವತಿಸಲು ಹಾಕಿದ್ದ ಹಣವೇ ಅಥವಾ ಎಟಿಎಂಗೆ ಬಂದಿದ್ದ ವ್ಯಕ್ತಿ ಅಲ್ಲಿ ಬಿಡಿಸಿಕೊಂಡ ಆತನ ದುಡ್ಡೇ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ಆಕಸ್ಮಾತ್ ಬೇರೆ ಯಾವುದೇ ಖಾತೆಯಿಂದ ಆ ಸಮಯದಲ್ಲಿ ಹಣ ಬಿಡಿಸಿಕೊಂಡರೂ ಯಾರೆಂಬುದು ಗೊತ್ತಾಗುತ್ತದೆ. ಅಲ್ಲದೇ, ಅದು ಅಪರಿಚಿತ ವ್ಯಕ್ತಿಯ ಹಣ ಅಲ್ಲದಿದ್ದರೆ ರಾಘವೇಂದ್ರರಿಗೆ ಸೇರಿದ ಹಣವೆಂಬುದು ಸ್ಪಷ್ಟವಾಗಲಿದೆ. ಈ ಬಗ್ಗೆ ರಾಘವೇಂದ್ರ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಅಲ್ಲದೇ, ಎಟಿಎಂನಲ್ಲಿ ಹಣ ಬಿಡಿಸಿಕೊಂಡ ವ್ಯಕ್ತಿಯ ಸುಳಿವು ಯಾರಿಗಾದರೂ ಸಿಕ್ಕಲ್ಲಿ ತಕ್ಷಣವೇ ಎಸ್.ರಾಘವೇಂದ್ರ(ಮೊಃ99011-20603)ಗೆ ಸಂಪರ್ಕಿಸುವಂತೆ ದೂರುದಾರ ಮನವಿ ಮಾಡಿದ್ದಾರೆ.