Kodagu news: ಹಾರಂಗಿ ಡ್ಯಾಂ ಬಳಿ ಸೇಲ್ಫಿ ತೆಗೆದುಕೊಳ್ಳುವ ವೇಳೆ ನದಿಗೆ ಬಿದ್ದಿದ್ದ ಯುವಕನ ಶವ ಪತ್ತೆ

By Ravi Janekal  |  First Published Aug 4, 2023, 1:34 PM IST

ಹಾರಂಗಿ ಡ್ಯಾಂ ಬಳಿ ಸೇಲ್ಫಿ ತೆಗೆದುಕೊಳ್ಳುವ ವೇಳೆ ನದಿಗೆ ಬಿದ್ದು ನಾಪತ್ತೆಯಾದ ಪ್ರವಾಸಿಗನ ಮೃತದೇಹ ಸೇತುವೆ ಸಮೀಪದಲ್ಲೇ ಪತ್ತೆಯಾಗಿದೆ. ಗುರುವಾರ  ಸಂಜೆ ವೇಳೆ  ಸೆಲ್ಪಿ ತೆಗೆಯಲು ಮುಂದಾದ  ಸಂದರ್ಭ ನೀರು ಪಾಲಾಗಿದ್ದ ಪ್ರವಾಸಿಗ ಸಂದೀಪ್


ಕೊಡಗು (ಆ.4) : ಹಾರಂಗಿ ಡ್ಯಾಂ ಬಳಿ ಸೇಲ್ಫಿ ತೆಗೆದುಕೊಳ್ಳುವ ವೇಳೆ ನದಿಗೆ ಬಿದ್ದು ನಾಪತ್ತೆಯಾದ ಪ್ರವಾಸಿಗನ ಮೃತದೇಹ ಸೇತುವೆ ಸಮೀಪದಲ್ಲೇ ಪತ್ತೆಯಾಗಿದೆ. ಗುರುವಾರ  ಸಂಜೆ ವೇಳೆ  ಸೆಲ್ಪಿ ತೆಗೆಯಲು ಮುಂದಾದ  ಸಂದರ್ಭ ನೀರು ಪಾಲಾಗಿದ್ದ ಸಂದೀಪ್.  ತಡರಾತ್ರಿವರೆಗೆ ನಡೆದಿದ್ದ ಪತ್ತೆ ಕಾರ್ಯಾಚರಣೆ ಆದರೆ ಶವ ಪತ್ತೆ ಆಗದ ಕಾರ್ಯಾಚರಣೆ ನಿಲ್ಲಿಸಿದ್ದರು. ಇಂದು ಶುಕ್ರವಾರ ಬೆಳಗ್ಗೆ ಅಗ್ನಿಶಾಮಕ ದಳ, ದುಬಾರೆ ರಾಫ್ಟಿಂಗ್ ತಂಡದಿಂದ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಸಂದೀಪ್ ಶವ ಸೇತುವೆ ಸಮೀಪದಲ್ಲಿ ಪತ್ತೆಯಾಗಿದೆ.

 ಬ್ರೇಕ್‌ ಫೇಲ್‌: ಶರಾ​ವತಿ ಹಿನ್ನೀ​ರಿಗೆ ಬಿದ್ದ 10 ಚಕ್ರ​ಗಳ ಲಾರಿ

Tap to resize

Latest Videos

undefined

ಸಾಗರ: ತಾಲೂಕಿನ ಶರಾವತಿ ಹಿನ್ನೀರು ಭಾಗದ ಸಿಗಂದೂರು ಸೇತುವೆ ಕಾಮಗಾರಿಗೆ ಅಂಬಾರಗೊಡ್ಲು ಕಡೆಯಿಂದ ಜಲ್ಲಿ ತುಂಬಿಕೊಂಡು ಲಾಂಚ್‌ಗೆ ಹತ್ತಿಸಲು ಹೋಗುತ್ತಿದ್ದ 10 ಚಕ್ರದ ಲಾರಿ ಬ್ರೇಕ್‌ ವಿಫಲವಾಗಿ ನೀರಿಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.

ಹಾರಂಗಿ ಡ್ಯಾಂ ಬಳಿ ಸೆಲ್ಫೀ ತೆಗೆವಾಗ ನದಿಗೆ ಬಿದ್ದ ಪ್ರವಾಸಿಗ !

ಸಿಗಂದೂರು ಬದಿಯಲ್ಲಿ ನಡೆಯುತ್ತಿದ್ದ ಸೇತುವೆ ಕಾಮಗಾರಿಗೆ ಜಲ್ಲಿ ತುಂಬಿಕೊಂಡು ಅಂಬಾರಗೊಡ್ಲು ಕಡೆಯಿಂದ ಹೊರಟಿದ್ದ 10 ಚಕ್ರದ ಲಾರಿಯನ್ನು ಹಿಮ್ಮುಖವಾಗಿ ಲಾಂಚ್‌ಗೆ ಹತ್ತಿಸುವ ಪ್ರಯ​ತ್ನ ನಡೆಯು​ತ್ತಿತ್ತು. ಈ ವೇಳೆ ಬ್ರೇಕ್‌ ವಿಫಲವಾಗಿ ಲಾರಿಯು ಶರಾವತಿ ಹಿನ್ನೀರಿಗೆ ಜಾರಿದೆ. ಅಪಾಯದ ಸೂಚನೆ ಅರಿತ ಚಾಲಕ ಕೂಡಲೇ ಹೊರಕ್ಕೆ ಹಾರಿ ಬಚಾವಾಗಿದ್ದಾನೆ. ಲಾರಿಯ 4 ಮೀಟರಿಗೂ ಹೆಚ್ಚು ಭಾಗ ಹಿನ್ನೀರಿನಲ್ಲಿ ಬಿದ್ದಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸೇತುವೆ ಕಾಮಗಾರಿ ಮಾಡುತ್ತಿರುವ ಡಿಬಿಎಲ್‌ ಕಂಪೆನಿಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಸಿಬ್ಬಂದಿಗೆ ಲಾರಿಯನ್ನು ನೀರಿನಿಂದ ಮೇಲಕ್ಕೆತ್ತುವ ಕುರಿತು ಮಾರ್ಗದರ್ಶನ ನೀಡಿದರು ಎಂದು ತಿಳಿದುಬಂದಿದೆ.

 

ನಂದಿ ಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರ ದಂಡು: ಟ್ರಾಫಿಕ್‌ ಕಿರಿಕಿರಿ

click me!