Crime news: ಜ್ಯುವೆಲರಿ ಅಂಗಡಿ ಬಾಗಿಲು ಮುರಿದು ಕಳ್ಳತನ: ನಾಲ್ವರು ಆರೋಪಿಗಳ ಬಂಧನ

By Kannadaprabha News  |  First Published Aug 4, 2023, 12:09 PM IST

  ಜ್ಯುವೆಲರಿ ಅಂಗಡಿಯ ಕಳ್ಳತನ ಮಾಡಿದ ನಾಲ್ವರು ಆರೋಪಿಗಳನ್ನು ಗ್ರಾಮೀಣ ಠಾಣೆಯ ಸಿಪಿಐ, ಗುತ್ತಲ ಪೊಲೀಸ್‌ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, 10.5 ಗ್ರಾಂ ಚಿನ್ನ ಹಾಗೂ 4 ಕೆಜಿಗೂ ಅಧಿಕ ಬೆಳ್ಳಿಯ ಆಭರಣ ವಶಪಡಿಸಿಕೊಂಡಿದ್ದಾರೆ.


ಗುತ್ತಲ (ಆ.4) :  ಜ್ಯುವೆಲರಿ ಅಂಗಡಿಯ ಕಳ್ಳತನ ಮಾಡಿದ ನಾಲ್ವರು ಆರೋಪಿಗಳನ್ನು ಗ್ರಾಮೀಣ ಠಾಣೆಯ ಸಿಪಿಐ, ಗುತ್ತಲ ಪೊಲೀಸ್‌ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, 10.5 ಗ್ರಾಂ ಚಿನ್ನ ಹಾಗೂ 4 ಕೆಜಿಗೂ ಅಧಿಕ ಬೆಳ್ಳಿಯ ಆಭರಣ ವಶಪಡಿಸಿಕೊಂಡಿದ್ದಾರೆ.

ಸಮೀಪದ ಹೊಸರಿತ್ತಿ ಗ್ರಾಮದ ನಿಶಾ ಅನಿಲ್‌ ಶೇಟ್‌ ಎಂಬುವವರ ಜ್ಯುವೆಲರಿ ಅಂಗಡಿಯ ಬಾಗಿಲ (ಶೆಟ್ರಸ್‌)ನ್ನು ಮುರಿದು ಅಂಗಡಿಯಲ್ಲಿನ ಸುಮಾರು 4 ಕೆಜಿಗೂ ಅಧಿಕ ತೂಕದ ಬೆಳ್ಳಿಯ ಆಭರಣ, ರಿಪೇರಿಗೆ ಕೊಟ್ಟಹಳೆಯ ಬೆಳ್ಳಿಯ ಸಾಮಗ್ರಿಗಳು, ಬಂಗಾರದ ಆಭರಣ ಹಾಗೂ .80 ಸಾವಿರ ಸೇರಿ ಒಟ್ಟು 3 ಲಕ್ಷಕ್ಕೂ ಅಧಿಕ ಮೊತ್ತದ ಕಳ್ಳತನವಾದ ಬಗ್ಗೆ ಅಂಗಡಿ ಮಾಲೀಕರು ದೂರು ದಾಖಲಿಸಿದ್ದರು.

Latest Videos

undefined

Ballari: ಬಂಗಾರದ ಅಂಗಡಿಯಲ್ಲಿ ಕಳ್ಳತನ: ಕ್ಷಣಾರ್ಧದಲ್ಲಿ ನಡೆದ ಘಟನೆಗೆ ಕಂಗಾಲಾದ ಮಾಲೀಕ!

ಘಟನೆ ಕುರಿತಂತೆ ಪೊಲೀಸ್‌ ಅಧೀಕ್ಷಕ ಡಾ. ಶಿವಕುಮಾರ ಗುಣಾರೆ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿ. ಗೋಪಾಲ, ಡಿವೈಎಸ್ಪಿ ಶಿವಾನಂದ ಚಲವಾದಿ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ಗ್ರಾಮೀಣ ಠಾಣೆಯ ಸಿಪಿಐ ಕೆ. ನಾಗಮ್ಮ ಹಾಗೂ ಪಿಎಸ್‌ಐ ಶಂಕರಗೌಡ ಪಾಟೀಲ ದೂರು ದಾಖಲಾದ 11 ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಲ್ಲಿ ಒಬ್ಬ ದೂರುದಾರಳಾದ ನಿಶಾ ಶೇಟ್‌ ಅವರ ಸಹೋದರನು ಭಾಗಿಯಾಗಿರುವುದು ಅಚ್ಚರಿಯಾಗಿದೆ. ಹೊಸರಿತ್ತಿಯ ಶ್ರೀಕಾಂತ ಆನ್ವೇಕರ (32), ಮುತ್ತಪ್ಪ ಹರಿಜನ (19), ನಿಂಗರಾಜ ಮೇಗಳಮನಿ (19) ಹಾಗೂ ಉಮೇಶ ಹರಿಜನ (17) ಆರೋಪಿಗಳು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿತರಿಂದ .1,96,600 ಮೌಲ್ಯದ 4836 ಗ್ರಾಂ ಬೆಳ್ಳಿಯ ಆಭರಣ ಹಾಗೂ .28 ಸಾವಿರ ಮೌಲ್ಯದ 10.5 ಗ್ರಾಂ ಬಂಗಾರದ ಆಭರಣವನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

Bengaluru crime: ಗೃಹಿಣಿಗೆ ₹22 ಲಕ್ಷ, 960 ಗ್ರಾಂ ಚಿನ್ನ ಊಬರ್‌ ಚಾಲಕ ವಂಚನೆ

ಕಾರ್ಯಾಚರಣೆಯಲ್ಲಿ ಸಿಪಿಐ ಕೆ. ನಾಗಮ್ಮ ಹಾಗೂ ಪಿಎಸ್‌ಐ ಶಂಕರಗೌಡ ಪಾಟೀಲ, ಎಎಸ್‌ಐ ಬಿ.ವೈ. ಚಳಕೇರಿ, ಬಿ.ಎಂ. ರಾಜೇಸಾಬನವರ, ಪೇದೆಗಳಾದ ಸುರೇಶ ವಡ್ಡರ, ಗುಡ್ಡಪ್ಪ ಹಳ್ಳೂರ, ಬಸವರಾಜ ಹರಿಜನ, ವೀರಭದ್ರಪ್ಪ ಮೆಣಸಿನಕಾಯಿ, ಹರೀಶ ಕರ್ಜಗಿ, ಮಂಜುನಾಥ ಕಡಕೋಳ ಇದ್ದರು. ಇವರ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶಿವಕುಮಾರ ಶ್ಲಾಘಿಸಿದ್ದಾರೆ.

click me!