ಸ್ಪಾರ್ಕ್ ಕ್ಯಾಂಡಲ್‌ ಅಗ್ನಿ ಅವಘಡ: ಪರವಾನಗಿ ಇಲ್ಲದೆ ಚಟುವಟಿಕೆ, ಅಧಿಕಾರಿಗಳ ನಿರ್ಲಕ್ಷ್ಯ

By Kannadaprabha News  |  First Published Aug 4, 2023, 12:24 PM IST

  ಸ್ಥಳೀಯ ಮಾರುತಿ ನಗರದ ಬಾಡಿಗೆ ಕಟ್ಟಡದಲ್ಲಿ ವಿN್ನೕಶ್ವರ ಸ್ಪಾರ್ಕಲ್ಸ್‌ ಮತ್ತು ಪಾರ್ಟಿ ಪೂಪರ್‌ ಕೇಂದ್ರದಲ್ಲಿ ಮಂಗಳವಾರ ಜರುಗಿದ ಅಗ್ನಿಅವಘಡಕ್ಕೆ ಸ್ಥಳೀಯ ನಗರಸಭೆ ಹಾಗೂ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ.


ರಾಣಿಬೆನ್ನೂರು (ಆ.4) :  ಸ್ಥಳೀಯ ಮಾರುತಿ ನಗರದ ಬಾಡಿಗೆ ಕಟ್ಟಡದಲ್ಲಿ ವಿಘ್ನೇಶ್ವರ್ ಸ್ಪಾರ್ಕಲ್ಸ್‌ ಮತ್ತು ಪಾರ್ಟಿ ಪೂಪರ್‌ ಕೇಂದ್ರದಲ್ಲಿ ಮಂಗಳವಾರ ಜರುಗಿದ ಅಗ್ನಿಅವಘಡಕ್ಕೆ ಸ್ಥಳೀಯ ನಗರಸಭೆ ಹಾಗೂ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ.

ಜನವಸತಿ ಪ್ರದೇಶದಲ್ಲಿ ವಿN್ನೕಶ್ವರ ಸ್ಪಾರ್ಕಲ್ಸ್‌ ಮತ್ತು ಪಾರ್ಟಿ ಪೂಪರ್‌ ಕೇಂದ್ರದವರು ಅನಧಿಕೃತವಾಗಿ ಸಿಡಿಮದ್ದು ತಂದು ಸ್ಪಾರ್ಕ್ ಕ್ಯಾಂಡಲ್‌ಗಳನ್ನು ತಯಾರಿಸುತ್ತಿದ್ದರು. ಇವರ ಬಳಿ 25ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ತಾವು ತಯಾರಿಸಿದ ಸ್ಪಾರ್ಕ್ ಕ್ಯಾಂಡಲ್‌ಗಳನ್ನು ಸ್ಥಳೀಯ ಬೇಕರಿ ಸೇರಿ ಇತರೆಡೆ ಮಾರಾಟ ಮಾಡುತ್ತಿದ್ದರು.

Tap to resize

Latest Videos

undefined

 

ಹಾವೇರಿ: ಕಳಪೆ ಮೊಟ್ಟೆಗೆ ಇನ್ನೂ ಬಿದ್ದಿಲ್ಲ ಬ್ರೇಕ್, ಅಂಗನವಾಡಿ ಕಳಪೆ ಮೊಟ್ಟೆ ಹಾವಳಿಗೆ ಜನ ಕಂಗಾಲು..!

ತಡವಾಗಿ ಎಚ್ಚೆತ್ತ ನಗರಸಭೆ:

ದುರ್ಘಟನೆ ಸಂಭವಿಸಿದ ನಂತರ ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಲ್ಲಿ ಉಲ್ಲೇಖಿಸಿದ ಪ್ರಕಾರ ವಿN್ನೕಶ್ವರ ಸ್ಪಾರ್ಕಲ್ಸ್‌ ಮತ್ತು ಪಾರ್ಟಿ ಪೂಪರ್‌ ಕೇಂದ್ರದವರು ನಗರಸಭೆ, ಪರಿಸರ ನಿಯಂತ್ರಣ ಮಂಡಳಿ ಸೇರಿದಂತೆ ಇತರ ಯಾವುದೇ ಸಕ್ಷಮ ಪ್ರಾಧಿಕಾರದ ಪರವಾನಗಿ ಪಡೆಯದೆ ಅನಧಿಕೃತವಾಗಿ ತಮ್ಮ ಕಾರ್ಯ ಚಟುವಟಿಕೆ ನಡೆಸುತ್ತಿದ್ದರು.

ಇಷ್ಟೆಲ್ಲ ಇದ್ದರೂ ನಗರಸಭೆ ಅಧಿಕಾರಿಗಳ ಗಮನಕ್ಕೆ ಏಕೆ ಬರಲಿಲ್ಲ. ನಿತ್ಯವೂ ಕಂದಾಯ ತುಂಬುವುದು, ಅಂಗಡಿಗಳ ಪರವಾನಗಿ ನವೀಕರಣ ಸೇರಿ ಇತರ ಕೆಲಸಗಳಿಗಾಗಿ ಮಳಿಗೆಗಳನ್ನು ಸುತ್ತುವ ನಗರಸಭೆ ಅಧಿಕಾರಿಗಳಿಗೆ ಅನಧಿಕೃತ ಸ್ಪಾರ್ಕ್ ಕ್ಯಾಂಡಲ್‌ ತಯಾರಿಸುವ ಕೇಂದ್ರ ಏಕೆ ಕಾಣಿಸಲಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸ್ಪಾರ್ಕ್ ಕ್ಯಾಂಡಲ್‌ ತಯಾರಿಸುವವರು ಮುಖ್ಯವಾಗಿ ಬೆಂಕಿ ಅವಘಡಗಳನ್ನು ಎದುರಿಸಲು ತುರ್ತು ವ್ಯವಸ್ಥೆ ಮಾಡಿಕೊಟ್ಟುಕೊಳ್ಳಬೇಕು.ಆದರೆ, ಇವರು ಬೆಂಕಿ ಅವಘಡ ತಪ್ಪಿಸುವಂತಹ ಯಾವುದೇ ಸುರಕ್ಷಿತ ಕ್ರಮಕೈಗೊಂಡಿರಲಿಲ್ಲ ಎಂದು ಇಲ್ಲಿಯ ಅಗ್ನಿಶಾಮಕ ದಳದ ಠಾಣಾಧಿಕಾರಿ ಎಸ್‌.ಎಸ್‌. ಶಿವಳ್ಳಿ ತಿಳಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿ ಕಾರ್ಮಿಕರು:

ಘಟನೆಯಲ್ಲಿ ಗಾಯಗೊಂಡ 7 ಕಾರ್ಮಿಕರಲ್ಲಿ ಓರ್ವ ಈಗಾಗಲೇ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಮಂಗಳಾ ಹಾಗೂ ಶಿಲ್ಪಾ ಎಂಬುವರ ಸ್ಥಿತಿ ಇನ್ನೂಗಂಭೀರವಾಗಿರುವ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿತರರು ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ರಘನಂದನ ಮೂರ್ತಿ ಕೂಡಲೇ ಇದಕ್ಕೆ ಕಾರಣವಾದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಜತೆಗೆ ಅನಧಿಕೃತ ಫ್ಯಾಕ್ಟರಿ ಮೇಲೆ ಕಾನೂನು ಕ್ರಮ ಜರುಗಿಸದೆ ನಿರ್ಲಕ್ಷ್ಯತನ ತೋರಿದ ನಗರಸಭೆ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ವಿN್ನೕಶ್ವರ ಸ್ಪಾರ್ಕಲ್ಸ್‌ ಮತ್ತು ಪಾರ್ಟಿ ಪೂಪರ್‌ ಕೇಂದ್ರದವರು ನಗರಸಭೆ, ಪರಿಸರ ನಿಯಂತ್ರಣ ಮಂಡಳಿ ಸೇರಿಯಾವ ಪ್ರಾಧಿಕಾರದಿಂದಲೂ ಯಾವುದೇ ಪರವಾನಗಿ ಪಡೆಯದೆ ಅನಧಿಕೃತವಾಗಿ ತಯಾರಿಕೆ ಘಟಕ ನಡೆಸುತ್ತಿದ್ದರು. ಮೇಲಾಗಿ ಅವರು ಬಾಡಿಗೆ ಪಡೆದಿರುವ ಕಟ್ಟಡಕ್ಕೂ ಜಿ ಪ್ಲಸ್‌-1 ಮನೆ ನಿರ್ಮಾಣಕ್ಕೆ ಮಾತ್ರ ಪರವಾನಗಿಯಿದ್ದು, 2ನೇ ಮಹಡಿ ನಿರ್ಮಾಣಕ್ಕೆ ಪರವಾನಗಿ ಇಲ್ಲ. ಇದು ಕೂಡ ಅನಧಿಕೃತವಾಗಿದೆ.

ನಿಂಗಪ್ಪ ಕುಮ್ಮಣ್ಣನವರ ಪೌರಾಯುಕ್ತ, ನಗರಸಭೆ ರಾಣಿಬೆನ್ನೂರು

ಪಟಾಕಿ ಕಾರ್ಖಾನೆಗೆ ಬೆಂಕಿ, ಮೂವರು ಮಹಿಳೆ ಸೇರಿ 8 ಮಂದಿ ಸುಟ್ಟು ಕರಕಲು!

ಜೀವ ಉಳಿಸಿದ ಹುಣ್ಣಿಮೆ

ಸ್ಪಾರ್ಕ್ ಕ್ಯಾಂಡಲ್‌ ತಯಾರಿಸುವ ಕೇಂದ್ರದಲ್ಲಿ ನಿತ್ಯವೂ 25ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ದುರ್ಘಟನೆ ಸಂಭವಿಸಿದ ದಿನ ಹುಣ್ಣಿಮೆಯಾಗಿದ್ದರಿಂದ ಕೇವಲ 6 ಜನರು ಮಾತ್ರ ಕೆಲಸ ಮಾಡುತ್ತಿದ್ದರು. ಬೆಂಕಿ ಅವಘಡ ವಿಷಯ ತಿಳಿದ ಕಾರ್ಮಿಕರು ಹುಣ್ಣಿಮೆ ನಮ್ಮ ಜೀವ ಉಳಿಸಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಬೇಕರಿಗಳಿಗೆ ನೋಟಿಸ್‌ ಜಾರಿ:

ಪ್ರಕರಣದ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು ವಿN್ನೕಶ್ವರ ಸ್ಪಾರ್ಕಲ್ಸ್‌ ಮತ್ತು ಪಾರ್ಟಿ ಪೂಪರ್‌ ಕೇಂದ್ರದವರಿಂದ ಯಾರಾರ‍ಯರು ಸ್ಪಾರ್ಕ್ ಕ್ಯಾಂಡಲ್‌ ಖರೀದಿಸುತ್ತಿದ್ದರು. ಜತೆಗೆ ಇವರ ಸಮಗ್ರ ಮಾಹಿತಿ ನೀಡುವ ಸಲುವಾಗಿ ನಗರದ ಎಲ್ಲ ಬೇಕರಿಗಳಿಗೆ ಗುರುವಾರ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಪತ್ರಿಕೆಗೆತಿಳಿಸಿದ್ದಾರೆ.

click me!