ರಾಮಮಂದಿರದ ಮೇಲೆ ಹಸಿರು ಬಾವುಟ ಸ್ಟೇಟಸ್; ಆರೋಪಿ ಸದ್ದಾಂ ಹುಸೇನ್ ಬಂಧನ

By Ravi Janekal  |  First Published Jan 25, 2024, 1:20 PM IST

ಅಯೋಧ್ಯೆ ರಾಮಮಂದಿರದ ಮೇಲೆ ಹಸಿರು ಧ್ವಜ ಹಾರಿಸಿದ್ದ ಫೋಟೊ ವಾಟ್ಸಪ್‌ ಸ್ಟೇಟಸ್ ಹಾಕಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ ಪೊಲೀಸರು. ಸದ್ದಾಂ ಹುಸೇನ್ ಬಂಧಿತ


ಧಾರವಾಡ (ಜ.25): ಅಯೋಧ್ಯೆ ರಾಮಮಂದಿರದ ಮೇಲೆ ಹಸಿರು ಧ್ವಜ ಹಾರಿಸಿದ್ದ ಫೋಟೊ ವಾಟ್ಸಪ್‌ ಸ್ಟೇಟಸ್ ಹಾಕಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ ಪೊಲೀಸರು.

ಸದ್ದಾಂ ಹುಸೇನ್ ಬಂಧಿತ ಆರೋಪಿ. ಧಾರವಾಡ ತಾಲೂಕಿನ ತಡಕೋಡ ಗ್ರಾಮದವನಾಗಿರುವ ಆರೋಪಿ. ಅಯೋಧ್ಯೆ ರಾಮಮಂದಿರದ ಮೇಲೆ ಹಸಿರುಧ್ವಜ ಎಡಿಟ್ ಮಾಡಿ ಅದರ ಫೋಟೊ ಸ್ಟೇಟಸ್ ಹಾಕುವ ಮೂಲಕ ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ನೂರಾರು ಹಿಂದುಗಳು ರಾತ್ರಿ ಈದ್ಗಾ ಮೈದಾನಕ್ಕೆ ನುಗ್ಗಿ ಗಲಾಟೆ ಮಾಡಿದ್ದರು. ಮೈದಾನದ ಗುಂಬಜ್‌ಗಳನ್ನು ಕೆಡವಿದ್ದ ಉದ್ರಿಕ್ತರು. ಐದು ಗುಂಬಜ್ ಪೈಕಿ ಒಂದಕ್ಕೆ ಹಾನಿಯಾಗಿದೆ.

Tap to resize

Latest Videos

ನಮ್ಮ ಸರ್ಕಾರ ಮಾನವೀಯತೆ ಎತ್ತಿ ಹಿಡಿದಿದೆ; .ಎಲ್ಲರಿಗೂ ನ್ಯಾಯ ಖಾತರಿಪಡಿಸುತ್ತದೆ: ಡಿಸಿಎಂ ಡಿಕೆ.ಶಿವಕುಮಾರ

ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮೊದಲೇ ಎಚ್ಚೆತ್ತ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು. ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ಭೇಟಿ ನೀಡಿ ಸ್ಥಳೀಯ ಮುಸ್ಲಿಂ ಮುಖಂಡರೊಂದಿಗೆ ಮಾತುಕತೆ ನಡೆಸಿ ಹಾನಿಯಾಗಿದ್ದ ಗುಂಬಜ್ ವನ್ನು ಕೆಲವೇ ನಿಮಿಷಗಳಲ್ಲಿ ದುರಸ್ತಿಗೊಳಿಸಲಾಯಿತು. ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ಮ ಧಾರವಾಡ ಎಸ್ಪಿ ಡಾ. ಗೋಪಾಲ ಬ್ಯಾಕೋಡರಿಂದ ಮಾಹಿತಿ ಪಡೆದ ಐಜಿಪಿಕ. ಗರಗ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

click me!