ಸಾವಿನ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಮನೆಯವರು ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದಂತೆ ಒಳನುಗ್ಗಿ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ್ ಕಳ್ಳನನ್ನ ಅರಕೆರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ (ಜ.25): ಸಾವಿನ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಮನೆಯವರು ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದಂತೆ ಒಳನುಗ್ಗಿ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ್ ಕಳ್ಳನನ್ನ ಅರಕೆರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರಳಕುಪ್ಪೆಯ ವಿವೇಕ್(23) ಬಂಧಿತ ಖತರ್ನಾಕ್ ಕಳ್ಳ. ಬಂಧಿತನಿಂದ ಒಟ್ಟು 36 ಲಕ್ಷ ಮೌಲ್ಯದ 521 ಗ್ರಾಂ ಚಿನ್ನಾಭರಣ, ಕ್ಯಾಮರಾ ಮತ್ತು ಲೆನ್ಸ್, ಒಂದು ಬೈಕ್, ಒಂದು ಕಾರು ಜಪ್ತಿ ಮಾಡಿರುವ ಪೊಲೀಸರು. 23 ವಯಸ್ಸಿಗೆ ಹತ್ತಾರು ಸಾವಿನ ಮನೆಯಲ್ಲಿ ಕಳ್ಳತನ ಮಾಡಿರುವ ಆರೋಪಿ. ಕದ್ದ ಚಿನ್ನವನ್ನು ಅಡವಿಟ್ಟು ಶೋಕಿ ಜೀವನ ನಡೆಸುತ್ತಿದ್ದ. ಹಣ ಬೇಕೆಂದಾಗ ಮತ್ತೆ ಕಳ್ಳತನದಲ್ಲಿ ತೊಡಗುತ್ತಿದ್ದ ಆಸಾಮಿ. ಇತ್ತೀಚೆಗೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಶಿವಕುಮಾರ್ ಎಂಬುವವರ ಮನೆ ಕಳ್ಳತನವಾಗಿತ್ತು. ಬೀರುವಿನಲ್ಲಿದ್ದ 135 ಗ್ರಾಂ ಚಿನ್ನಾಭರಣ ದೋಚಿದ್ದ ಅಸಾಮಿ. ಕಳ್ಳನನ್ನ ಬಂಧಿಸಿ ವಿಚಾರಣೆಗೊಳಿಸಪಡಿಸಿದಾಗ ಪೊಲೀಸರನ್ನೇ ಬೆಚ್ಚಿ ಬೀಳಿಸುವ ಕಳ್ಳತನದ ಹಿಸ್ಟರಿ ಬಿಚ್ಚಿಟ್ಟ ಕಳ್ಳ ವಿವೇಕ್.
ಹ್ಯಾಂಡಲ್ ಲಾಕ್ ಮುರಿದು ಬೈಕ್‌ಗಳ ಕಳವು: ಇಬ್ಬರು ಆರೋಪಿಗಳ ಬಂಧನ
ಕಳೆದ ಮೂರು ವರ್ಷಗಳಿಂದಲೂ ಕಳ್ಳತನವನ್ನೆ ಕಾಯಕ ಮಾಡಿಕೊಂಡಿದ್ದ ಐನಾತಿ. ಕೇವಲ 6 ತಿಂಗಳಲ್ಳೇ ಹತ್ತಕ್ಕೂ ಹೆಚ್ಚು ಕಳ್ಳತನ. ಪಾಂಡವಪುರ ತಾಲೂಕಿನ ಹಿರಮರಳ್ಳಿ, ಚಿನಕುರಳಿ, ಆರತಿ ಉಕ್ಕಡ, ಹರವು, ಡಾಮಡಹಳ್ಳಿಯ ಸಾವಿನ ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿರುವ ಆರೋಪಿ. ಕಳ್ಳತನ ಮಾಡಿರುವ ಮನೆಗಳೆಲ್ಲ ಸಾವಿನ ಮನೆಗಳಾಗಿವೆ. ಇದರ ಜೊತೆಗೆ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆಗಳೇ ಇವನು ಟಾರ್ಗೆಟ್ ಮಾಡುತ್ತಿದ್ದ. ಬಹಳಷ್ಟು ಕಳ್ಳತನ ಪ್ರಕರಣಗಳಲ್ಲಿ ಮಂಡ್ಯ ಪೊಲೀಸರ ನಿದ್ದೆಗೆಡಿಸಿದ್ದ ಕಳ್ಳ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರು: ಮೊಬೈಲ್ ಕಳ್ಳನನ್ನು ಬೆನ್ನಟಿ ಹಿಡಿದ ಟ್ರಾಫಿಕ್ ಪೊಲೀಸರು!