ಪ್ರಿಯತಮನಿಗೆ 108 ಬಾರಿ ಇರಿದು ಕೊಂದ್ರೂ ಜೈಲು ಶಿಕ್ಷೆಯಿಂದ ಪಾರಾದ ಮಹಿಳೆ! ಕಾರಣ ಇಲ್ಲಿದೆ..

By BK Ashwin  |  First Published Jan 25, 2024, 11:56 AM IST

ಅಮೆರಿಕದ ಮಹಿಳೆ ತನ್ನ ಬಾಯ್‌ಫ್ರೆಂಡ್‌ಗೆ ಇರಿದ ಸಂದರ್ಭದಲ್ಲಿ ಗಾಂಜಾ-ಪ್ರೇರಿತ ಮನೋವಿಕಾರದಲ್ಲಿದ್ದಳು ಮತ್ತು ಆಕೆಗೆ ತನ್ನ ಕ್ರಿಯೆಗಳ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ. 


ಕ್ಯಾಲಿಫೋರ್ನಿಯಾ (ಜನವರಿ 25, 2024): ಅಮೆರಿಕದ ಮಹಿಳೆಯೊಬ್ಬರು ತನ್ನ ಬಾಯ್‌ಫ್ರೆಂಡ್‌ಗೆ ನೂರಾರು ಬಾರಿ ಚಾಕುವಿನಿಂದ ಇರಿದು ಆತನ ಕೊಲೆ ಮಾಡಿರುವ ಆಘಾತಕಾರಿ ಪ್ರಕರಣ ವರದಿಯಾಗಿದೆ. ಆದರೂ ಸಹ ತನ್ನ ಪ್ರಿಯಕರನಿಗೆ 108 ಬಾರಿ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಕ್ಯಾಲಿಫೋರ್ನಿಯಾ ಮಹಿಳೆಯನ್ನು ನ್ಯಾಯಾಧೀಶರು ಖುಲಾಸೆಗೊಳಿಸಿದ್ದಾರೆ. ಇದೇನಿದು ವಿಚಿತ್ರ ಅಂತೀರಾ.. ಕಾರಣ ಹೀಗಿದೆ..

ಅಮೆರಿಕದ ಮಹಿಳೆ ತನ್ನ ಬಾಯ್‌ಫ್ರೆಂಡ್‌ಗೆ ಇರಿದ ಸಂದರ್ಭದಲ್ಲಿ ಗಾಂಜಾ-ಪ್ರೇರಿತ ಮನೋವಿಕಾರದಲ್ಲಿದ್ದಳು ಮತ್ತು ಆಕೆಗೆ ತನ್ನ ಕ್ರಿಯೆಗಳ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ. 

Tap to resize

Latest Videos

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪೊಲೀಸಪ್ಪ; ದೂರು ದಾಖಲಾಗ್ತಿದ್ದಂತೆ ನಾಪತ್ತೆ!

2018 ರಲ್ಲಿ 32 ವರ್ಷದ ಮಹಿಳೆ ಬ್ರೈನ್ ಸ್ಪೆಜ್ಚರ್ ಡ್ರಗ್ಸ್‌ ತೆಗೆದುಕೊಂಡ ನಶೆಯಲ್ಲಿದ್ದಾಗ ಚಾಡ್ ಒ'ಮೆಲಿಯಾಳನನ್ನು ಇರಿದಿದ್ದರು. ಮತ್ತು ಅನೈಚ್ಛಿಕ ನರಹತ್ಯೆಯ ತಪ್ಪಿತಸ್ಥನೆಂದು ಕಂಡುಬಂದಿತ್ತು. ಈ ಸಂಬಂಧ ಮಂಗಳವಾರ, ಆಕೆಗೆ ಎರಡು ವರ್ಷಗಳ ಶಿಕ್ಷೆ ವಿಧಿಸಲಾಯಿತು ಮತ್ತು 100 ಗಂಟೆಗಳ ಸಮುದಾಯ ಸೇವೆಯನ್ನು ನಿರ್ವಹಿಸಲು ಆದೇಶಿಸಲಾಗಿತ್ತು.

ಆದರೆ, ಸುಪೀರಿಯರ್ ಕೋರ್ಟ್ ನ್ಯಾಯಾಧೀಶರಾದ ಡೇವಿಡ್ ವರ್ಲಿ, ಈ ಘಟನೆ ನಡೆದಾಗ ಆರೋಪಿ ಮಹಿಳೆ ಬ್ರೈನ್ ಸ್ಪೆಜ್ಜರ್‌ಗೆ ಆಕೆ ತಾನು ಮಾಡಿದ ಕ್ರಿಯೆಗಳ ಮೇಲೆ ಯಾವುದೇ ನಿಯಂತ್ರಣವನ್ನು ಹೊಂದಿಲ್ಲ ಎಂದು ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಟರ್‌ಗಳ ಪ್ರಕಾರ, 2018 ರಲ್ಲಿ ಮೇ 27 ಮತ್ತು 28 ರ ನಡುವೆ ಔಸೆಂಡ್‌ಓಕ್ಸ್‌ನಲ್ಲಿರುವ ಚಾಡ್ ಓ'ಮೆಲಿಯಾ ನ ಅಪಾರ್ಟ್‌ಮೆಂಟ್‌ನಲ್ಲಿ ಮಧ್ಯರಾತ್ರಿ ಇರಿಯಲಾಗಿತ್ತು. 

ಮೇಲುಕೋಟೆ ಶಿಕ್ಷಕಿ ದೀಪಿಕಾ ಹತ್ಯೆ ಪ್ರಕರಣ; ಅತಿಯಾದ ಸಲುಗೆಯಿಂದಲೇ ಕೊಲೆ!

ಪ್ರೇಮಿಗಳು ಇಬ್ಬರೂ ಒಟ್ಟಿಗೆ ಗಾಂಜಾ ಸೇವಿಸಿದ ಬಳಿಕ ಸ್ಪೆಜ್ಚರ್, ಚಾಡ್ ಓ'ಮೆಲಿಯಾ ಎಂಬ ಅಕೌಂಟೆಂಟ್ ಅನ್ನು ಸುಮಾರು 108 ಬಾರಿ ಮಾರಣಾಂತಿಕವಾಗಿ ಇರಿದಿದ್ದರು ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ಅಲ್ಲದೆ, ಆಕೆಯೂ ಪದೇ ಪದೇ ಚಾಕುವಿನಿಂದ ತಾನೇ ಇರಿದುಕೊಂಡಿದ್ದಾರೆ ಎಂದೂ ತಿಳಿದುಬಂದಿದೆ.

ಸ್ಪೆಜ್ಚರ್ ಗಾಂಜಾಕ್ಕೆ ಪ್ರತಿಕೂಲ ಪ್ರತಿಕ್ರಿಯೆಯನ್ನು ಹೊಂದಿದ್ದರು ಮತ್ತು ಆಕೆ ಗಾಂಜಾ-ಪ್ರೇರಿತ ಮನೋವಿಕೃತ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ತಜ್ಞರು ಹೇಳಿಕೆ ನೀಡಿದ್ದಾರೆ. ಆ ಮನೋವಿಕೃತ ಘಟನೆಯಲ್ಲಿ ಸ್ಪೆಜರ್ ಒ'ಮೆಲಿಯಾರನ್ನು ಹಲವು ಬಾರಿ ಇರಿದು ಕೊಂದಿದ್ದಾರೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಬ್ರೈನ್ 26 ವರ್ಷದ ಅಕೌಂಟೆಂಟ್ ಅನ್ನು ಕ್ರೂರವಾಗಿ ಹತ್ಯೆ ಮಾಡುವ ಮೊದಲು ಕೆಲವು ವಾರದ ಹಿಂದೆ ಪರಸ್ಪರ ಡೇಟಿಂಗ್ ಮಾಡುತ್ತಿದ್ರು. ಅವಳು ಅವನನ್ನು ಕೊಂದ ನಂತರ, ಒ'ಮೆಲಿಯಾ ರಕ್ತದ ಮಡುವಿನಲ್ಲಿ ಸ್ಪೆಜ್ಜರ್‌ನೊಂದಿಗೆ ನೆಲದ ಮೇಲೆ ಬಿದ್ದಿರುವುದನ್ನು ಸ್ಥಳೀಯ ಪೊಲೀಸರು ನೋಡಿದರು.

ಮಹಿಳೆ ಚಾಕು ಹಿಡಿದುಕೊಂಡಿದ್ದನ್ನು ನೋಡಿದ ಅವರು, ಆಕೆಯ ಕೈಯಿಂದ ಕಿತ್ತುಕೊಳ್ಳಲು ಯತ್ನಿಸಿದಾಗ ಚಾಕುವನ್ನು ಆಕೆಯ ಗಂಟಲಿಗೆ ಹಾಕಿಕೊಂಡರು. ಇನ್ನು, ಚಾಡ್‌ ಓ’ಮೆಲಿಯಾ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ. 

click me!