
ಧರ್ಮಪುರಿ: ರಥೋತ್ಸವದ ವೇಳೆ ರಥ ಮಗುಚಿ ಬಿದ್ದು, ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಪಪ್ಪರಪಟ್ಟಿಯಲ್ಲಿರುವ ಜನಪ್ರಿಯ ಕಲೈಯಮನ್ ದೇಗುಲದಲ್ಲಿ ಈ ದುರಂತ ನಡೆದಿದೆ. ಸೋಮವಾರ (ಜೂನ್ 13) ರಥೋತ್ಸವದ ವೇಳೆ ಬೃಹತ್ ರಥ ಭಕ್ತರ ಮೇಲೆ ಬಿದ್ದ ಪರಿಣಾಮ ಇಬ್ಬರು ಭಕ್ತರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ತಮಿಳುನಾಡು ಸಿಎಂ (Tamil Nadu Chief Minister) ಎಂ.ಕೆ. ಸ್ಟಾಲಿನ್ (M K Stalin) ಸಂತಾಪ ವ್ಯಕ್ತಪಡಿಸಿದ್ದು, ಮೃತ ಪ್ರತಿಯೊಬ್ಬರ ಕುಟುಂಬಕ್ಕೂ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ವೈಕಾಶಿ ಹಬ್ಬದ ಅಂಗವಾಗಿ ಕಾಳಿಯಮ್ಮನ ದೇವಸ್ಥಾನದ ಅಲಂಕೃತ ರಥವನ್ನು ಪೂಜಾ ಸ್ಥಳದ ಬಳಿಯ ಪ್ರಮುಖ ಬೀದಿಗಳಲ್ಲಿ ಎಳೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರಥೋತ್ಸವದ ವೇಳೆ ಎಳೆಯುತ್ತಿದ್ದ ರಥ ಒಮ್ಮಿಂದೊಮ್ಮೆಲೇ ಮಗುಚಿ ಬಿದ್ದಿದ್ದು, ರಥ ಎಳೆಯುತ್ತಿದ್ದ ಭಕ್ತರ ಮೇಲೆ ಬಿದ್ದಿದೆ. ಪರಿಣಾಮ ರಥದಡಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಭ್ರಮದ ರಥೋತ್ಸವದ ನಡುವೆ ಅವಘಡ, ರಥದ ಚಕ್ರಕ್ಕೆ ಸಿಲುಕಿ ಓರ್ವ ಸಾವು
ಕೂಡಲೇ ರಥ ಎಳೆಯುತ್ತಿದ್ದ ಭಕ್ತರು ಹಾಗೂ ಮೆರವಣಿಗೆ ವೀಕ್ಷಿಸುತ್ತಿದ್ದವರು ರಥದಡಿ ಸಿಲುಕಿದ್ದವರ ರಕ್ಷಣೆಗೆ ತಕ್ಷಣ ಧಾವಿಸಿದರು. ಅದಾಗ್ಯೂ ಇಬ್ಬರು ಪ್ರಾಣ ಬಿಟ್ಟಿದ್ದಾರೆ.
ಮೃತರನ್ನು ಜಿಲ್ಲೆಯ 57 ವರ್ಷ ಪ್ರಾಯದ ಸಿ ಮನೋಹರನ್ (C Manoharan ) ಮತ್ತು 50 ವರ್ಷ ಪ್ರಾಯದ ಜಿ ಸರವಣನ್ (G Saravanan) ಎಂದು ಗುರುತಿಸಲಾಗಿದೆ.
ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಸಟಾಲಿನ್ ಸಾಂತ್ವನ ಹೇಳಿದ್ದಾರೆ.
'ಅಸಾನಿ' ಅಬ್ಬರ, ಆಂಧ್ರ ಕರಾವಳಿಯಲ್ಲಿ ಪತ್ತೆಯಾಯ್ತು 'ಚಿನ್ನದ' ರಥ, ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು!
ಚೆನ್ನೈನಲ್ಲಿ ಹೇಳಿಕೆ ನೀಡಿರುವ ಸಿಎಂ, ಈ ದುರಂತದಲ್ಲಿ ನಾಲ್ವರು ಗಾಯಗೊಂಡಿದ್ದು, ಧರ್ಮಪುರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (Dharmapuri Government Medical College Hospital) ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರದ ಜೊತೆಗೆ, ಗಾಯಗೊಂಡ ವ್ಯಕ್ತಿಗಳಿಗೆ ತಲಾ ₹ 50,000 ಮೊತ್ತದ ಪರಿಹಾರವನ್ನು ಸಿಎಂ ಸ್ಟಾಲಿನ್ ಘೋಷಿಸಿದರು. ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ (ಸಿಎಂಪಿಆರ್‌ಫ್) ಹಣವನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಸಾಮಾನ್ಯವಾಗಿ ರಥೋತ್ಸವದಲ್ಲಿ ಸಾವಿರಾರು ಜನ ಭಾಗವಹಿಸುತ್ತಾರೆ. ಹಾಗೆಯೇ ರಾಜ್ಯದ ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಿಯ ಮಹಾರಥೋತ್ಸವವು ಕಳೆದ ತಿಂಗಳು 3 ಲಕ್ಷಕ್ಕೂ ಹೆಚ್ಚು ಭಕ್ತರ ‘ಉಧೋ, ಉಧೋ, ಹುಲಿಗೆಮ್ಮ ತಾಯಿ’ ಹರ್ಷೋದ್ಗಾರದ ಮಧ್ಯೆ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದ ಅರ್ಚಕರು ಅಮ್ಮನವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ದೇವಸ್ಥಾನದ ಸುತ್ತ ಪ್ರದರ್ಶನ ಹಾಕಿದರು. ನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಹುಲಿಗೆಮ್ಮ ದೇವಿ ಉತ್ಸವಮೂರ್ತಿ ಹೊತ್ತ ರಥ ದೇವಸ್ಥಾನದಿಂದ ಮುದ್ದಮ್ಮ ಕಟ್ಟೆಯವರೆಗೆ ಹೋಗಿ, ಬಳಿಕ ದೇವಸ್ಥಾನಕ್ಕೆ ಮರಳಿತು. ರಥೋತ್ಸವದ ಸಂದರ್ಭದಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತಾದಿಗಳು ಬಾಳೆಹಣ್ಣು ಹಾಗೂ ಉತ್ತತ್ತಿಯನ್ನು ರಥದ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು.
ಕಳೆದ ಎರಡು ವರ್ಷ ಅಂದರೆ 2020 ಹಾಗೂ 2021ರಲ್ಲಿ ಕೊರೋನಾ ಮಹಾಮಾರಿ ಹಿನ್ನೆಲೆ ಮಹಾರಥೋತ್ಸವವನ್ನು ಕೊಪ್ಪಳ ಜಿಲ್ಲಾಡಳಿತವು ಸ್ಥಗಿತಗೊಳಿಸಿತ್ತು. ಎರಡು ವರ್ಷದ ನಂತರ ರಥೋತ್ಸವ ನಡೆದಿದ್ದು, ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ