ಬೆಂಗಳೂರಿನ ಹೊಟೇಲ್‌ನಲ್ಲಿ ರೇವ್ ಪಾರ್ಟಿ ಕೇಸ್‌: ಸಿದ್ದಾಂತ್ ಕಪೂರ್ ಸೇರಿ ಐವರಿಗೆ ಠಾಣಾ ಜಾಮೀನು

Published : Jun 14, 2022, 09:45 AM ISTUpdated : Jun 14, 2022, 03:35 PM IST
ಬೆಂಗಳೂರಿನ ಹೊಟೇಲ್‌ನಲ್ಲಿ ರೇವ್ ಪಾರ್ಟಿ ಕೇಸ್‌: ಸಿದ್ದಾಂತ್ ಕಪೂರ್ ಸೇರಿ ಐವರಿಗೆ ಠಾಣಾ ಜಾಮೀನು

ಸಾರಾಂಶ

ದಿ ಪಾರ್ಕ್ ಹೋಟೆಲ್ ನಲ್ಲಿ ರೇವ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಫೂರ್ ಸೇರಿ ಐವರಿಗೆ ಠಾಣಾ ಜಾಮೀನು ಮಂಜೂರಾಗಿದೆ. 

ಬೆಂಗಳೂರು: ದಿ ಪಾರ್ಕ್ ಹೋಟೆಲ್ ನಲ್ಲಿ ರೇವ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಫೂರ್ ಸೇರಿ ಐವರಿಗೆ ಠಾಣಾ ಜಾಮೀನು ಮಂಜೂರಾಗಿದೆ. ಐದು ಜನರಿಗೆ ಸ್ಟೇಷನ್ ಜಾಮೀನು  ಮಂಜೂರು ಮಾಡಿ ನಾಳೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ಠಾಣಾ ಜಾಮೀನು ಮಂಜೂರಾಗಿರುವುದಕ್ಕೆ ಬೆಂಗಳೂರು ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಸಿದ್ದಾಂತ್ ಕಪೂರ್ ಹೇಳಿದ್ದಾರೆ. ಇತ್ತ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ದಿ ಪಾರ್ಕ್ ಹೋಟೆಲ್ ಗೆ ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಹೊಟೇಲ್‌ನಲ್ಲಿ ರೇವ್‌ ಪಾರ್ಟಿ ನಡೆದಿದ್ದು, ಇಂದು ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದು ಸಾಧ್ಯನೇ ಇಲ್ಲ; ಪುತ್ರ ಸಿದ್ಧಾಂತ್ ಬಂಧನದ ಬಗ್ಗೆ ನಟ ಶಕ್ತಿ ಕಪೂರ್ ಪ್ರತಿಕ್ರಿಯೆ

ಬಾಲಿವುಡ್ ಖ್ಯಾತ ನಟ ಶಕ್ತಿ ಕಪೂರ್ (Shakti Kapoor) ಪುತ್ರನಾಗಿರುವ ಸಿದ್ದಾಂತ್ ಕಪೂರ್ ಅವರನ್ನು ಬೆಂಗಳೂರಿನ ಎಂಜಿ ರಸ್ತೆಯಲ್ಲಿ (MG Road) ಭಾನುವಾರ ಪಾರ್ಟಿ ಮಾಡುವಾಗ ಡ್ರಗ್ಸ್‌ ಸೇವಿಸುತ್ತಿದ್ದರು ಎಂದು ಪೊಲೀಸರು ಬಂಧಿಸಿದ್ದರು. ಎಂಜಿ ರಸ್ತೆಯ  ದಿ ಪಾರ್ಕ್ ಹೋಟೆಲ್ ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ 50 ಮಂದಿ ಭಾಗಿಯಾಗಿದ್ದರು ಅವರಲ್ಲಿ 35 ವ್ಯಕ್ತಿಗಳ ಸ್ಯಾಂಪಲ್‌ನ್ನು ಲ್ಯಾಬ್‌ಗೆ ಕಳುಹಿಸಲಾಗಿತ್ತು. 35 ಸ್ಯಾಂಪಲ್‌ಗಳಲ್ಲಿ 6 ಸ್ಯಾಂಪಲ್ ಪಾಸಿಟಿವ್ ಬಂದಿದೆ ಅದರಲ್ಲಿ ನಟ ಸಿದ್ದಾಂತ್ ಕಪೂರ್ ಕೂಡ ಒಬ್ಬರು ಎನ್ನಲಾಗಿದೆ.  ಮೊದಲೇ ಡ್ರೆಗ್ಸ್‌ ಸೇವಿಸಿ ಪಾರ್ಟಿಗೆ ಬಂದಿರಬಹುದು ಇಲ್ಲವಾದರೆ ಪಾರ್ಟಿಗೆ ಬಂದು ಸೇವಿಸಿರಬೇಕು ಇದರ ಬಗ್ಗೆ ಸ್ಪಷನೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಅಖೀಲ್ ಸೋನಿ (Akhil Soni), ಅಜೋದ್‌ ಸಿಂಗ್ ಪಂಜಾಬ್‌ (Ajod Singh Punjab), ಅಖೀಲ್ (Akhil), ಅನಿ (Ani), ದರ್ಶನ ಸುರೇಶ್‌ರನ್ನು (Darshan Suresh)ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳೆಲ್ಲರು ಟೆಕ್ಕಿಗಳಾಗಿದ್ದು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದರು.

2020ರಲ್ಲಿ ಬಿಡುಗಡೆಯಾದ ಬಕುಲ ವೆಬ್‌ ಸೀರಿಸ್‌ನಲ್ಲಿ (Bakula Web Series) ಚಿಂಟು ಪಾತ್ರದಲ್ಲಿ ಸಿದ್ಧಾರ್ಥ್‌ ಅಭಿನಯಿಸಿದ್ದಾರೆ. 'ಶೂಟೌಟ್ ಅಟ್ ವಡಾಲಾ'(Shootout at Wadala), 'ಅಗ್ಲಿ(Ugly), 'ಹಸೀನಾ ಪಾರ್ಕರ್ (Hasina Parker)', 'ಚೆಹ್ರೆ' ಸೇರಿದಂತೆ  7 ಸಿನಿಮಾಗಳಲ್ಲಿ ಸಿದ್ಧಾರ್ಥ್‌ ನಟಿಸಿದ್ದಾರೆ. 'ಭಾಗಂ ಭಾಗ್', 'ಚುಪ್ ಚುಪ್ ಕೆ', 'ಭೂಲ್ ಭುಲೈಯಾ', ಮತ್ತು 'ಧೋಲ್' ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. 

"

Drugs Case: ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಬೆಂಗಳೂರಿನಲ್ಲಿ ಅರೆಸ್ಟ್‌

ಇತ್ತ ನಟ ಶಕ್ತಿ ಕಪೂರ್ ಮಗ ಅರೆಸ್ಟ್ ಆದ ಬಗ್ಗೆ ಟಿವಿ ವಾಹಿನಿಯಲ್ಲಿ ನೋಡಿ ತಿಳಿದುಕೊಂಡಿರುವುದಾಗಿ ಹೇಳಿದ್ದಾರೆ. ನನಗೆ ಏನು ತಿಳಿದಿಲ್ಲ. ನಾನು ನಿದ್ದೆಯಿಂದ ಎದ್ದಿದ್ದೇನೆ ಮತ್ತು ನನ್ನ ಫೋನ್ ನಿರಂತರವಾಗಿ ರಿಂಗ್ ಆಗುತ್ತಿತ್ತು. ಆತನನ್ನು ಬಂಧಿಸಿಲ್ಲ. ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನಗೆ ಸುದ್ದಿಯಲ್ಲಿ ಬರ್ತಿರುವ ಮಾಹಿತಿ ಮಾತ್ರ ತಿಳಿದಿದೆ. ನಾನು ನಿಜವಾಗಿಯೂ ಈ ಸುದ್ದಿಯಿಂದ ತೊಂದರೆಗೀಡಾಗಿದ್ದೇನೆ ಎಂದು ಹೇಳಿದ್ದಾರೆ. 

ಸಿದ್ಧಾಂತ್ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು ಅವರನ್ನು ಹಲಸೂರು ಪೊಲೀಸ್ ಸ್ಟೇಷನ್‌ಗೆ (Ulsoor police station) ಕರೆತರಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಶಂಖರ್ (Bhimashankar) ನಿನ್ನೆ ಮಾಹಿತಿ ನೀಡಿದ್ದರು. 2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ಸೇವನೆಗಾಗಿ ಸಿದ್ಧಾಂತ್ ಕಪೂರ್ (Siddhant Kapoor) ಸಹೋದರಿ ಶ್ರದ್ಧಾ ಕಪೂರ್ (Shraddha Kapoor) ಅವರನ್ನು ಎನ್ ಸಿ ಬಿ ವಿಚಾರಣೆಗೆ ಒಳಪಡಿಸಿತ್ತು. ಇದೀಗ ಸಿದ್ಧಾಂತ್ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?