ಒಂದೇ ಒಂದು ಟೆಲಿಗ್ರಾಮ್‌ ಮೆಸೇಜ್‌ನಿಂದ ಕೆಮಿಸ್ಟ್ರಿ ಪದವೀಧರ ಕೋಟ್ಯಧೀಶನಾಧ!

By Santosh Naik  |  First Published Aug 19, 2022, 12:25 PM IST

ಮುಂಬೈನಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದ ಡ್ರಗ್ಸ್‌ಅನ್ನು ಆಂಟಿ ನಾರ್ಕೋಟಿಕ್ಸ್ ಸೆಲ್ ವಶಪಡಿಸಿಕೊಂಡಿತ್ತು. ಇದರ ಒಟ್ಟಾರೆ ಮೌಲ್ಯ 2500 ಕೋಟಿ ರೂಪಾಯಿ. ನಿಷೇಧಿತ ಮೆಫೆಡ್ರೋನ್ಅನ್ನು ವಶಪಡಿಸಿಕೊಂಡ ಮುಂಬೈ ಪೊಲೀಸ್‌ ಇದಕ್ಕೆ ಸಂಬಂಧಿಸಿದಂತೆ ಪ್ರೇಮ್‌ ಪ್ರಕಾಶ್‌ ಸಿಂಗ್‌ ಎನ್ನುವ ವ್ತಕ್ತಿಯನ್ನು ಬಂಧನ ಮಾಡಿತ್ತು. ಸಾವಯವ ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದ ಪ್ರೇಮ್‌ ಸಿಂಗ್‌, ನಿಷೇಧಿತ ಡ್ರಗ್ಸ್‌ ಉದ್ಯಮಕ್ಕೆ ಇಳಿಯುವ ಮುನ್ನ ಔಷಧ ಕಂಪನಿಗಳಲ್ಲೂ ಕೆಲಸ ಮಾಡಿದ್ದ ಆದರೆ, 2019ರಲ್ಲಿ ಬಂದ ಒಂದೇ ಒಂದು ಮೆಸೇಜ್‌ ಆತನನ್ನು ಅಕ್ರಮದ ದಾರಿ ತುಳಿಯುವಂತೆ ಮಾಡಿತ್ತು.


ಮುಂಬೈ (ಆ.19): ಪ್ರೇಮ್‌ ಪ್ರಕಾಶ್‌ ಸಿಂಗ್‌ 1996ರಲ್ಲಿ ಮುಂಬೈಗೆ ಬಂದಾಗ ಅವರಲ್ಲಿ ಇದ್ದದ್ದು ಒಂದೇ ಆಸೆ. ಸಾವಯವ ರಸಾಯನಶಾಸ್ತ್ರದಲ್ಲ ಪಡೆದಿರುವ ಪದವಿ ಹಾಗೂ ಎಂಬಿಎ ಫೈನಾನ್ಸ್‌ ಪದವಿಯನ್ನು ಬಳಸಿಕೊಂಡು ಉತ್ತಮ ಕೆಲಸ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು ಎನ್ನುವುದು. ಅವರ ಆಸೆಯಂತೆ ರಾಸಾಯನಿಕ ಉತ್ಪಾದನೆಯಲ್ಲಿ ಉತ್ತಮ ಸಾಧನೆಯನ್ನೂ ಮಾಡಿ ಸಂತೃಪ್ತ ಜೀವನವನ್ನೂ ನಡೆಸಿದ್ದರು. ಆದರೆ, 2019ರಲ್ಲಿ ಟೆಲಿಗ್ರಾಮ್‌ನಲ್ಲಿ ಬಂದ ಒಂದೇ ಒಂದು ಸಂದೇಶ ಅವರ ಇಡೀ ಜೀವನವನ್ನು ಬದಲಾವಣೆ ಮಾಡಿತು. ದಹಿಸಾರ್‌ನ ನಿವಾಸಿಯಾಗಿದ್ದ ಪ್ರೇಮ್‌ ಪ್ರಕಾಶ್‌, ಅಂದಿನಿಂದ ನಿಷೇಧಿತ  ಮೆಫೆಡ್ರೋನ್ ತಯಾರಿಸಲು ಆರಂಭ ಮಾಡಿದ್ದರು. ಇತ್ತೀಚೆಗೆ ಗುಜರಾತ್‌ನಲ್ಲಿ ಮುಂಬೈನ ಆಂಟಿ ನಾರ್ಕೋಟಿಕ್ಸ್ ಸೆಲ್ ದೊಡ್ಡ ಪ್ರಮಾಣದ ಮೆಫೆಡ್ರೋನ್ ವಶಪಡಿಸಿಕೊಂಡಿತ್ತು. ಇದರ ಒಟ್ಟಾರೆ ಮೌಲ್ಯವೇ 2500 ಕೋಟಿ ರೂಪಾಯಿ. ಈ ಸಂಪೂರ್ಣ ಡ್ರಗ್‌ನ ಏಕೈಕ ತಯಾರಕ ಪ್ರೇಮ್‌ ಪ್ರಕಾಶ್‌ ಸಿಂಗ್‌ ಎಂದು ಪೊಲೀಸರು ಹೇಳಿದ್ದಾರೆ. ಈತ ಪ್ರಸ್ತುತ ಆಸ್ತಿ, ಮುಂಬೈನಲ್ಲಿ 10 ಫ್ಲ್ಯಾಟ್‌, ಐದುಸ ಅಂಗಡಿ, ಜಮೀನು, ಗೋದಾಮು, 35 ಕೋಟಿ ಹೂಡಿಕೆ, 5 ಕೋಟಿ ಬ್ಯಾಂಕ್‌ ಠೇವಣಿ, ಕೋಟಿಗಟ್ಟಲೆ ಮೌಲ್ಯದ ಬೇನಾಮಿ ಆಸ್ತಿಗಳು.

ಮುಂಬೈ ಕ್ರೈಮ್‌ ಬ್ರ್ಯಾಂಚ್‌ ಪ್ರಕಾರ, ಕೇವಲ ಪ್ರಾಥಮಿಕ ತನಿಖೆಯಲ್ಲಿ ಸಿಕ್ಕಿರುವ ಮಾಹಿತಿಯಲ್ಲಿ ದೊರೆತ ಅಂಶದ ಪ್ರಕಾರ, ಅವರ ಇಷ್ಟು ಆಸ್ತಿಗಳು ಗೊತ್ತಾಗಿದೆ. ಆದರೆ, ಇದು ಆತನ ಬೃಹತ ಆಸ್ತಿಯ ತುದಿ ಮಾತ್ರ. ಮೆಫೆಡ್ರೋನ್ ಅನ್ನು ಎಂಡಿ ಅಥವಾ ಮಿಯಾವ್‌ ಮಿಯಾವ್‌ ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ಇದು ಸಂಶ್ಲೇಷಿತ ಡ್ರಗ್‌ ಎನ್ನುವುದು ಪೊಲೀಸರ ಹೇಳಿದೆ. ದಾಳಿಯಲ್ಲಿ ಸಿಕ್ಕಿರುವ ಈ ಡ್ರಗ್‌ನ ಪ್ರಮಾಣವು, ಪ್ರಸ್ತುತ ಅದಕ್ಕೆ ಇರುವ ಬೇಡಿಕೆಯನ್ನು ತೋರಿಸುತ್ತದೆ ಎಂದಿದ್ದಾರೆ.  52 ವರ್ಷದ ಪ್ರೇಮ್‌ ಪ್ರಕಾಶ್‌, ಉತ್ತರ ಪ್ರದೇಶದ ಜೌನ್‌ಪುರ ಮೂಲದವರು. 1992ರಲ್ಲಿ ಪೂರ್ವಾಂಚಲ ವಿವಿಯಲ್ಲಿ ಎಂಎಸ್ಸಿ ಪದವಿ ಪೂರೈಕೆ ಮಾಡಿದ ವ್ಯಕ್ತಿ. ಬಳಿಕ ಅದೇ ವಿಶ್ವವಿದ್ಯಾಲಯದಲ್ಲಿ ಎಂಬಿಎ ಫೈನಾನ್ಸ್‌ ಮಾಡಿದ್ದ ಪ್ರೇಮ್‌ ಪ್ರಕಾಶ್‌ 1996ರಲ್ಲಿ ಮುಂಬೈಗೆ ಬಂದಿದ್ದರು. ಮುಂಬೈಗೆ ಬರುವ ವೇಳೆ ಅವರಲ್ಲಿ ಇದ್ದದ್ದು,  ನಲಸೋಪಾರಾದಲ್ಲಿ ಅವರ ಮಾವ ಅವರಿಗೆ ಉಡುಗೊರೆಯಾಗಿ ನೀಡಿದ ಫ್ಲಾಟ್ ಮಾತ್ರ.

Tap to resize

Latest Videos

ತನ್ನಲ್ಲಿದ್ದ ಅನುಭವವನ್ನು ಬಳಸಿಕೊಂಡು ಫಾರ್ಮಾ ಕಂಪನಿಯನ್ನು ಆರಂಭಿಸಬೇಕು ಎನ್ನುವುದು ಆತನ ಕನಸಾಗಿತ್ತು. "ಆರಂಭದಲ್ಲಿ ರಾಸಾಯನಿಕ ತಯಾರಕರೊಂದಿಗೆ ಫ್ರೀಲಾನ್ಸರ್‌ ಅಗಿ ಕೆಲಸ ಮಾಡಿದ್ದರು. ಬಳಿಕ ಅನೇಕ ದೊಡ್ಡ ರಾಸಾಯನಿಕ ಕಂಪನಿಗಳ ಸಂಪರ್ಕಕ್ಕೆ ಬಂದಿದ್ದರು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಲ್ಕು ವರ್ಷದ ಬಳಿಕ, ಹಲವಾರು ಕಂಪನಿಗಳಿಗೆ ಕಂಪೌಂಡ್‌ಗಳನ್ನು ಪೂರೈಕೆ ಮಾಡುವ ಶ್ರೇಯಾ ಕೆಮಿಕಲ್ಸ್‌ ಎನ್ನುವ ಕಂಪನಿಯನ್ನು ಆರಂಭ ಮಾಡಿದ್ದರು. ಅವರ ಕೆರಿಯರ್‌ ಹೈಸ್ಪೀಡ್‌ ಲೈನ್‌ ಅಥವಾ ಅಕ್ರಮದ ಹಾದಿಗೆ ಇಳಿದಿದ್ದು 2019ರಲ್ಲಿ ಎಂದು ಪೊಲೀಸರು ಹೇಳಿದ್ದಾರೆ.

ಟೆಲಿಗ್ರಾಮ್‌ ಸಂದೇಶ: ಪ್ರೇಮ್‌ ಪ್ರಕಾಶ್‌ ಸಿಂಗ್‌ 100ಕ್ಕೂ ಅಧಿಕ ಡ್ರಗ್‌ಗಳನ್ನು ತಯಾರಿಸಬಹುದು ಎಂದು ಮಾಹಿತಿ ಪಡೆದ ವ್ಯಕ್ತಿಯೊಬ್ಬ ಅವರನ್ನು ಸಂಪರ್ಕ ಮಾಡಿದ್ದರು. ಪ್ರೇಮ್‌ ಪ್ರಕಾಶ್‌ ಸಿಂಗ್‌ ತಯಾರಿಸುವ ರಾಸಾಯನಿಕದ ಪಟ್ಟಿಯಲ್ಲಿ ಕೆಟಮೈನ್‌ ಹೆಸರೂ ಕೂಡ ಸೇರಿತ್ತು. ಇದನ್ನು ಬಡವರ ಕೊಕೇನ್‌ ಎಂದೂ ಕರೆಯಲಾಗುತ್ತದೆ. 2019ರಲ್ಲಿ ಟೆಲಿಗ್ರಾಮ್‌ನಲ್ಲಿ ಇವರಿಗೆ ಸಂದೇಶ ಕಳಿಸಿದ ಡ್ರಗ್‌ ಡೀಲರ್‌, ಮೆಫೆಡ್ರೋನ್ ತಯಾರಿಸಿಕೊಟ್ಟರೆ ಕೋಟಿಗಟ್ಟಲೆ ಗಳಿಸಲು ಸಹಾಯ ಮಾಡುವುದಾಗಿ ಹೇಳಿ ಆತನನ್ನು ಪ್ರೇರೇಪಿಸಿದ. ಅದರ ಮೊದಲ ಹಂತವಾಗಿ ಪ್ರೇಮ್‌ ಪ್ರಕಾಶ್‌ ಮನೆಯಲ್ಲಿಯೇ 50 ಗ್ರಾಮ್‌ ಮೆಫೆಡ್ರೋನ್ ತಯಾರಿಸಿ ಡ್ರಗ್‌ ಡೀಲರ್‌ಗೆ ಕಳಿಸಿದ್ದ. ಅದರ ಗುಣಮಟ್ಟ ಕಂಡು ಸ್ವತಃ ಡ್ರಗ್‌ ಡೀಲರ್‌ ಬಹಳ ಅಚ್ಚರಿ ಪಟ್ಟಿದ್ದ' ಎಂದು ಅಧಿಕಾರಿ ತಿಳಿಸಿದ್ದಾರೆ.

ತನ್ನ ಫ್ರೀಲಾನ್ಸ್‌ ಕೆಲಸದ ವೇಳೆ ಸಿಕ್ಕಿದ್ದ ಕೆಲ ಸಂಪರ್ಕಗಳಿಂದ ಪ್ರೇಮ್‌ ಸಿಂಗ್‌, ಮೆಫೆಡ್ರೋನ್ ತಯಾರಿಕೆ ಆರಂಭಿಸಿದ್ದ. ಅವರು ಮೊದಲು ಪ್ರಕರಣದ ಆರೋಪಿ ಕಿರಣ್ ಕುಮಾರ್ ಅವರೊಂದಿಗೆ ಸಂಪರ್ಕವನ್ನು ಪಡೆದರು ಮತ್ತು ರಾಸಾಯನಿಕಗಳ ಪ್ರಮುಖ ತಯಾರಕರಾದ ಅಂಬರನಾಥ್‌ನಲ್ಲಿರುವ ನಮೌ ಕೆಮಿಕಲ್ಸ್‌ನ ಮ್ಯಾನೇಜರ್ ಆಗಿದ್ದರು. 2019-20ರಲ್ಲಿ ಟೆಲಿಗ್ರಾಮ್‌ನಲ್ಲಿ ಸಂವಾದ ನಡೆಸಿದ ವಿವಿಧ ವಿತರಕರ ನೆರವಿನೊಂದಿಗೆ ಅವರು ಅದೇ ರಾಸಾಯನಿಕ ಉತ್ಪಾದನಾ ಕಂಪನಿಯಲ್ಲಿ ಹೆಚ್ಚಿನ ಪ್ರಮಾಣದ ಎಂಡಿಯನ್ನು ತಯಾರಿಸಿದರು ಮತ್ತು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರು ಎಂದು ಎಎನ್‌ಸಿಯ ಉಪ ಪೊಲೀಸ್ ಆಯುಕ್ತ ದತ್ತ ನಲವಾಡೆ ಹೇಳಿದರು.

ಅವರ ವ್ಯಾಪಾರ ಬೆಳೆದಂತೆ, ಸಿಂಗ್ 35 ಕ್ಕೂ ಹೆಚ್ಚು ಡ್ರಗ್ ಡೀಲರ್‌ಗಳಿಗೆ ತಿಂಗಳಿಗೆ 100 ಕೆಜಿಗಿಂತ ಹೆಚ್ಚು ಸರಬರಾಜು ಮಾಡಲು ಪ್ರಾರಂಭಿಸಿದರು, ಹೆಚ್ಚಾಗಿ ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಅವರ ವ್ಯಾಪಾರದ ತಾಣವಾಗಿತ್ತು. ಹೆಚ್ಚಿನ ಮೆಫೆಡ್ರೋನ್ ಉತ್ಪಾದಿಸಲು, ಅವರು ಗುಜರಾತ್‌ನ ಅಂಕಲೇಶ್ವರಕ್ಕೆ ನೆಲೆಯನ್ನು ಬದಲಾಯಿಸಿದರು, ಅಲ್ಲಿ ಅವರು ಇನ್ನೊಬ್ಬ ಆರೋಪಿ ಗಿರಿರಾಜ್ ದೀಕ್ಷಿತ್ ಅವರೊಂದಿಗೆ ವ್ಯವಹರಿಸಲು ಪ್ರಾರಂಭಿಸಿದರು. ಫ್ರೀಲಾನ್ಸ್‌ ಸಮಯದಿಂದಲೂ ಗಿರಿರಾಜ್‌ ದೀಕ್ಷಿತ್‌ ಜೊತೆ ಪ್ರೇಮ್‌ ಸಿಂಗ್‌ ಸಂಪರ್ಕದಲ್ಲಿದ್ದರು. ದೀಕ್ಷಿತ್ ಅವರು ಇನ್ಫಿನಿಟಿ ಸಂಶೋಧನೆ ಮತ್ತು ಅಭಿವೃದ್ಧಿಯ ನಿರ್ದೇಶಕರಾಗಿದ್ದರು, ಇದು ಎರಡನೇ ಹಂತದ ಕೈಗಾರಿಕಾ ರಾಸಾಯನಿಕಗಳನ್ನು ತಯಾರಿಸುತ್ತಿದೆ. ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ದೀಕ್ಷಿತ್ ಅವರು ಸಿಂಗ್‌ಗೆ ಸಾಕಷ್ಟು ಮೆಫೆಡ್ರೋನ್ ಉತ್ಪಾದಿಸಲು ಸಹಾಯ ಮಾಡಿದರು ಮತ್ತು ಇಬ್ಬರೂ ಕೋಟಿಗಟ್ಟಲೆ ಹಣ ಗಳಿಸಿದರು.

700 ಕೆಜಿ 'ಮಿಯಾವ್ ಮಿಯಾವ್' ಡ್ರಗ್‌ ವಶ, ಇದರ ಮೌಲ್ಯ 1400 ಕೋಟಿ ರೂಪಾಯಿ!

ಟನ್‌ಗಟ್ಟಲೆ ಡ್ರಗ್‌ ವಶ: 2019 ರಿಂದ 2021ರ ಅವಧಿಯಲ್ಲಿ ಪ್ರೇಮ್‌ ಸಿಂಗ್‌ ಕನಿಷ್ಠ 1.5 ಟನ್‌ ಗಳಷ್ಟು ಅಂದರೆ, 3 ಸಾವಿರ ಕೋಟಿ ರೂಪಾಯಿ ಮೌಲ್ಯದ ಮೆಫೆಡ್ರೋನ್‌ಅನ್ನು ತಯಾರು ಮಾಡಿದ್ದಾರೆ. ಇನ್ನು ಕಳೆದ ಆರು ತಿಂಗಳಲ್ಲಿಯೇ ಅವರ ಗುಜರಾತ್‌ ಫ್ಯಾಕ್ಟರಿಗೆ 1.5 ಟನ್‌ ಮೆಫೆಡ್ರೋನ್‌ ತಯಾರಿಕೆಯ ಆರ್ಡರ್‌ ಬಂದಿತ್ತು. ಇವುಗಳ ಪೈಕಿ 1218 ಕೆಜಿಯ ಡ್ರಗ್‌ ಅನ್ನು ವಶಪಡಿಸಿಕೊಂಡಿದ್ದಾರೆ.  ಮೊದಲಿಗೆ ಆಗಸ್ಟ್‌ 2 ರಂದು ನಲಸೋಪರ ಗೋದಾಮಿನಿಂದ 705 ಕೆಜಿಯ 1450 ಕೋಟಿ ಮೌಲ್ಯದ ಮೆಫೆಡ್ರೋನ್‌, ಆಗಸ್ಟ್‌ 13 ರಂದು ಗುಜರಾತ್‌ ಫ್ಯಾಕ್ಟರಿಯಿಂದ 513 ಕೆಜಿಯ 1026 ಕೋಟಿ ರೂಪಾಯಿ ಮೌಲ್ಯದ ಡ್ರಗ್‌ ವಶಡಿಸಿಕೊಂಡಿದ್ದಾರೆ.

ಗುಜರಾತ್‌ನಲ್ಲಿ 1,026 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಸೀಜ್‌ ಮಾಡಿದ ಮುಂಬೈ ಪೊಲೀಸ್

ಪೊಲೀಸರಿಗೆ 5 ಕೋಟಿಯ ಆಫರ್‌: ತನ್ನ ಬಿಡುಗಡೆ ಮಾಡುವುದಾದರೆ, 5 ಕೋಟಿ ರೂಪಾಯಿ ನೀಡುವುದಾಗಿ ಪ್ರೇಮ್‌ ಸಿಂಗ್ ಹೇಳಿದ್ದ. ಅಧಿಕಾರಿಗಳು ಈತನ ಅಫರ್‌ಅನ್ನು ಒಪ್ಪಿದ ಬಳಿಕವೇ ಆತನೊಂದಿಗೆ ಗುಜರಾತ್‌ ಫ್ಯಾಕ್ಟರಿಗೆ ಹೋಗಿ ಇನ್ನಷ್ಟು ಡ್ರಗ್‌ ಅನ್ನು ವಶಪಡಿಸಿಕೊಂಡಿದ್ದಾರೆ. ಮುಂಬೈನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪ್ರೇಮ್‌ ಸಿಂಗ್ ವಾಸವಿದ್ದ. ಮಗ ಬಿಟೆಕ್‌ ಓದುತ್ತಿದ್ದರೆ, ಮಗಳು ಪದವಿ ಕಲಿಯುತ್ತಿದ್ದಾಳೆ. ಒಬ್ಬರಿಗೆ ಒಂದು ಹಂತದಲ್ಲಿ 25 ಕೆಜಿಗಿಂತ ಹೆಚ್ಚಿನ ಡ್ರಗ್‌ಅನ್ನು ಆತ ನೀಡುತ್ತಿರಲಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.

ಒಂದು ಕಾರ್‌ ಕೂಡ ಇರಲಿಲ್ಲ: ಇಷ್ಟೆಲ್ಲಾ ಆಸ್ತಿ ಇದ್ದರೂ ಪ್ರೇಮ್‌ ಸಿಂಗ್‌ ಬಳಿ ಒಂದು ಕಾರ್‌ ಕೂಡ ಇದ್ದಿರಲಿಲ್ಲ. ತನ್ನೆಲ್ಲಾ ಹಣವನ್ನು ಆಸ್ತಿಯ ಮೇಲೆ ಹಾಕಿದ್ದ. ದಹಿಸಾರ್‌ನಲ್ಲಿ ಈ ವರ್ಷ 1.5 ಕೋಟಿ ರೂಪಾಯಿ ಮೌಲ್ಯದ 3 ಬಿಎಚ್‌ಕೆ ಫ್ಲ್ಯಾಟ್‌ ಅನ್ನು ಖರೀದಿ ಮಾಡಿದ್ದ. ಅದಾದ ಬಳಿಕ ದಹಿಸಾರ್‌ನಲ್ಲಿಯೇ 50 ಲಕ್ಷದ 1 ಬಿಎಚ್‌ಕೆ ಫ್ಲ್ಯಾಟ್‌,3.6 ಕೋಟಿ ಮೌಲ್ಯದ ಎರಡು ಅಂಗಡಿಯನ್ನು ಈತ ಹೊಂದಿದ್ದ.
 

click me!