ಬೆಂಗಳೂರು: ಅನುಮತಿ ಪಡೆಯದೇ ಈವೆಂಟ್ ಆಯೋಜನೆ, ಮೌಂಟ್ ಕಾರ್ಮೆಲ್ ಕಾಲೇಜ್ ವಿರುದ್ಧ FIR

By Girish GoudarFirst Published Aug 19, 2022, 7:37 AM IST
Highlights

ಯಾವುದೇ ಅನುಮತಿ ಪಡೆಯದೇ ಈವೆಂಟ್ ಆಯೋಜಿಸಿ ಟ್ರಾಫಿಕ್ ಜಾಮ್‌ಗೂ ಕಾರಣರಾಗಿದ್ದ ಕಾಲೇಜು ಆಡಳಿತ ಮಂಡಳಿ

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಆ.19):  ನಗರದ ಪ್ರತಿಷ್ಟಿತ ಮೌಂಟ್ ಕಾರ್ಮೆಲ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಅನುಮತಿ‌ ಇಲ್ಲದೇ ಸಾವಿರಾರು ಮಂದಿ ಸೇರಿಸಿ ಕಾಲೇಜು ಈವೆಂಟ್ ಆಯೋಜಿಸಿದ್ದ ಆರೋಪ ಕೇಳಿ ಬಂದಿದೆ. ಈವೆಂಟ್‌ನಲ್ಲಿ ಸುಮಾರು 8 ರಿಂದ 10 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ರು. ಈ ವೇಳೆ ಕೆಲ ವಿದ್ಯಾರ್ಥಿಗಳು ಬ್ಲೇಡ್ ಚಾಕು ಸಿಗರೇಟ್ ಎಣ್ಣೆ ಬಾಟಲಿ ತಂದಿದ್ದರು ಅಂತ ಹೇಳಲಾಗುತ್ತಿದೆ. 

ಈವೆಂಟ್‌ನಲ್ಲಿ ಸೇರಿದ್ದ ಕೆಲವರಿಂದ ಕಾಲೇಜು ವಿದ್ಯಾರ್ಥಿಗಳ ಮೇಲೆ ಅಟ್ಯಾಕ್ ಮಾಡಿದ್ರು. ಅಶ್ಲೀಲ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಲು ಯತ್ನಿಸಿರೋ ಆರೋಪ ಕೇಳಿ ಬಂದಿದೆ. ಮೌಂಟ್ ಕಾರ್ಮಲ್ ಕಾಲೇಜಿನಿಂದ ನಡೆದಿದ್ದ ಈವೆಂಟ್‌ನಲ್ಲಿ ಪ್ರತಿ ವಿದ್ಯಾರ್ಥಿಗೆ 20 ಪಾಸ್ ನೀಡಲಾಗಿತ್ತು.

ಕ್ಲಬ್‌ಹೌಸ್‌ನಲ್ಲಿ ಪಾಕ್‌ ಪ್ರೇಮ: ಪ್ರಕರಣ ದಾಖಲಿಸಿ ಕಿಡಿಗೇಡಿಗಳ ಬೇಟೆಗೆ ಮುಂದಾದ ಪೊಲೀಸರು

ಪ್ರತಿ ಪಾಸ್‌ಗೆ 100 ರೂ ನಂತೆ ಮಾರಾಟ ಮಾಡಿದ್ದ ಕಾಲೇಜಿನ ವಿದ್ಯಾರ್ಥಿಗಳು. ಆ. 15 ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನ ಈವೆಂಟ್ ಆಯೋಜಿಸಿದ್ದ ಮೌಂಟ್ ಕಾರ್ಮಲ್ ಕಾಲೇಜು ಆಡಳಿತ ಮಂಡಳಿ. ಬೇರೆ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಪಾಸ್ ಪಡೆದು ಹಲವು ಮಂದಿ ಕಾಲೇಜು ಈವೆಂಟ್‌ಗೆ ಭಾಗಿಯಾಗಿದ್ದರು.

ಯಾವುದೇ ಅನುಮತಿ ಪಡೆಯದೇ ಈವೆಂಟ್ ಆಯೋಜಿಸಿ ಟ್ರಾಫಿಕ್ ಜಾಮ್‌ಗೂ ಕಾರಣರಾಗಿದ್ದ ಕಾಲೇಜು ಆಡಳಿತ ಮಂಡಳಿ. ಸ್ಥಳಕ್ಕೆ ಆಗಮಿಸಿದ್ದ ಹೈಗ್ರೌಂಡ್ಸ್ ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದು ಗುಂಪು ಚದುರಿಸಿದ್ದರು. ಈ ವೇಳೆ ಪುಂಡರಿಗೆ ಎಸಿಪಿ ಚಂದನ್ ಕುಮಾರ್ ಲಾಠಿ ಏಟುಕೊಟ್ಟಿದ್ದ ದೃಶ್ಯ ಕೂಡ ಸೆರೆಯಾಗಿದೆ. ಹೈಗ್ರೌಂಡ್ಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸಚಿನ್ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
 

click me!