* ಮದ್ಯ ಸೇವಿಸಲು .100 ಕೇಳಿದ್ದಕ್ಕೆ ಹೊಡೆದು ಕೊಂದ
* ಸ್ನೇಹಿತನನ್ನೇ ಕೊಂದು ಅಪಘಾತದ ಕತೆ ಹೆಣೆದ ಗೆಳೆಯ
* ಕೆಲಸ ತೊರೆದು ಗಾರೆ ಕೆಲಸ ಮಾಡುತ್ತಿದ್ದವನ ಬಂಧನ
*ಕೊಡಿಗೇಹಳ್ಳಿಯಲ್ಲಿ ಫೋರ್ಕ್ ಸ್ಟಾಲ್‌ನಲ್ಲಿ ಘಟನೆ
ಬೆಂಗಳೂರು(ಡಿ. 18) ಮದ್ಯಪಾನ (Liquor)ಮಾಡಲು 100 ಕೇಳಿದವನಿಗೆ ತೂಕ ಮಾಡುವ ಬಟ್‌ನಿಂದ ತಲೆಗೆ ಹೊಡೆದು ಕೊಂದು (Murder) ಬಳಿಕ ಅಪಘಾತವಾಗಿದೆ ಎಂದು ಸುಳ್ಳಿನ ಕತೆ ಹೇಳಿ ತಪ್ಪಿಸಿಕೊಂಡಿದ್ದ ಮಾಂಸದಂಗಡಿ ಕೆಲಸಗಾರನೊಬ್ಬ ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ(Bengaluru Police) ಸಿಕ್ಕಿಬಿದ್ದಿದ್ದಾನೆ.
ಮತ್ತಿಕೆರೆ ನಿವಾಸಿ ಪ್ರತೀಕ್.ಎಸ್.ಯಾದವ್ (28) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಕೇರಳ (Kerala) ಮೂಲದ ಸಮೀಶ್‌ನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಕೊಡಿಗೇಹಳ್ಳಿ ತಿಂಡ್ಲು ಸರ್ಕಲ್‌ನ ಕರ್ನಾಟಕ ಫೋರ್ಕ್ ಮಟನ್ ಸ್ಟಾಲ್‌ನಲ್ಲಿ ಈ ಕೃತ್ಯ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.
undefined
ಐದಾರು ತಿಂಗಳಿಂದ ಸುರೇಶ್ ಎಂಬುವರಿಗೆ ಸೇರಿದ ಕೊಡಿಗೇಹಳ್ಳಿ ತಿಂಡ್ಲು ಸರ್ಕಲ್‌ನಲ್ಲಿದ್ದ ಕರ್ನಾಟಕ ಫೋರ್ಕ್ ಮಟನ್ ಸ್ಟಾಲ್‌ನಲ್ಲಿ ಕೇರಳ ಮೂಲದ ಸಮೀಶ್ ಮಾಂಸ ಕತ್ತರಿಸುವ ಕೆಲಸ ಮಾಡುತ್ತಿದ್ದ. ಆ ಅಂಗಡಿಗೆ ತನ್ನ ಮಾಲೀಕನ ಜತೆ ಆಗಾಗ್ಗೆ ಬರುತ್ತಿದ್ದ ಪ್ರತೀಕ್ ಜತೆ ಸಮೀಶ್‌ಗೆ ಸ್ನೇಹವಾಗಿತ್ತು. ಇದೇ ಗೆಳತನದಲ್ಲಿ ಅ.17ರಂದು ಸುರೇಶ್ ಜತೆ ಅಂಗಡಿಗೆ ಬಂದ ಪ್ರತೀಕ್, ಮದ್ಯ ಸೇವನೆಗೆ .100 ಕೊಡುವಂತೆ ಸಮೀಶ್‌ಗೆ ಕೇಳಿದ್ದಾನೆ. ಆಗ ತನ್ನ ಬಳಿ ಹಣವಿಲ್ಲವೆಂದು ಹೇಳಿದಾಗ ಗೆಳೆಯನಿಗೆ ಪ್ರತೀಕ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಕೆರಳಿದ ಆರೋಪಿ, ಪ್ರತೀಕ್ ತಲೆಗೆ 1 ಕೆ.ಜಿ. ತೂಕದ ಬಟ್‌ನಿಂದ ಹೊಡೆದಿದ್ದಾನೆ. ಆಗ ಕೆಳಗೆ ಬಿದ್ದ ಗಾಯಾಳುವನ್ನು ತನ್ನ ಸೋದರನ ಸುಬ್ರಮಣಿ ಮೂಲಕ ಆಸ್ಪತ್ರೆಗೆ ಮಾಲೀಕ ಸುರೇಶ್ ದಾಖಲಿಸಿದ್ದರು. ಘಟನೆ ಬಳಿಕ ಬಂಧನ ಭೀತಿಯಿಂದ ಕೆಲಸ ತೊರೆದ ಆರೋಪಿ, ಆನೇಕಲ್ ತಾಲೂಕಿಗೆ ಹೋಗಿ ಗಾರೆ ಕೆಲಸ ಮಾಡುತ್ತಿದ್ದ.
ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು : ಕೊಂದೇ ಬಿಟ್ಟ ಪಾಪಿ !
ಇತ್ತ ಆಸ್ಪತ್ರೆಗೆ ಕರೆದೊಯ್ದ ಸುಬ್ರಮಣಿ, ಬಳಿಕ ಅಪಘಾತದಲ್ಲಿ ಪ್ರತೀಕ್ ಗಾಯಗೊಂಡಿದ್ದಾನೆ ಎಂದು ಯಶವಂತಪುರ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದ. ಈ ಘಟನೆ ನಡೆದ ನಾಲ್ಕು ದಿನಗಳ ನಂತರ ಪ್ರತೀಕ್ ಸಾವನ್ನಪ್ಪಿದ್ದ. ಆಗ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ತಲೆಗೆ ಬಲವಾದ ಪೆಟ್ಟಿನಿಂದ ಪ್ರತೀಕ್ ಸಾವನ್ನಪ್ಪಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ಈ ವರದಿ ಆಧರಿಸಿ ಕೃತ್ಯ ನಡೆದಿದ್ದ ಕೊಡಿಗೇಹಳ್ಳಿ ಠಾಣೆಗೆ ಪ್ರಕರಣವು ತನಿಖೆ ವರ್ಗವಾಯಿತು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಕೂಡಲೇ ಸುಬ್ರಮಣಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಂದು ತಮ್ಮ ಮಾಂಸದ ಅಂಗಡಿಯಲ್ಲಿ ನಡೆದ ಗಲಾಟೆ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ನಂತರ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಸಮೀಶ್‌ನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಂಡತಿ ಹತ್ಯೆ ಮಾಡಿದ್ದ: ಬೆಂಗಳೂರಿನಲ್ಲಿ ಗೃಹಿಣಿ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಹೆಂಡತಿಯನ್ನೆ ಕೊಲೆ ಮಾಡಿ ಪತಿಯೇ ಕೆರೆಗೆ ಎಸೆದಿದ್ದು ಕಳೆದ ಆಗಸ್ಟ್ ನಲ್ಲಿ ಬಹಿರಂಗವಾಗಿತ್ತು. ಶಿರಿನ್ (28) ಗಂಡನಿಂದ ಕೊಲೆ ಯಾದ ಗೃಹಿಣಿ ಹೆಂಡತಿಯನ್ನೆ ಕೊಲೆ ಮಾಡಿ ಚಿಕ್ಕಬಾಣಾವಾರ ಕೆರೆಗೆ ಪತಿ ಮುಬಾರಕ್ ಎಸೆದಿದ್ದ.
ಸೋಲದೇವನಹಳ್ಳಿ ಠಾಣಾ ವ್ಯಾಪ್ತಿ ತರಬನಹಳ್ಳಿಯಲ್ಲಿ ಕುಟುಂಬ ವಾಸವಾಗಿತ್ತು. 7 ವರ್ಷದ ಹಿಂದೆ ಮದುವೆಯಾಗಿದ್ದವರಿಗೆ ಇಬ್ಬರು ಮಕ್ಕಳು. ಪ್ರತಿನಿತ್ಯ ಸಣ್ಣ ಪುಟ್ಟ ವಿಚಾರಕ್ಕೆ ದಂಪತಿ ನಡುವೆ ಜಗಳ ಆಗುತ್ತಿತ್ತು. ಮೂಲತಃ ದಾವಣಗೆರೆಯವರಾಗಿದ್ದ ದಂಪತಿ ಬೆಂಗಳೂರಿನಲಲ್ಲಿ ವಾಸವಿದ್ದರು. ಜಗಳ ವಿಕೋಪಕ್ಕೆ ಹೋಗಿದ್ದು ಗಂಡನೇ ಪತ್ನಿ ಹತ್ಯೆ ಮಾಡಿ ಕರೆಗೆ ಹಾಕಿದ್ದಾನೆ. ಮೃತ ದೇಹ ಚಿಕ್ಕಬಾಣಾವರ ಕೆರೆಯಲ್ಲಿ ಪತ್ತೆಯಾಗಿತ್ತು. ಅಡುಗೆ ಸರಿಯಾಗಿಲ್ಲ, ರೊಟ್ಟಿ ಬೆಂದಿಲ್ಲ ಎಂಬ ಕಾರಣಕ್ಕೂ ಕೊಲೆ ನಡೆದುಹೋದ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿತ್ತು.
ಪಬ್ ಜಿ ಹುಚ್ಚಾಟ: ಆನ್‌ಲೈನ್ ಗೇಮ್ ಪಬ್‌ಜೀ ಆಟದ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕರೊಳಗೆ ಚಕಮಕಿ ನಡೆದು ಕೊಲೆಯಲ್ಲಿ ಅಂತ್ಯವಾದ ಪ್ರಕರಣ ಮಂಗಳೂರಿನಿಂದ ವರದಿಯಾಗಿತ್ತು.
ಉಳ್ಳಾಲದ ಕೆ.ಸಿ.ರೋಡ್ ನಿವಾಸಿ ಮೊಹಮ್ಮದ್ ಆಕೀಫ್(12) ಎಂಬಾತನೇ ಭೀಕರ ಹತ್ಯೆಗೆ ಒಳಗಾದ ಬಾಲಕ. ಈತನ ಹತ್ಯೆ ನಡೆಸಿದಾತ 17 ವರ್ಷದ ಬಾಲಕ. ಬಾಲಆರೋಪಿಯನ್ನು ಪೊಲೀಸರು ಬಂಧಿಸಿದ್ದರು.