ಬೆಂಗಳೂರು: ಬಾಂಗ್ಲಾ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದು ಟ್ಯಾಂಕರ್ ಚಾಲಕ!

Published : Feb 05, 2025, 08:39 AM IST
ಬೆಂಗಳೂರು: ಬಾಂಗ್ಲಾ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದು ಟ್ಯಾಂಕರ್ ಚಾಲಕ!

ಸಾರಾಂಶ

ಬಾಗಲಕೋಟೆ ಮೂಲದ ಮುದುಕಪ್ಪ ಬಂಧಿತ. ಆರೋಪಿಯು ಜ.23ರಂದು ಬಾಂಗ್ಲಾ ಮೂಲದ ನಜ್ಮಾ(28) ಎಂಬಾಕೆಯನ್ನು ಕಲ್ಕೆರೆ ಕೆರೆಯ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿ ಬಳಿಕ ಉಸಿರುಗಟ್ಟಿ ಹತ್ಯೆ ಮಾಡಿ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖ ಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರು(ಫೆ.05): ಇತ್ತೀಚೆಗೆ ಕಲ್ಕೆರೆ ಪ್ರದೇಶದಲ್ಲಿ ಬಾಂಗ್ಲಾ ಮೂಲದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಬಳಿಕ ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಮೂಲದ ಮುದುಕಪ್ಪ(30) ಬಂಧಿತ. ಆರೋಪಿಯು ಜ.23ರಂದು ಬಾಂಗ್ಲಾ ಮೂಲದ ನಜ್ಮಾ(28) ಎಂಬಾಕೆಯನ್ನು ಕಲ್ಕೆರೆ ಕೆರೆಯ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿ ಬಳಿಕ ಉಸಿರುಗಟ್ಟಿ ಹತ್ಯೆ ಮಾಡಿ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖ ಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಚನ್ನಗಿರಿ ಶಾಲಾ ಬಾಲಕಿ ಮೇಲೆ ಬಲತ್ಕಾರ ; ವಿಕೃತ ಕಾಮುಕ ಅಮ್ಜಾದ್ ಬಂಧನ!

ನೀರು ಹಾಕುವಾಗ ನಜ್ಮಾ ಮೇಲೆ ಕಣ್ಣಿಟ್ಟಿದ್ದ:

ಆರೋಪಿ ಮುದುಕಪ್ಪ ವಾಟರ್‌ ಟ್ಯಾಂಕರ್‌  ಚಾಲಕನಾಗಿದ್ದಾನೆ. ನಗರದ ರಾಮಮೂರ್ತಿ ನಗರ. ಕೊತ್ತನೂರು ಸುತ್ತಮುತ್ತಲ ಅಪಾಟ್ ೯ಮೆಂಟ್‌ ಗಳು, ಅಂಗಡಿಗಳು, ಜೋಪಡಿಗಳಿಗೆ ಟ್ಯಾಂಕ‌ರ್ ನೀರು ಸರಬರಾಜು ಮಾಡುತ್ತಿದ್ದ. ಬಾಂಗ್ಲಾ ಮೂಲದ ನಜ್ಞಾ ಹಾಗೂ ಆಕೆಯ ಪತಿ ಸುಮನ್ ದಂಪತಿ ತಮ್ಮ 3 ಮಕ್ಕಳೊಂದಿಗೆ ಕೊತ್ತನೂರಿನ ಕೃಷ್ಣಪ್ಪ ಲೇಔಟ್‌ನ ಶೆಡ್‌ನಲ್ಲಿ ನೆಲೆಸಿದ್ದರು. ಈ ಶೆಡ್‌ಗಳಿಗೂ ಮುದುಕಪ್ಪ ನೀರು ಪೂರೈಕೆ ಮಾಡುತ್ತಿದ್ದ. ಈ ವೇಳೆ ನಜ್ಞಾ ಳನ್ನು ನೋಡಿದ್ದ. ಒಂದೆರೆಡು ಬಾರಿ ಮಾತನಾ ಡಿಸಿದ್ದ. ಬಳಿಕ ನಜ್ಜಾ ಮೇಲೆ ಕಣ್ಣಿಟ್ಟಿದ್ದ ಆರೋಪಿಯು ಆಕೆ ಕೆಲಸ ಮಾಡುವ ಸ್ಥಳ, ಓಡಾಡುವ ರಸ್ತೆಗಳನ್ನು ನೋಡಿಕೊಂಡು ನಿಗಾವಹಿಸಿದ್ದ.

ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ, ಹತ್ಯೆ: 

ನಜ್ಮಾ ಜ.23ರಂದು ಕಲ್ಕೆರೆಯ ಡಿಎಸ್‌ಆರ್ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಸುಮಾರು 2 ಗಂಟೆಗೆ ಮನೆ ಕಡೆಗೆ ಹೊರಟಿದ್ದಳು. ಕಲ್ಕೆರೆ ಕೆರೆಯ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಬರುವಾಗ, ಹಿಂಬಾಲಿಸಿರುವ ಆರೋಪಿ ಮುದುಕಪ್ಪ, ನಜ್ಜಾಳನ್ನು ಕೆರೆ ದಡದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆಯ ವೇಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ಆಕೆಯ ಗುರುತು ಸಿಗದಂತೆ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ.

ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆ:

ಮಾರನೇ ದಿನ ದಾರಿಹೋಕರು ಕಲ್ಕೆರೆ ಕೆರೆ ದಡದ ಪೊದೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ದೌಡಾ ಯಿಸಿ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಈ ಸಂಬಂಧ ಮೃತಳ ಪತಿ ಸುಮನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. 

ಸಿಸಿಟಿವಿ ಸುಳಿವು ಆಧರಿಸಿ ಬಂಧನ

ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿದಾಗ ಕೆರೆಯ ಪಕ್ಕದ ರಸ್ತೆಯಲ್ಲಿ ಐದಾರು ಮಂದಿ ಅನುಮಾನಾಸ್ಪದವಾಗಿ ದವಾಗಿ ಓಡಾಡಿರುವುದು ಕಂಡು ಬಂದಿತ್ತು. ಇದರಲ್ಲಿ ಆರೋಪಿ ಮುದುಕಪ್ಪನ ಚಲನವಲನ ಸೆರೆಯಾಗಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. 

7ನೇ ಕ್ಲಾಸ್‌ ಹುಡುಗಿ ಮೇಲೆ ರೇಪ್‌, ಹತ್ಯೆಗೆ 9ನೇ ಕ್ಲಾಸ್‌ ಬಾಲಕನಿಗೆ 100 ರು.ನ ಸುಪಾರಿ ಕೊಟ್ಟ ವಿದ್ಯಾರ್ಥಿ! ಏನಿದು ಸೇಡು?

ಹತ್ಯೆಯಾದ ನಜ್ಮಾ ಅಕ್ರಮ ವಾಸಿ

ಬಾಂಗ್ಲಾ ಮೂಲದ ಸುಮನ್ ಮತ್ತು ನಜ್ಮಾ 6 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ದಂಪತಿ ಮೂವರು ಮಕ್ಕಳಿವೆ. ಸುಮನ್ ಬಿಬಿಎಂಪಿ ಕಸದ ಯಾರ್ಡ್‌ಲ್ಲಿ ಕೆಲಸ ಮಾಡಿದರೆ, ನಜ್ಜಾ ಡಿಎಸ್‌ಆರ್ ಆಪಾರ್ಟ್ ಮೆಂಟ್‌ನಲ್ಲಿ ಮನೆಗೆಲಸ ಮಾಡಿಕೊಂಡಿದ್ದಳು. ಸುಮನ್ ಪಾಸ್‌ಪೋರ್ಟ್ ಮೂಲಕ ಭಾರತಕ್ಕೆ ಬಂದಿದ್ದಾನೆ. ಆದರೆ, ನಜ್ಮಾ ಅಕ್ರಮವಾಗಿ ಭಾರತಕ್ಕೆ ಬಂದು ಪತಿ ಜತೆಗೆ ನೆಲೆಸಿದ್ದಳು.

ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆ ಮತ್ತು ಗಡೀಪಾರು ನಿರಂತರವಾಗಿ ನಡೆಯುತ್ತಿದೆ. ಬಾಂಗ್ಲಾ ಅಕ್ರಮ ವಲಸಿಗರು ಮಾತ್ರವಲ್ಲದೇ ಆಫ್ರಿಕಾ ಮೂಲದವರು ನಗರದಲ್ಲಿ ಅಕ್ರಮವಾಗಿ ನೆಲೆಸಿ ಅಪರಾಧ ಚಟುವಟಿಕೆಗಳು, ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದಾರೆ. ಇಂತವರನ್ನು ಪತ್ತೆ ಹಚ್ಚಿ ಗಡೀಪಾರು ಮಾಡುವ ಕೆಲಸವಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Mallikarjuna Mutya: ಅಪ್ರಾಪ್ತ ಬಾಲಕಿಯ ಅಪ್ಪಿಕೊಂಡು ಮುದ್ದಾಟ, ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಮೇಲೆ ಬಿತ್ತು ಕೇಸ್‌!
ನಿರ್ಭಯಾ ಕೇಸ್​ನಿಂದ ಶಿವಮೊಗ್ಗದ ಸಂಕೇತ್​ ಕೊ*ಲೆಯವರೆಗೆ ಅದೇ ಅಪ್ರಾಪ್ತರು! ಸತ್ಯ ಮಾತ್ರ ಘನಘೋರ