
ಬೆಂಗಳೂರು ದಕ್ಷಿಣ(ಫೆ.05): ವ್ಯಾಟ್ಸಪ್ ವಿಡಿಯೋ ಕರೆ ಮಾಡಿ ನಿಮ್ಮ ಖಾತೆಯಲ್ಲಿ ಮನಿಲ್ಯಾಂಡರಿಂಗ್ ನಡೆದಿದೆ. ನಿಮ್ಮನ್ನು ಮತ್ತು ನಿಮ್ಮ ಮನೆ ಅವರನ್ನು ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿ ಮಹಿಳೆಯಿಂದ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವ ಘಟನೆ ಬೇಗೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರು ಪೊಲೀಸ್ ಠಾಣಾ ಸರಹದ್ದಿನ ರಾಘವೆಂದ್ರ ಲೇಔಟ್‌ನಲ್ಲಿ ವಾಸವಾಗಿರುವ ವಿಣಾ (30) ಎಂಬ ಗೃಹಿಣಿಗೆ ವ್ಯಕ್ತಿಯೊಬ್ಬ ನಾವು ಟ್ರಾಯ್ ನಿಂದು ಕೆರೆ ಮಾಡುತ್ತಿದ್ದೇವೆ, ನಿಮ್ಮ ಮೊಬೈಲ್ ನಂಬರಿನಿಂದ ಕಾನೂನು ಬಾಹಿರ ಚಟುವಟಿಕೆ ನಡೆದಿದೆ. ನಿಮ್ಮ ಏರ್‌ಟೆಲ್ ಕಂಪನಿಯ ಸಿಮ್ ಬ್ಲಾಕ್ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ ಕಾರಿಗೆ ಅಡ್ಡ ಬಿದ್ದು ಹಣ ವಸೂಲಿ ಮಾಡುವ ಗ್ಯಾಂಗ್ ಸಕ್ರಿಯ!
ದೆಹಲಿ ಸಿಬಿಐನಲ್ಲಿ ನಿಮ್ಮ ನಂಬರ್ ಮೇಲೆ ದೂರು ದಾಖಲಾಗಿದೆ. ನೀರವ್ ಅಗರ್‌ವಾಲ ವ್ಯಕ್ತಿಯ ಪ್ರಕರಣದಲ್ಲಿ ನೀವು ಭಾಗಿಯಾಗಿದ್ದೀರಾ ಈ ತಕ್ಷಣವೆ ನೀವು ದೆಹಲಿಗೆ ಬಂದು ದೂರು ದಾಖಲಿಸಿ ಇಲ್ಲವಾದರೆ ಆನ್‌ಲೈನ್ ವಿಡಿಯೋ ಕಾಲ್ ನಲ್ಲಿ ವಿಚಾರಣೆ ಎದುರಿಸಿ ಎಂದು ಹೇಳಿ ಮಹಿಳೆಗೆ ವ್ಯಾಟ್ಸಪ್ ವಿಡಿಯೋ ಕರೆ ಮೂಲಕ ಹೆದರಿಸಲಾಗಿದೆ. ನೀವು ಈ ಪ್ರಕರಣದಿದಂದ ಹೊರ ಬರಬೇಕಾದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ಹೇಳುವ ಖಾತೆಗೆ ವರ್ಗಾಯಿಸಿ ನಾವು ಆರ್‌ಬಿಐ ನಿಯಮದ ಪ್ರಕಾರ ಅದನ್ನು ಪರಿಶೀಲಿಸಿ ನಿಮಗೆ ವಾಪಸ್ಸು ನೀಡಲಾಗುವುದು ಎಂದು ₹39,74,000 ಹಣವನ್ನು ಮಹಿಳೆಯ ಖಾತೆಯಿಂದ ಆರೋಪಿ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ಮಹಿಳೆ ಬೇಗೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೇಗೂರು ಪೋಲಿಸರು ದೂರಿನನ್ವಯ ಪ್ರಕರಣವನ್ನು ಕೈಗೆತ್ತಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದಾಗ ಅದರಲ್ಲಿ ಒಂದು ಖಾತೆಗೆ ₹6,52,000 ವರ್ಗಾವಣೆಯಾಗಿ ಚೆಕ್ ಮೂಲಕ ಹಣ ಡ್ರಾ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ.
ಮದುವೆಯಾಗಲು ಹುಡುಗಿ ತೋರಿಸುವ ನೆಪದಲ್ಲಿ ವೇಶ್ಯಾವಾಟಿಕೆ ಮನೆಗೆ ಕಳುಹಿಸಿ ₹50 ಸಾವಿರ ಸುಲಿಗೆ!
ಎಲೆಕ್ಟ್ರಾನಿಕ್ ಸಿಟಿ ಪರಪ್ಪನ ಅಗ್ರಹಾರದಲ್ಲಿ ವಾಸವಾಗಿದ್ದು ಐಸ್ ಕ್ರೀಂ ವಿತರಕ ಕೆಲಸ ಮಾಡಿಕೊಂಡಿರುವ ಪಿ.ಕವಿಯರಸು (37)ಎಂಬ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಆರೋಪಿಯ ಮನೆಯಲ್ಲಿ ₹1,07,100/ ಹಣ ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಉಪ ಪೊಲೀಸ್ ಆಯುಕ್ತೆ ಸಾರಾ ಫಾತಿಮಾ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತ ಕೆ.ಎಂ.ಸತೀಶ ನೇತೃತ್ವದಲ್ಲಿ ಬೇಗೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ಗ ಹಾಗೂ ಸಿಬ್ಬಂದಿಯಾದ ಗಣೇಶ್, ಜ್ಯೋತಿಬಾ ಪಾಟೀಲ್, ರಿಯಾಜ್ ಮತ್ತು ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ