ಪೊಲೀಸರಿಂದ ಶಂಕಿತ ಉಗ್ರ ಶಾರೀಕ್‌ ಮನೆ ಸೇರಿ 4 ಮನೆಗಳ ತಪಾಸಣೆ

Published : Nov 21, 2022, 05:00 PM IST
ಪೊಲೀಸರಿಂದ ಶಂಕಿತ ಉಗ್ರ ಶಾರೀಕ್‌ ಮನೆ ಸೇರಿ 4  ಮನೆಗಳ ತಪಾಸಣೆ

ಸಾರಾಂಶ

ಮಂಗಳೂರಿನ ಆಟೋರಿಕ್ಷಾ ದಲ್ಲಿ ಬಾಂಬ್ ಸ್ಫೋಟ ಪ್ರಕರಣ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಶಂಕಿತ ಆರೋಪಿಯ ಶಾರೀಕ್‌ ಮನೆ ಮತ್ತು ಅವರ ಸಂಬಂಧಿಕರ ನಾಲ್ಕು ಮನೆಗಳನ್ನು ಪೊಲೀಸರ ತಂಡ ತಪಾಸಣೆ ನಡೆಸಿದೆ. ಈ ವೇಳೆ ಆರೋಪಿಯ ಸಂಬಂಧಿಕಾರದ 15 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಶಿವಮೊಗ್ಗ/ ಮಂಗಳೂರು (ನ.21): ಮಂಗಳೂರಿನ ಆಟೋರಿಕ್ಷಾ ದಲ್ಲಿ ಬಾಂಬ್ ಸ್ಫೋಟ ಪ್ರಕರಣ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಶಂಕಿತ ಆರೋಪಿಯ ಶಾರೀಕ್‌ ಮನೆ ಮತ್ತು ಅವರ ಸಂಬಂಧಿಕರ ನಾಲ್ಕು ಮನೆಗಳನ್ನು ಪೊಲೀಸರ ತಂಡ ತಪಾಸಣೆ ನಡೆಸಿದೆ. ಈ ವೇಳೆ ಆರೋಪಿಯ ಸಂಬಂಧಿಕಾರದ 15 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ (Terrorist Activity) ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚು ಜಾಗರೂಕರಾಗಿರುವ ಪೊಲೀಸರ ತಂಡ ಎಲ್ಲ ಆಯಾಮಗಳಿಂದಲೂ ತನಿಖೆ (Investigation) ಮತ್ತು ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ. ಕ್ಕುಕ್ಕರ್‍‌ ಬಾಂಬ್‌ (Cooker Bomb) ಸ್ಫೋಟದ ಶಂಕಿತ ಆರೋಪಿಯ ತೀರ್ಥಹಳ್ಳಿಯಲ್ಲಿರುವ ಮನೆ ಹಾಗೂ ಸಂಬಂಧಿಕರ ಮನೆಗಳನ್ನು ನಾಲ್ವರು ಅಧಿಕಾರಿಗಳ ನೇತೃತ್ವದ ಪೊಲೀಸ್ ತಂಡ ಸೋಮವಾರ ತಪಾಸಣೆ ನಡೆಸಿದೆ. ತಪಾಸಣೆ (inspection) ನಂತರ ಸುಮಾರು 15 ಜನರನ್ನ ವಿಚಾರಣೆಗೆ (inquiry)ಒಳಪಡಿಸಲಾಗಿದೆ.

ಮಂಗಳೂರು ಸ್ಫೋಟ ಪ್ರಕರಣ: ಕೊಯಮುತ್ತೂರು ಬ್ಲಾಸ್ಟ್‌ಗೂ ನಂಟು?

ಸೊಪ್ಪುಗುಡ್ಡೆಯ 3 ಮನೆ ತಪಾಸಣೆ: ಆಗುಂಬೆ ಪಿಎಸ್ಐ ಶಿವಕುಮಾರ್, ಮಾಳೂರು ಪಿಎಸ್ಐ ನವೀನ್ ಕುಮಾರ್ ಮಠಪತಿ, ತೀರ್ಥಹಳ್ಳಿ ಇನ್ ಸ್ಪೆಕ್ಟರ್ ಅಶ್ವಥ್ ಗೌಡ,  ಸರ್ಕಲ್ ಇನ್ ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್ ನೇತೃತ್ವದಲ್ಲಿ ಶಾರೀಕ್ ಮತ್ತು ಮಾಜ್ ಮನೆಗೆ ತೆರಳಿದ ಪೊಲೀಸರ ತಂಡ (Police Team) ಪರಿಶೀಲನೆ ಮಾಡಿದೆ. ಆಟೋ ಸ್ಪೋಟದಲ್ಲಿ ಗಾಯಗೊಂಡಿದ್ದ (Injury) ಶಾರೀಕ್ ನೋಡಲು ಕುಟುಂಬದವರು ನಿನ್ನೆ ರಾತ್ರಿ ಮಂಗಳೂರಿಗೆ (Mangalore) ತೆರಳಿದ್ದಾರೆ. ಇನ್ನು ಬಾಳೆಬೈಲಿನಲ್ಲಿ ಒಂದು ಮನೆ ಮತ್ತು ಸೊಪ್ಪುಗುಡ್ಡೆ (Soppugudde) 3 ಮನೆ ತಪಾಸಣೆ ಮಾಡಲಾಗಿದೆ.

ಮಂಗಳೂರು ಆಸ್ಪತ್ರೆಗೆ ಪೊಲೀಸ್‌ ಕಮಿಷನರ್ ಭೇಟಿ: ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಉಗ್ರ ಶಾರೀಕ್‌ (Shariq) ಮತ್ತು ಆಟೋ ಚಾಲಕ ಪುರುಷೋತ್ತಮ್‌ (Purushottam) ದಾಖಲಾಗಿರುವ ಆಸ್ಪತ್ರೆಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ (Shashikumar) ಭೇಟಿ ಮಾಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿಕುಮಾರ, ಶಾರೀಕ್ ಹಾಗೂ ಪುರುಷೋತ್ತಮ್ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ. ಆಟೋ ಚಾಲಕ ಪುರುಷೋತ್ತಮ್ ಆರೋಗ್ಯ ಸ್ಥಿರವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿದ್ದಾರೆ. ಆದರೆ, ಆರೋಪಿ ಶಾರೀಕ್‌ಗೂ ಚಿಕಿತ್ಸೆ ಮುಂದುವರಿದಿದ್ದು, ಪ್ರಶ್ನೆ ಮಾಡುವುದಕ್ಕೆ (Asking question) ಸಾಧ್ಯವಾಗಿಲ್ಲ. ಇಂದು ಬೆಳಗ್ಗೆ ಕುಟುಂಬ (Family) ಸದಸ್ಯರು ಆತನ ಗುರುತು ಪತ್ತೆ ಮಾಡಿದ್ದಾರೆ. ಆದರೆ, ವೈದ್ಯರು ಆತನ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಹೇಳಿದರು.

ಉಗ್ರ ಚಟುವಟಿಕೆ ನಡೆಸುವವರಿಗೆ ಗುಂಡು ಹೊಡೆಯಬೇಕು: ಕೆ.ಎಸ್.ಈಶ್ವರಪ್ಪ

ಪೊಲೀಸ್‌ ಅಧಿಕಾರಿ ನಿಯೋಜನೆ: ಶಾರೀಕ್‌ ಬಳಿ ಸ್ಪೋಟದ ಬಗ್ಗೆ ಸಾಕಷ್ಟು ಮಾಹಿತಿ (Information) ಇರುವ ಸಾಧ್ಯತೆಯಿದೆ. ಆತನಿಗೆ ಉತ್ತಮ ಚಿಕಿತ್ಸೆ (Treatment) ನೀಡಲಾಗುತ್ತಿದೆ. ಪ್ರಶ್ನೆಗೆ ಉತ್ತರ ನೀಡಲು ಯಾವಾಗ ಅರ್ಹನಾಗುತ್ತಾನೆ ಎಂಬುದನ್ನು ಗಮನಿಸಿ ವಶಕ್ಕೆ ಪಡೆಯುತ್ತೇವೆ. ನಮ್ಮ ಒಬ್ಬರು ಪೊಲೀಸ್‌ ಅಧಿಕಾರಿಯನ್ನು (Officer) ಆಸ್ಪತ್ರೆಯಲ್ಲಿ ನೇಮಕ ಮಾಡಲಾಗಿದೆ. ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಕಂಡುಬಂದರೂ ಈ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಲಾಗುತ್ತದೆ.  ಆದರೆ, ಸುಟ್ಟ ಗಾಯಗಳಿಂದ ದೇಹದಲ್ಲಿ ಏರು ಪೇರಾಗುತ್ತದೆ ಎಂಬ ಮಾಹಿತಿಯಿದ್ದು, ಸೂಕ್ತ ಚಿಕಿತ್ಸೆ ಕೊಡಲು ನುರಿತ ವೈದ್ಯರನ್ನು (Expert Doctor) ನಿಯೋಜನೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‍‌ ಶಶಿಕುಮಾರ್‍‌ ತಿಳಿಸಿದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ