ಮಂಡ್ಯ: ಸಣ್ಣದೊಂದು ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯ

By Suvarna NewsFirst Published Nov 21, 2022, 2:20 PM IST
Highlights

ಸ್ನೇಹಿತ ರೊಂದಿಗೆ ನಡೆದ ಸಣ್ಣ ಗಲಾಟೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮದ್ದೂರು ತಾಲೂಕು ದೊಡ್ಡ ಅರಸಿನಕೆರೆ ಗ್ರಾಮದಲ್ಲಿ ನಡೆದಿದೆ. ದೊಡ್ಡರಸಿನಕೆರೆ ಗ್ರಾಮದ ಅರುಣ್ ಅಲಿಯಾಸ್ ಕಪ್ಪೆ ಕೊಲೆಯಾದ ಯುವಕ. 

ಮಂಡ್ಯ (ನ.21): ಸ್ನೇಹಿತ ರೊಂದಿಗೆ ನಡೆದ ಸಣ್ಣ ಗಲಾಟೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮದ್ದೂರು ತಾಲೂಕು ದೊಡ್ಡ ಅರಸಿನಕೆರೆ ಗ್ರಾಮದಲ್ಲಿ ನಡೆದಿದೆ. ದೊಡ್ಡರಸಿನಕೆರೆ ಗ್ರಾಮದ ಅರುಣ್ ಅಲಿಯಾಸ್ ಕಪ್ಪೆ ಕೊಲೆಯಾದ ಯುವಕ. ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎದುರು ಹಣದ ವಿಚಾರವಾಗಿ ಸ್ನೇಹಿತರ ಜೊತೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಸ್ನೇಹಿತರಾದ ದೊಡ್ಡಯ್ಯ ಅಭಿ ದೇವರಾಜ್ ಅವರು ಅರುಣ್ ಮೇಲೆ ಅಲ್ಲೇ ನಡೆಸಿದರು ಎಂದು ಹೇಳಲಾಗಿದೆ. ಗಲಾಟೆಯನ್ನು ನೋಡಿದ ಜನರು ತಕ್ಷಣವೇ ಬಿಡಿಸಿ ತೀವ್ರ ಗಾಯಗೊಂಡಿದ್ದ ಅರುಣ್ ನನ್ನು ಕೆ ಎಂ. ದೊಡ್ಡಿ ಆಸ್ಪತ್ರೆಗೆ ಕರೆದೊಯ್ಯುವಾಗ ಮತ್ತೆ ಹಿಂಬಾಲಿಸಿದ ಹಲ್ಲೆ ನಡೆಸಿದ ಸ್ನೇಹಿತರು ದೇವರಹಳ್ಳಿ ಗೇಟ್ ಬಳಿ ದೊಣ್ಣೆ ಮತ್ತು ಕಲ್ಲುಗಳಿಂದ ಮತ್ತೆ ಅರುಣ್ ಮೇಲೆ ತೀವ್ರ ದಾಳಿ ನಡೆಸಿದರು ಎಂದು ತಿಳಿದುಬಂದಿದೆ. ಇದನ್ನು ನೋಡಿದ ಸುತ್ತಮುತ್ತಲಿದ್ದ ಸಾರ್ವಜನಿಕರು ಆರೋಪಿಗಳನ್ನು ಹಿಡಿಯಲು ಯತ್ನಿಸುತ್ತಿದ್ದಂತೆ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ತೀವ್ರ ಹಲ್ಲೆಗೊಳದಲ್ಲಿದ್ದ ಅರುಣ್ ನನ್ನು ಜಿ ಮಾದೇಗೌಡ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಕೆ ಎಮ್ ದೊಡ್ಡಿ ಪೊಲೀಸರು ಪ್ರಕರಣ ದಾಖಲೆಸಿಕೊಂಡಿದ್ದಾರೆ.

ತಂದೆ​- ಮಲತಾಯಿ ಕೊಲೆಗೆ ಸಂಚು: ವಕೀಲನ ಬಂಧನ
ಗಂಗಾವತಿ: ತನ್ನ ತಂದೆ, ಮಲತಾಯಿಯನ್ನು ಕೊಲೆ ಮಾಡಿಸಲು ಹಂತಕರನ್ನು ಕರೆಯಿಸಿ ಸಂಚು ಹಾಕಿದ್ದ ವಕೀಲನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ವಕೀಲ ಯೋಗೇಶ್ವರ ದೇಸಾಯಿ ಬಂಧಿತ ಆರೋಪಿ.

21 ವರ್ಷದ ಮಗಳನ್ನು ಕೊಂದು, ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದ ತಂದೆ!

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಇಲ್ಲಿನ ಜಯನಗರದಲ್ಲಿರುವ ತಂದೆ ಮನೋಹರ ದೇಸಾಯಿ ಮತ್ತು ಮಲತಾಯಿ ಕರ್ಣಂ ಕಲಾವತಿ ಅವರನ್ನು ಕೊಲೆ ಮಾಡಲು ಹಂತಕರನ್ನು ಕರೆಸಿದ್ದ ಎನ್ನಲಾಗಿದೆ.

CHIKKAMAGALURU; ಚಿನ್ನದ ವರ್ತಕನನ್ನ ಬೆದರಿಸಿ ಪೊಲೀಸರಿಂದಲೇ ದರೋಡೆ!

ಪ್ರಕರಣ ಬಯಲು: ಬೆಂಗಳೂರು ಯಶವಂತಪುರದಲ್ಲಿದ್ದ ವಕೀಲ ಯೋಗೇಶ್ವರ ಮೂಲತಃ ಕೊಪ್ಪಳ ತಾಲೂಕಿನ ಕವಲೂರು ಗ್ರಾಮದವ. ಅವರಿಗೆ ತಂದೆಯ ಜತೆ ಆಸ್ತಿ ವಿವಾದ ಇತ್ತು. ಗಂಗಾವತಿಯಲ್ಲಿ ಇರುವ ತನ್ನ ತಂದೆ ಮನೋಹರ ದೇಸಾಯಿ ಮತ್ತು ತಾಯಿ ಕರ್ಣಂ ಕಲಾವತಿ ಅವರ ಕೊಲೆ ಮಾಡಿಸುವ ಉದ್ದೇಶದಿಂದ ಬೆಂಗಳೂರಿನಿಂದ ಫಯಾಜ್‌ ಮತ್ತು ಇನ್ನೋರ್ವ ವ್ಯಕ್ತಿಯನ್ನು ಕರೆದುಕೊಂಡು ಬಂದು ಕೊಲೆಗೆ ಸಂಚು ರೂಪಿಸಿದ್ದಾನೆ. ಶುಕ್ರವಾರ ರಾತ್ರಿ ಜಯನಗರದ ಯೋಗೇಶ್ವರ ತಂದೆ ನಿವಾಸಕ್ಕೆ ಆಗಮಿಸಿ ಸಮಯ ಕಾದಿದ್ದಾನೆ. ಅಲ್ಲದೇ ಹಂತಕರಿಗೆ .3 ಲಕ್ಷ ನೀಡುವುದಾಗಿ ಹೇಳಿ .1.50 ಲಕ್ಷ ತೋರಿಸಿದ್ದಾನೆ. ಇದಕ್ಕೆ ಒಪ್ಪದ ಹಂತಕರು ಯೋಗೇಶ್ವರನಿಗೇ ಚೂರಿ ಇಳಿದು ಕಾರಿನಿಂದ ಕೆಳಗೆ ನೂಕಿ ಪರಾರಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಗಸ್ತು ಮಾಡುತ್ತಿದ್ದ ಪೋಲಿಸರು ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ವಕೀಲ ಯೋಗೇಶ್ವರ ತನ್ನ ಪುರಾಣ ಬಾಯಿ ಬಿಟ್ಟಿದ್ದಾರೆ. ಈಗ ಯೋಗೇಶ್ವರನನ್ನು ಬಂಧಿಸಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

click me!