ಸಾಧು ವೇಷ ಧರಿಸಿ ತನಿಖೆ, 23 ವರ್ಷದಿಂದ ಸನ್ಯಾಸಿಯಾಗಿ ಅಡಗಿದ್ದ ಕೊಲೆ ಆರೋಪಿ ಬಂಧಿಸಿದ ಪೊಲೀಸ್!

By Suvarna NewsFirst Published Jul 3, 2023, 5:49 PM IST
Highlights

ಆತ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಆದರೆ 23 ವರ್ಷದಿಂದ ಪತ್ತೆಯೇ ಇರಲಿಲ್ಲ. ಹಲವು ಬಾರಿ ಹುಡುಕಾಟ, ದಾಳಿ ನಡೆಸಿದರೂ ಕೊಲೆ ಆರೋಪಿಯ ಸುಳಿವಿಲ್ಲ. ಆದರೆ ಈ ಪ್ರಕರಣದ ಕುರಿತು ಸಣ್ಣ ಮಾಹಿತಿ ಪೆಡದೆ ಪೊಲೀಸ್ ಸಾಧು ವೇಷ ತೊಟ್ಟ ತನಿಖೆ ಆರಂಭಿಸಿದ್ದಾರೆ. ಸಾಧು ವೇಷದಲ್ಲಿ ತೆರಳಿ 23 ವರ್ಷದಿಂದ ಸನ್ಯಾಸಿ ರೂಪದಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಸಿನಿಮೀಯ ರೀತಿಯ ಈ ಕಾರ್ಯಾಚರಣೆ ರೋಚಕ ಮಾಹಿತಿ ಇಲ್ಲಿದೆ.

ಸೂರತ್(ಜು.03) ಒಂದಲ್ಲ, ಎರಡಲ್ಲ ಬರೋಬ್ಬರಿ 23 ವರ್ಷದಿಂದ ಕೊಲೆ ಆರೋಪಿ ತಲೆಮರೆಸಿಕೊಂಡಿದ್ದ. ಭೀಕರ ಕೊಲೆ ಬಳಿಕ ನಾಪತ್ತೆಯಾಗಿದ್ದ ಆರೋಪಿಗಾಗಿ ಪೊಲೀಸರು ಹುಡುಕಾಟ, ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಹೀಗಿರುವಾಗ ಗುಜರಾತ್‌ನ ಸೂರತ್ ಪೊಲೀಸರಿಗೆ ಸಣ್ಣ ಸುಳಿವೊಂದು ಸಿಕ್ಕಿದೆ. ತಕ್ಷಣವೇ ಪ್ರಕರಣ ಭೇದಿಸಲು ತಂಡ ರಚನೆ ಮಾಡಲಾಯಿತು. ಪೊಲೀಸರು ಸಾಧು ವೇಷದಲ್ಲಿ ತೆರಳಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಆಶ್ರಮದಲ್ಲಿ ಸನ್ಯಾಸಿ ರೂಪದಲ್ಲಿ ಅಡಗಿ ಕುಳಿತಿದ್ದ ಪದ್ಮಾ ಅಲಿಯಾ ರಾಕೇಶ್ ಪಾಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಸೂರತ್‌ನ ಉಧಾನ ವಲಯದಲ್ಲಿ 23 ವರ್ಷಗಳ ಹಿಂದೆ ಕೊಲೆ ನಡೆದಿತ್ತು. ಈ ಕೊಲೆ ಆರೋಪಿ ಪದ್ಮಾ ಅಲಿಯಾ ರಾಕೇಶ್ ಪಾಂಡ ನಾಪತ್ತೆಯಾಗಿದ್ದ. ಮೂಲತಹ ಒಡಿಶಾದ ಗಂಜಮ್ ಜಿಲ್ಲೆಯ ಬಹ್ಮಪುರ ನಿವಾಸಿಯಾಗಿದ್ದ ರಾಕೇಶ್, ಕೊಲೆ ಬಲಿಕ ಪದ್ಮ ಚರಣ್ ಪಾಂಡ ಎಂದು ಹೆಸರು ಬದಲಾಯಿಸಿ ಸನ್ಯಾಸಿಯಾಗಿ ವೇಷ ಮರೆಸಿಕೊಂಡಿದ್ದ. ಉಧಾನ ಪಟ್ಟದಲ್ಲಿ ಬಾಡಿಗೆ ಮನೆಯಲ್ಲಿದ್ದ ರಾಕೇಶ್, ತನ್ನ ಗೆಳೆಯರೊಂದಿಗೆ ಯುವಕ ವಿಜಯ ಸಂಚಿದಾಸ್ ಕೊಲೆ ಮಾಡಿದ್ದ. ಸೆಪ್ಬೆಂಬರ್ 23, 2001ರಲ್ಲಿ ಈ ಕೊಲೆ ನಡೆದಿತ್ತು. ಮೃತದೇಹವನ್ನು ಸಮುದ್ರ ಸೇರುವ ನದಿ ಪಾತ್ರಕ್ಕೆ ಎಸೆದಿದ್ದ.

ಮಗು ಅಪಹರಣ ಪ್ರಕರಣ ಭೇದಿಸಿದ ಮುನಿರಾಬಾದ್ ಪೊಲೀಸರು

ಆರೋಪಿ ರಾಕೇಶ್ ಅನ್ನೋದು ತನಿಖೆಯಿಂದ ಬಹಿರಂಗವಾಗಿತ್ತು. ಈತನ ಸಂಗಡಿಗರ ಪೈಕಿ ಕೆಲವರನ್ನು ಬಂಧಿಸಲಾಗಿತ್ತು. ಆದರೆ ರಾಕೇಶ್ ಪತ್ತೆ ಇರಲಿಲ್ಲ. ಇತ್ತೀಚೆಗೆ ಸೂರತ್ ಪೊಲೀಸರಿಗೆ ಈ ಕೊಲೆ ಪ್ರಕರಣ ಕುರಿತು ಸಣ್ಣ ಮಾಹಿತಿಯೊಂದು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಸೂರತ್ ಪೊಲೀಸರು ಉತ್ತರ ಪ್ರದೇಶದ ಮಥುರಾಗೆ ತೆರಳಿದ್ದಾರೆ. ಮಥುರಾದಲ್ಲಿರುವ ಕುಂಜ್‌ಕುಟಿ ಆಶ್ರಮದಲ್ಲಿ ಕೊಲೆ ಆರೋಪಿ ಇದ್ದಾನೆ ಅನ್ನೋ ಸಣ್ಣ ಸುಳಿವು ಸಿಕಿತ್ತು. ಆಶ್ರಮಕ್ಕೆ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಲ್ಲ. 

23 ವರ್ಷಗಳ ಹಿಂದೆ ನಡೆದ ಘಟನೆಯ ಆರೋಪಿ ಈಗ ಹೇಗಿದ್ದಾನೆ, ಆಶ್ರಮದಲ್ಲಿ ಏನು ಮಾಡುತ್ತಿದ್ದಾನೆ ಅನ್ನೋ ಯಾವುದೇ ಮಾಹಿತಿ ಪೊಲೀಸರಿಗೆ ಇರಲಿಲ್ಲ. ಹೀಗಾಗಿ ಪೊಲೀಸರು ಏಕಾಏಕಿ ದಾಳಿ ನಡೆಸಿದರೆ ನೈಜ ಆರೋಪಿ ತಪ್ಪಿಸಿಕೊಲ್ಳುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಅನ್ಯಾಯವಾಗಿ ಯಾವುದಾದರು ಭಕ್ತರು ಹಾಗೂ ಸಾಧುವನ್ನು ವಶಕ್ಕೆ ಪಡೆದರೆ ಮುಂದೆ ಸೃಷ್ಟಿಯಾಗಬಲ್ಲ ಅನಾಹುತವೂ ಪೊಲೀಸರಿಗೆ ತಿಳಿದಿತ್ತು.

ಹೀಗಾಗಿ ಸೂರತ್ ಪೊಲೀಸರು ತಂಡ ರಚಿಸಿ ಮುಥುರಾಗೆ ತೆರಳಿದ್ದರು. ಪೊಲೀಸರು ಸಾಧು ವೇಷದಲ್ಲಿ ಮಥುರಾಗೆ ಬಂದಿಳಿದಿದ್ದಾರೆ. ಬಳಿಕ ಕೊಲೆ ಆರೋಪಿ ಸನ್ಯಾಸಿ ರೂಪದಲ್ಲಿ ಅಡಗಿದ್ದ ಆಶ್ರಮಕ್ಕೆ ತೆರಳಿದ್ದಾರೆ. ಸಾಮಾನ್ಯ ಸಾಧುವಂತೆ ಆಶ್ರಮಕ್ಕೆ ಪ್ರವೇಶ ಪಡೆದ ಪೊಲೀಸರು. ಕೆಲ ದಿನ ಸಾಧುವಾಗಿಯೇ ಆಶ್ರಮದಲ್ಲಿ ಕಳೆದಿದ್ದಾರೆ. ಆಶ್ರಮದಲ್ಲಿನ ಭಕ್ತರು, ಸನ್ಯಾಸಿಗಳ ಚಲನವಲ, ಮಾತುಕತೆಗಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಪದ್ಮ ಚರಣ್ ಪಾಂಡ ಸನ್ಯಾಸಿ ಸಾಮಾನ್ಯನಲ್ಲ ಅನ್ನೋದು ಸ್ಪಷ್ಟವಾಗಿದೆ. 

ಗಿರಿನಗರದಲ್ಲಿ ಬಚ್ಚಿಟ್ಟಿದ್ದ ₹50 ಲಕ್ಷ ಮೌಲ್ಯದ 95 ಕೆ.ಜಿ. ಗಾಂಜಾ ಜಪ್ತಿ !

ಈ ಸನ್ಯಾಸಿಯೇ 23 ವರ್ಷಗಳ ಹಿಂದಿನ ಕೊಲೆ ಆರೋಪಿ ಎಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸೂರತ್‌ಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಡೆದ ಘಟನೆಯನ್ನು ಈತ ವಿವರಿಸಿದ್ದಾನೆ. ಸನ್ಯಾಸಿಯಾಗಿ ವೇಷ ತೊಟ್ಟ ಬಳಿಕ ಈತ ಕುಟುಂಬಸ್ಥರು, ಆಪ್ತರು, ಪೋಷಕರು ಸೇರಿದಂತೆ ಯಾರನ್ನೂ ಭೇಟಿಯಾಗಿಲ್ಲ. ಮಾತುಕತೆ ನಡೆಸಿಲ್ಲ. ಮೊಬೈಲ್ ಫೋನ್ ಕೂಡ ಇಟ್ಟುಕೊಂಡಿಲ್ಲ. ಹೀಗಾಗಿ ಈತ ಎಲ್ಲಿದ್ದಾನೆ ಅನ್ನೋದೇ ಸವಾಲಾಗಿತ್ತು. ಈ ಆರೋಪಿ ಸುಳಿವು ನೀಡಿದರೆ 45,000 ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಇದೀಗ ಸೂರತ್ ಪೊಲೀಸರ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

click me!