Bengaluru: ತಾನು ಸಾಕಿದ ನಾಯಿ ಬೆಲ್ಟ್‌ನಿಂದಲೇ ನೇಣು ಬಿಗಿದುಕೊಂಡ ಯುವಕ

By Sathish Kumar KH  |  First Published Jul 3, 2023, 5:26 PM IST

ತಾನು ಸಾಕಿದ ನಾಯಿ ಬೆಲ್ಟ್‌ನಿಂದಲೇ ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ ನಡೆದಿದೆ.


ಬೆಂಗಳೂರು (ಜು.03): ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಣ್ಣ, ಸಣ್ಣ ಸಮಸ್ಯೆಗಳಿಗೂ ಸಾವಿನ ದಾರಿ ಹಿಡಿಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲೊಬ್ಬ ಯುವಕ ಹಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ತಾನು ಸಾಕಿದ ನಾಯಿ ಬೆಲ್ಟ್‌ನಿಂದಲೇ ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ ನಡೆದಿದೆ.

ಯುವಜನರು ಇತ್ತೀಚಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳಿಗೆ ಗಂಭೀರವಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸದೇ ಅದರಿಂದ ನುಣುಚಿಕೊಳ್ಳಲು ಸಾವಿನ ಕದ ತಟ್ಟುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ, ತನಗೆ ಬಂದ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕ ಹಲವು ದಿನಗಳಾದರೂ ಚೇತರಿಕೆ ಕಂಡಿರಲಿಲ್ಲ. ಯಾವಾಗಲೂ ಒಬ್ಬನೇ ಇರುತ್ತಿದ್ದನು. ಇನ್ನು ತನಗೆ ಯಾರೂ ಬೇಡವೆಂದು ತನ್ನೊಂದಿಗರಲು ನಾಯಿಯನ್ನು ಸಾಕಿದ್ದನು. ಪ್ರತಿನಿತ್ಯ ನಾಯಿಯನ್ನು ಪ್ರೀತಿಯಿಂದ ಸಾಕಣೆ ಮಾಡುತ್ತಾ ಅದರೊಂದಿಗೇ ಮಾತನಾಡುತ್ತಿದ್ದನು. ಆದರೆ, ಇಂದು ಅದೇನಾಗಿತ್ತೋ ಗೊತ್ತಿಲ್ಲ. ತಾನು ಸಾಕಿದ್ದ ನಾಯಿಯ ಬೆಲ್ಟ್‌ ಬಿಚ್ಚಿಕೊಂಡು ಫ್ಯಾನಿಗೆ ಹಾಕಿ ಅದರಿಂದ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

Tap to resize

Latest Videos

undefined

BENGALURU: ಹೋಟೆಲ್ ಉದ್ಯಮಿಯ ಬರ್ಬರ ಹತ್ಯೆ, ಲವರ್ ಜೊತೆಗೂಡಿ ಪತಿಗೆ ತಿಲಾಂಜಲಿ ಇಟ್ಟ ಪತ್ನಿ!

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು: ಇನ್ನು ಮೃತ ಯುವಕನನ್ನು ಆರ್ಯಮಾನ್ ಘೋಷ್ (22) ಎಂದು ಗುರುತಿಸಲಾಗಿದೆ. ಮೈಕೋ ಲೇಔಟ್ ನ ಸಾರ್ವಭೌಮ ನಗರದ ಬಾಡಿಗೆ ವಾಸವಿದ್ದ ಮೃತ ಯುವಕ ಆರ್ಯಮಾನ್‌ ತನ್ನೊಂದಿದೆ ಮನೆಯಲ್ಲಿ ನಾಯಿಯನ್ನೂ ಸಾಕಿಕೊಂಡಿದ್ದನು. ಇನ್ನು ಯಾರೊಂದಿಗೂ ಮಾತನಾಡದೇ, ಯಾರನ್ನೂ ಮನೆಗೆ ಕರೆಸಿಕೊಳ್ಳದೇ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದನು. ಇತ್ತಿಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎಂದು ನೆರೆಹೊರೆಯವರು ಹಾಗೂ ಸಂಬಂಧಿಕರು ತಿಳಿಸಿದ್ದಾರೆ. ಆದರೆ, ನಿನ್ನೆ ನಾಯಿ ಬೆಲ್ಟ್ ನಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಡೆತ್‌ ನೋಟ್‌ ಬರೆದಿಟ್ಟು ಸಾವು: ಇನ್ನು ಪ್ರತಿನಿತ್ಯ ನಾಯಿಯನ್ನು ಹೊರಗೆ ಕರೆದುಕೊಂಡು ಬರುತ್ತಿದ್ದ ಯುವಕ ಮಧ್ಯಾಹ್ನವಾದರೂ ಏಕೋ ಬಂದಿಲ್ಲವಲ್ಲ ಎಂದು ಮನೆ ಮಾಲೀಕರು ಸುಮ್ಮನಾಗಿದ್ದಾರೆ. ಆದರೆ, ನಾಯಿ ಹೆಚ್ಚಾಗಿ ಬೊಗಳಲು ಆರಂಭಿಸಿದರೂ ಯುವಕ ಮನೆಯಿಮದ ಹೊರಗೆ ಬಾರದ ಹಿನ್ನೆಲೆಯಲ್ಲಿ ಕಿಟಕಿಯಿಂದ ನೋಡಿದಾಗ ಯುವಕ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ನೀಡಿದ ಮನೆ ಮಾಲೀಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದಾದ ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿರುವುದು ಲಭ್ಯವಾಗಿದೆ. ಈ ಘಟನೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಬೀದಿ ನಾಯಿಗಳ ತಾಯಿ ರಜನಿಶೆಟ್ಟಿ ಮೇಲೆ ಹಲ್ಲೆ:  ಮಂಗಳೂರು (ಜು.03): ಬೀದಿ ನಾಯಿಗಳ ಆಶ್ರಯದಾತೆಯಾಗಿರುವ ರಜನಿ ಶೆಟ್ಟಿ ಎಂಬುವವರ ಮೇಲೆ ನೆರೆಮನೆಯವರು ಕಲ್ಲಿನಿಂಡ ಹೊಡೆದು ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗಾಯಗೊಂಡಿರುವ ರಜನಿ ಶೆಟ್ಟಿ ಅವರನ್ನು ವೆನ್ಲಾಕ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆರೆಮನೆಯಲ್ಲಿ ವಾಸಿಸುವ ಮಂಜುಳಾ ಶೆಟ್ಟಿ ಎಂಬುವವರು ರಜನಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.

ಮದುವೆಗೆ ಜಾತಿ ಅಡ್ಡಿ; ದೈಹಿಕ ಸಂಬಂಧ ಬೆಳೆಸಿ ಮೋಸ ಹೋದ ಯುವತಿ ನೇಣಿಗೆ ಶರಣು!

ನಾಯಿಗಳಿಗೆ ಆಹಾರ ನೀಡುವಾಗ ಗಲಾಟೆ:  ಪ್ರತಿನಿತ್ಯ ಅಸಂಖ್ಯಾತ ಬೀದಿ ನಾಯಿಗಳಿಗೆ ರಜನಿ ಶೆಟ್ಟಿಯವರು ಆಹಾರ ನೀಡುತ್ತಿದ್ದರು. ಈ ವಿಚಾರವಾಗಿ ಮಂಜುಳಾ ಶೆಟ್ಟಿ ರಜನಿ ಅವರೊಂದಿಗೆ ಗಲಾಟೆ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಸಹ ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಂಜುಳಾ ರಜನಿ ಅವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ಸಂಬಂಧ ಮಂಜುಳಾ ವಿರುದ್ಧ ಬರ್ಕೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಗಾಯಾಳು ರಜನಿ ಅವರನ್ನು ಚಿಕಿತ್ಸೆಗಾಗಿ ವೆನ್ಲಾಕ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

click me!