Bengaluru: ಹೋಟೆಲ್ ಉದ್ಯಮಿಯ ಬರ್ಬರ ಹತ್ಯೆ, ಲವರ್ ಜೊತೆಗೂಡಿ ಪತಿಗೆ ತಿಲಾಂಜಲಿ ಇಟ್ಟ ಪತ್ನಿ!

By Gowthami K  |  First Published Jul 3, 2023, 3:03 PM IST

ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ತಲಘಟ್ಟಪುರ ಬಳಿ ನಡೆದಿತ್ತು, ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ  ಅನೈತಿಕ ಸಂಬಂಧ ಬೆಳಕಿಗೆ ಬಂದಿದೆ.


ಬೆಂಗಳೂರು (ಜು.3): ಕಳೆದ ಜೂನ್ 28 ರ ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ತಲಘಟ್ಟಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಈಗ ಅಪರಿಚಿತ ವ್ಯಕ್ತಿ ಶವದ ಹಿಂದೆ ರೋಚಕ ಅನೈತಿಕ ಸಂಬಂಧದ ಕಹಾನಿ ಬಹಿರಂಗವಾಗಿದೆ. ಮೃತ ವ್ಯಕ್ತಿಯ ಪತ್ನಿ ಪ್ರಿಯಕರನ ನಡುವಿನ ಲವ್ವಿ ಡವ್ವಿ ವಿಚಾರ ಬೆಳಕಿಗೆ ಬಂದಿದೆ. ಶವ ಯಾರದ್ದು ಎಂದು ತನಿಖೆ ನಡೆಸಿದ ಪೊಲೀಸರಿಗೆ ಅರುಣ್ (43) ಎಂಬಾತನದ್ದು ಎಂದು ತಿಳಿದುಬಂದಿದೆ. ಜೂನ್ 28 ರ ರಾತ್ರಿ 11 ಗಂಟೆಗೆ ಈತನ ಬರ್ಬರ ಹತ್ಯೆ ನಡೆದಿತ್ತು. ಹತ್ಯೆ ನಡೆಸಿ ತಲಘಟ್ಟಪುರದ ಅಜ್ಞಾತ ಸ್ಥಳದಲ್ಲಿ ಹಂತಕರು ಮೃತದೇಹವನ್ನು ಎಸೆದಿದ್ದರು. 

ಪೊಲೀಸರ ತನಿಖೆ ವೇಳೆ ಅರುಣ್ ಕೊಲೆಯ ಹಿಂದೆ ಪತ್ನಿಯ ಕೈವಾಡ ಇರುವುದು ಬೆಳಕಿಗೆ ಬಂದಿದೆ. ತನ್ನ ಪ್ರಿಯಕರನ ಜೊತೆಗೂಡಿ ಪತ್ನಿ ತನ್ನ ಗಂಡನಿಗೆ ತಿಲಾಂಜಲಿ ಇಟ್ಟಿದ್ದಳು. ಕೊಲೆಯಾದ ಅರುಣ್ ಕುಮಾರ್ ತಲಘಟ್ಟಪುರದಲ್ಲಿ ಹೊಟೇಲ್ ನಡೆಸುತ್ತಿದ್ದನು. ಹೊಟೇಲ್ ಗೆ ನೀರು ಹಾಕಲು ಅಸಾಮಿ ಗಣೇಶ್ ಎಂಬಾತ ಬರ್ತಿದ್ದ, ಈ ವೇಳೆ  ಅರುಣ್ ಪತ್ನಿ ರಂಜಿತಾ ಗಣೇಶ್ ಜೊತೆ ಲವ್ವಿ ಡವ್ವಿ ಶುರುಮಾಡಿದ್ದಳು. ಇದು ತಿಳಿದ ಗಂಡ  ಅರುಣ್ , ರಂಜಿತಾ ಜೊತೆಗೆ ಜಗಳವಾಡಿ ಗಣೇಶ್ ಜೊತೆಗಿನ ಪ್ರೀತಿಗೆ ಅಡ್ಡವಾಗಿದ್ದ. ಹೀಗಾಗಿ ಇಬ್ಬರು ಸೇರಿ ಅರುಣ್ ನನ್ನು ಮುಗಿಸಲು ಸಂಚು ರೂಪಿಸಿದ್ದರು.

Tap to resize

Latest Videos

undefined

ಬಿಟ್‌ ಕಾಯಿನ್‌ ಹಗರಣ ಮರು ತನಿಖೆಗೆ ರಾಜ್ಯ ಸರ್ಕಾರ ಆದೇಶ, ಎಲ್ಲಿದ್ದಾನೆ ಪ್ರಕರಣದ ರೂವಾರಿ

ಕೊಲೆ ಹಿಂದಿನ ದಿನ ರಂಜಿತಾ ತನ್ನ ಹುಟ್ಟೂರು ಮಂಡ್ಯಗೆ ತೆರಳಿದ್ದಳು. ಈ ವೇಳೆ ಗಣೇಶ್ ಪಾರ್ಟಿ ಮಾಡೋಣ ಜೊತೆಗೆ ಹಣ ಕೊಡಿಸ್ತೀನಿ ಅಂತಾ ಅರುಣ್ ನನ್ನು ಕರೆಸಿಕೊಂಡಿದ್ದ.  ಇದಕ್ಕೂ ಮುನ್ನವೇ ಟೀಂ ರೆಡಿ ಮಾಡಿಕೊಂಡಿದ್ದ ಗಣೇಶ್ , ಅರುಣ್ ಬಂದಾಗ ಖಾರದಪುಡಿ ಎರಚಿ  ಗ್ಯಾಂಗ್ ಜೊತೆಗೆ ಸೇರಿ ಹತ್ಯೆ ಮಾಡಿದ್ದಾನೆ. ಸುಮಾರು 20 ಬಾರಿ ಲಾಂಗ್ ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. 

ಪ್ರಕರಣ ಸಂಬಂಧ ಪೊಲೀಸರು ಮೃತ ಅರುಣ್ ಪತ್ನಿ ರಂಜಿತಾ, ಪ್ರಿಯಕರ ಗಣೇಶ್ ಸೇರಿ ಐವರನ್ನು ಬಂಧಿಸಿದ್ದಾರೆ. ಶಿವಾನಂದ, ದೀಪು, ಶರತ್ ಬಂಧಿತ ಆರೋಪಿಗಳಾಗಿದ್ದಾರೆ. ಮೃತ ಅರುಣ್ ಚನ್ನಪಟ್ಟಣ ಮೂಲದ ನಿವಾಸಿಯಾಗಿದ್ದು, ಆರು ವರ್ಷದ ಹಿಂದೆ ರಂಜಿತಾ ಜೊತೆಗೆ ಮದುವೆಯಾಗಿದ್ದ. ಆರ್.ಆರ್.ನಗರದಲ್ಲಿ ಗೌಡ್ರು ಮನೆ ಬೀಗರ ಊಟ ಎಂಬ ಹೆಸರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ. ಹೀಗಾಗಿ ಈ ಹೋಟೆಲ್ ಗೆ ಆರೋಪಿ ಗಣೇಶ್ ನೀರು ಹಾಕೋ‌ ಕೆಲಸ ಮಾಡುತ್ತಿದ್ದ. ಅಲ್ಲದೆ ಮೃತ ಅರುಣ್ ಗೆ ಫೈನಾನ್ಸ್ ಕೂಡ ಕೊಡಿಸಿದ್ದ. ಹೀಗೆ ಅರುಣ್ ಪತ್ನಿ ರಂಜಿತಾ ಪರಿಚಯವಾಗಿ ಲವ್ವಿ ಡವ್ವಿ ಶುರುವಾಗಿತ್ತು.

ನನಗೂ ಬಂಧಿತ ಅಜಿತ್ ರೈಗೂ ಯಾವುದೇ ಸಂಬಂಧವಿಲ್ಲ, ಥೈಲ್ಯಾಂಡ್ ನಿಂದ ಭೂಗತ

ಗಣೇಶ್ ಮತ್ತು ಗ್ಯಾಂಗ್ ಕೊಲೆ ಮಾಡಿ ಮೃತದೇಹವನ್ನು ಅಜ್ಞಾತ ಸ್ಥಳದಲ್ಲಿ ಎಸೆದು ಪರಾರಿಯಾಗಿದ್ದರು. ತನಿಖೆ ನಡೆಸುತ್ತಾ ಹೋದ ಪೊಲೀಸರಿಗೆ ಸ್ಥಳೀಯರು ಗಣೇಶ್ ಜೊತೆಗೆ  ಅರುಣ್ ಹಣದ ವ್ಯವಹಾರ ಬಗ್ಗೆ ಮಾಹಿತಿ ಕೊಟ್ಟಿದ್ದರು. ಇದೇ ವಿಚಾರಕ್ಕೆ ಕೊಲೆ ಆಗಿರಬಹುದೆಂದು ತನಿಖೆ ನಡೆಸಿದಾಗ ಅರುಣ್ ಪತ್ನಿಯ ಲವ್ ಕಹಾನಿ ಬಯಲಾಗಿದೆ. ಕೊಲೆ ಹಣದ ವ್ಯವಹಾರ ಮಾತ್ರವಲ್ಲ, ಪ್ರೀತಿ ಪ್ರೇಮ‌ ಅನ್ನೋದು ಬೆಳಕಿಗೆ ಬಂದಿದೆ. ಅರುಣ್‌ನನ್ನು ಕೊಲೆ‌ ಮಾಡಿದ ಬಳಿಕ ಆರೋಪಿಗಳು ರೂಂ ನಲ್ಲಿ ಬಚ್ವಿಟ್ಟುಕೊಂಡಿದ್ದರು. ಈಗ ಪೊಲೀಸರ ಅತಿಥಿಯಾಗಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!