ಪಟ್ಟಣದ ಮಹಿಳಾ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಭವ್ಯಾ (19) ಎಂಬಾಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೇಟೆ ಠಾಣೆ ಪೊಲೀಸರು ಸೊರಬ ತಾಲೂಕಿನ ಆನವಟ್ಟಿ ಸಮೀಪದ ಹುರಳಿಕೊಪ್ಪ ಗ್ರಾಮದ ಪ್ರದೀಪ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಾಗರ (ಜು.14): ಪಟ್ಟಣದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಭವ್ಯಾ (19) ಎಂಬಾಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೇಟೆ ಠಾಣೆ ಪೊಲೀಸರು ಸೊರಬ ತಾಲೂಕಿನ ಆನವಟ್ಟಿ ಸಮೀಪದ ಹುರಳಿಕೊಪ್ಪ ಗ್ರಾಮದ ಪ್ರದೀಪ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಪ್ರದೀಪನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಭವ್ಯ, ಕ್ರಮೇಣ ಆಕೆಯ ಫೋನ್ ನಂಬರ್ ಪಡೆದಿದ್ದ.
ಅಲ್ಲಿಂದ ಅವಳಿಗೆ ಕರೆ ಮಾಡಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ಆಕೆ ತನ್ನ ಪೋಷಕರ ಬಳಿ ನೋವು ತೋಡಿಕೊಂಡಿದ್ದಳು ಎನ್ನಲಾಗಿದೆ. ಪ್ರದೀಪನ ಹಿಂಸೆ ತಾಳಲಾರದೆ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ನಂತರ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ ಎಂದು ಸಹೋದರ ಕೃಷ್ಣಮೂರ್ತಿ ಪೇಟೆ ಠಾಣೆಗೆ ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವರ್ಗಾವಣೆ ದಂಧೆ ನಡೆದಿದ್ರೆ ನಿವೃತ್ತಿ: ಸಿದ್ದು ಸವಾಲ್
ಪತಿಯ ಕಿರುಕುಳ- ಪತ್ನಿ ಆತ್ಮಹತ್ಯೆ: ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತಿಯ ಕಿರುಕುಳದಿಂದ ಮನನೊಂದ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಎನ್.ಆರ್. ಮೊಹಲ್ಲಾದಲ್ಲಿ ನಡೆದಿದೆ. ಎನ್.ಆರ್. ಮೊಹಲ್ಲಾದ ಬಿ ಬ್ಲಾಕ್ ನಿವಾಸಿ ತಬ್ರೀಜ್ ಅಲಿ ಎಂಬವರ ಪತ್ನಿ ಹರ್ಷಿಯಾ ಬಾನು (27) ಆತ್ಮಹತ್ಯೆ ಮಾಡಿಕೊಂಡವರು. ಹಾಸನದ ಹರ್ಷಿಯಾ ಬಾನು 2020ರಲ್ಲಿ ಮೈಸೂರಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ತಬ್ರೀಜ್ ಅಲಿ ಎಂಬಾತನನ್ನು ಮದುವೆಯಾಗಿದ್ದು, ಇವರಿಗೆ ಒಂದು ಮಗು ಕೂಡ ಇದೆ.
ಆಸ್ತಿ ತೆರಿಗೆ ಪಾವತಿಸದವರ ಹೆಸರು ಕ್ಯೂಆರ್ ಕೋಡ್‌ನಲ್ಲೆ ಬಹಿರಂಗ!
ತಬ್ರೀಜ್ ಅಲಿ ಬೇರೊಂದು ಮಹಿಳೆಯ ಅನೈತಿಕ ಸಂಬಂಧ ಇರಿಸಿಕೊಂಡು ಪತ್ನಿ ಹರ್ಷಿಯಾ ಬಾನು ಮೇಲೆ ಹಲ್ಲೆ ಮಾಡಿ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ. ಈ ಸಂಬಂಧ ಎರಡೂ ಕಡೆಯ ಸಂಬಂಧಿಕರು ಸೇರಿ ಪಂಚಾಯಿತಿ ಮಾಡಿ, ರಾಜಿ ಮಾಡಿಸಿದ್ದರು. ಪರಸ್ತ್ರೀ ಜೊತೆಗಿನ ಸಹವಾಸವನ್ನು ಬಿಟ್ಟು ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಿದ್ದ ತಬ್ರೀಜ್ ಅಲಿ, ತನ್ನ ಚಾಳಿಯನ್ನು ಮುಂದುವರೆಸಿದ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದ ಹರ್ಷಿಯಾ ಬಾನು ಮನೆಯ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಎನ್.ಆರ್. ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.