
ಬಾಗೇಪಲ್ಲಿ (ಜು.14): ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯಗೆ ಶರಣಾಗಿರುವ ಘಟನೆ ಗುರುವಾರ ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಸಮೀಪದಲ್ಲಿ ನಡೆದಿದೆ.
ಮೃತಪಟ್ಟವ್ಯಕ್ತಿಯನ್ನು ಆಂದ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಗೋರಂಟ್ಲ ವ್ಯಾಪ್ತಿಯ ವೆಂಟರಾಮಪಲ್ಲಿ ಗ್ರಾಮದ ನಿವಾಸಿ ವೆಂಕಟರಾಮಪ್ಪ ಬಿನ್ ಅಪ್ಪಣ್ಣ(56) ಎಂದು ಗುರ್ತಿಸಲಾಗಿದೆ.
ಮೃತ ವ್ಯಕ್ತಿ ವೆಂಕಟರಾಮಪ್ಪ ಆಂದ್ರಪ್ರದೇಶದ ಗೊರಂಟ್ಲ ವ್ಯಾಪ್ತಿಯ ನಿವಾಸಿಯಾಗಿದ್ದು ಈತ ಕೂಲಿ ಹರಿಸಿ ಬಾಗೇಪಲ್ಲಿಗೆ ಬಂದಿದ್ದ ಎನ್ನಲಾಗಿದೆ.ಇವರು ಅನಾರೋಗ್ಯದ ಸಮಸ್ಯೆಯಿಂದ ಜೀವನದಲ್ಲಿ ಬೇಸಗೊಂಡು ಇಂದು ಶಿರಡಿ ಸಾಯಿಬಾಬಾ ಮಂದಿರದ ಹಿಂಭಾಗದಲ್ಲಿನ ಮರವೊಂದಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಸ್ ಚಾಲಕ ವಿಷ ಸೇವನೆ ಪ್ರಕರಣ; ಸಿಐಡಿ ಪೊಲೀಸರಿಂದ ಜಗದೀಶ್ ವಿಚಾರಣೆ
ಈ ಸಂಬಂಧ ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅನಾರೋಗ್ಯ, ಆತ್ಮಹತ್ಯೆಗೆ ಶರಣಾದ ಪೇದೆ
ಹುಬ್ಬಳ್ಳಿ : ಅನಾರೋಗ್ಯ ಹಿನ್ನೆಲೆಯಲ್ಲಿ ಪೇದೆಯೋರ್ವ ನೇಣಿಗೆ ಶರಣಾದ ಘಟನೆ ಬುಧವಾರ ಮಧ್ಯರಾತ್ರಿ ಇಲ್ಲಿನ ದೊಡ್ಡಮನಿ ಕಾಲನಿಯಲ್ಲಿ ಜರುಗಿದೆ.
ನಗರದ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ ರುದ್ರಾಪುರ(26) ಹಲವು ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೂಲತಃ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಂಗೊಳ್ಳಿ ಗ್ರಾಮದವರಾದ ಇವರು 2020ರ ಬ್ಯಾಚಿನಲ್ಲಿ ಪೊಲೀಸ್ ಕಾನಸ್ಟೇಬಲ್ ಆಗಿ ನಿಯೋಜನೆ ಹೊಂದಿ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇಲ್ಲಿನ ದೊಡ್ಡಮನಿ ಕಾಲನಿಯಲ್ಲಿ ಹಲವು ವರ್ಷಗಳಿಂದ ಸ್ನೇಹಿತರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬುಧವಾರ ಮಧ್ಯರಾತ್ರಿಯ ವೇಳೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳಗಾವಿ: ಪತಿ, ಅತ್ತೆಯ ಮನೆಯವರ ಕಿರುಕುಳ, ವಿವಾಹಿತೆ ಆತ್ಮಹತ್ಯೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ