ಪಟ್ಟಣದ ಬಸ್ ನಿಲ್ದಾಣದ ಹತ್ತಿರದಲ್ಲಿ ಇರುವ ಉಮೇಶ ಹುನಗುಂದ ಅವರ ಮಾಲೀಕತ್ವದ ಟೈರ್ ಅಂಗಡಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಎಂದು ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಹೇಳಿದ್ದಾರೆ.
ಗುಳೇದಗುಡ್ಡ (ಜು.14) : ಪಟ್ಟಣದ ಬಸ್ ನಿಲ್ದಾಣದ ಹತ್ತಿರದಲ್ಲಿ ಇರುವ ಉಮೇಶ ಹುನಗುಂದ ಅವರ ಮಾಲೀಕತ್ವದ ಟೈರ್ ಅಂಗಡಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಎಂದು ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಹೇಳಿದ್ದಾರೆ.
ಪಟ್ಟಣದ ಪೊಲೀಸ್‌ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಯಮನೂರಪ್ಪ ರಮೇಶ ಗಚ್ಚಿನಮನಿ(23) ಹಾಗೂ ಕೋಟೆಕಲ್ ನಿವಾಸಿ ರಮೇಶ ಶಾಂತಗೇರಿ(26) ಬಂಧಿತರು. ಬಂಧಿತರಿಂದ .5,000 ಮತ್ತು .42000 ಮೌಲ್ಯದ ಒಟ್ಟ33 ಟೈರ್, ಅಲ್ಲದೇ .30 ಸಾವಿರ ಮೌಲ್ಯದ ಡಿಯೋ ಸ್ಕೂಟರ್ ಸೇರಿದಂತೆ ಒಟ್ಟು .77,000 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
undefined
ಹೊಸ ಮೊಬೈಲ್ ಕೊಡದಿದ್ರೆ ಸರ್ವೇ ಸ್ಥಗಿತ; ಸರ್ಕಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಖಡಕ್ ಎಚ್ಚರಿಕೆ!
ಜುಲೈ 1 ರಂದು ತಡರಾತ್ರಿಯಲ್ಲಿ ಗುಳೇದಗುಡ್ಡ ಪಟ್ಟಣದ ಪುರಸಭೆ ಸದಸ್ಯ ಉಮೇಶ ರುದ್ರಪ್ಪ ಹುನಗುಂದ ಮಾಲೀಕತ್ವದ ಟೈರ್ ಅಂಗಡಿ ಕಳ್ಳತನವಾಗಿತ್ತು. ಈ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಉಮೇಶ ಹುನಗುಂದ ಅವರು ದೂರು ನೀಡಿದ್ದರು. ಟೈರ್ ಅಂಗಡಿ ಕಿಟಕಿ ಮುರಿದು ಅಂಗಡಿಯಲ್ಲಿದ್ದ .53,000 ನಗದು ಮತ್ತು .12,000 ಮೌಲ್ಯದ ವಸ್ತುಗಳು ಸೇರಿದಂತೆ ಒಟ್ಟು 13 ಮೋಟಾರ್ ಸೈಕಲ್ ಟೈರ್‌ಗಳನ್ನು ಕಳ್ಳತನ ಮಾಡಿದ್ದರು. ಈ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಹೆಚ್ಚುವರಿ ಎಸ್.ಪಿ. ಪ್ರಸನ್ನಕುಮಾರ ದೇಸಾಯಿ, ಸಿಪಿಐ ಡಿ.ಡಿ.ಧೂಳಕೇಡ ಅವರ ಮಾರ್ಗದರ್ಶದಲ್ಲಿ ಗುಳೇದಗುಡ್ಡ ಪಟ್ಟಣದ ಪಿಎಸ್‌ಐ ಲಕ್ಷ್ಮಣ ಆರಿ ಅವರ ನೇತೃತ್ವದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡು ಟೈರ್ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ ಎಂದರು.
ಜುಲೈ 12ರಂದು ಗುಳೇದಗುಡ್ಡ ಬಸ್ ನಿಲ್ದಾಣದ ಸಮೀಪ ಮೋಟಾರ್ ಸೈಕಲ್ ಮೇಲೆ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಅರೋಪಿಗಳನ್ನು ಪತ್ತೆ ಮಾಡಲು ಯಶಸ್ವಿಯಾದ ಗುಳೇದಗುಡ್ಡ ಪೊಲೀಸ್ ಠಾಣೆಯ ಪಿಎಸ್‌ಐ ಲಕ್ಷ್ಮಣ ಆರಿ, ಕ್ರೈಂ ವಿಭಾಗದ ಪಿಎಸ್‌ಐ ಚಂದ್ರಶೇಖರ ಕಿರಶ್ಯಾಳ, ಎಎಸ್‌ಐ ಎಮ್.ಎ.ಘಂಟಿ, ಎಸ್.ಐ ಬಿಳೇಕುದರಿ ಹಾಗೂ ಸಿಬ್ಬಂದಿಗಳಾದ ಎಚ್.ಪಿ ಕೂಗಟಿ, ಜಿ.ವಿ. ಮನ್ನಿಕಟ್ಟಿ, ವೈ.ಎಮ್ ಮನ್ನಿಕಟ್ಟಿ, ವಿಜಯ ತುಂಬದ, ಶರಣಪ್ಪ ಕೊಡಪ್ಪನವರ, ಆನಂದ ಬಿಂಜವಾಡಗಿ, ನಾಗರಾಜ ಕುಂದರಗಿ, ಹಣಮಂತ ಬೋವಿ, ಸಂಗಮೇಶ ಮರೋಳ ಇವರಿಗೆ ಬಾಗಲಕೋಟೆ ಪೋಲಿಸ್ ವರಿ?ಾ್ಠಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎರಡು ಗುಂಪುಗಳ ನಡುವೆ ಗಲಾಟೆ; ಮೂವರಿಗೆ ಗಾಯ
ಬಾಗಲಕೋಟೆ: ತಡರಾತ್ರಿ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನವನಗರದ ವಾಂಬೆ ಕಾಲೋನಿಯಲ್ಲಿ ನಡೆದಿದೆ.
ಯುವಕರ ನಡುವೆ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಈ ಘಟನೆಯಲ್ಲಿ ಮೂವರು ಯುವಕರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಅಮಾನವೀಯ ಘಟನೆ: ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ ಪುಂಡರು..!
ಸ್ಥಳಕ್ಕೆ ಎಸ್.ಪಿ.ಜಯಪ್ರಕಾಶ್ & ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಭೇಟಿ, ಪರಿಶೀಲನೆ. ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೋಲಿಸ ಬಿಗಿ ಭದ್ರತೆ ಮಾಡಲಾಗಿದೆ. ಈ ಘಟನೆ ಬಾಗಲಕೋಟೆಯ ನವನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.