ಷೇರು ಮಾರುಕಟ್ಟೆಯಲ್ಲಿ ನಷ್ಟ, 8 ತಿಂಗಳ ತುಂಬು ಗರ್ಭಿಣಿ ಪತ್ನಿ ಜೊತೆ ಪತಿ ಆತ್ಮಹತ್ಯೆ!

By Santosh Naik  |  First Published Apr 20, 2024, 5:55 PM IST


ಷೇರು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.


ಬೆಂಗಳೂರು (ಏ.20): ಷೇರು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ನಷ್ಟವಾಗಿದ್ದರಿಂದ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ. ಕಲ್ಲಕುರಿಚಿ ಮೂಲದ 27 ವರ್ಷದ ವಿಜಯ್‌ ಕುಮಾರ್‌ ಹಾಗೂ 23 ವರ್ಷದ ಸಂಧ್ಯಾ ಸಾವು ಕಂಡ ವ್ಯಕ್ತಿಗಳು ಒಂದು ವರ್ಷದ ಹಿಂದೆ ಇವರಿಬ್ಬರ ವಿವಾಹವಾಗಿತ್ತು. ವಿಜಯಕುಮಾರ್ ಹೊಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, 8 ತಿಂಗಳ ಗರ್ಭಿಣಿಯಾಗಿದ್ದ ಸಂಧ್ಯಾ ಮನೆಯಲ್ಲಿಯೇ ಇದ್ದರು. ಪತಿ-ಪತ್ನಿ ಹೊಸೂರು ಬಾಗೇಪಲ್ಲಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಗಳು ಗರ್ಭಿಯಾಗಿದ್ದ ಕಾರಣಕ್ಕೆ ಸಂಧ್ಯಾ ಅವರ ತಾಯಿ ಕೂಡ ಇವರೊಂದಿಗೆ ಸಹಾಯಕ್ಕಾಗಿ ಉಳಿದುಕೊಂಡಿದ್ದರು. ಈ ನಡುವೆ ವಿಜಯಕುಮಾರ್ ಆನ್‌ಲೈನ್ ಟ್ರೇಡಿಂಗ್‌ ಮತ್ತು ಷೇರುಪೇಟೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಸಾಕಷ್ಟು ಹಣ ಹೂಡಿಕೆ ಮಾಡಿದ್ದರು. ಸ್ನೇಹಿತರೊಂದಿಗೆ ದೊಡ್ಡ ಪ್ರಮಾಣದ ಸಾಲ ಮಾಡಿಯೂ ಹೂಡಿಕೆ ಮಾಡಿದ್ದರು. ಆದರೆ, ಮಾರುಕಟ್ಟೆ ಕುಸಿತದ ಬೆನ್ನಲ್ಲಿಯೇ ಅವರು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು.

ಇದರಿಂದಾಗಿ ಸಾಲ ಹೆಚ್ಚಾದ ಕಾರಣ ಸಾಲ ತೀರಿಸಲು ಸಾಧ್ಯವಾಗದೇ ವಿಜಯ್‌ ಕುಮಾರ್‌ ಖಿನ್ನತೆಗೆ ಒಳಗಾಗಿದ್ದರು. ಶುಕ್ರವಾರ ವಿಜಯ್‌ ಕುಮಾರ್‌ ಹಾಗೂ ಸಂಧ್ಯಾ ತಮ್ಮ ಕೋಣೆಯಲ್ಲಿ ಮಲಗಲು ಹೋಗಿದ್ದರು. ಆದರೆ, ಬೆಳಗ್ಗೆ ಸಂಧ್ಯಾ ಅವರ ತಾಯಿ ಎಷ್ಟು ಹೊತ್ತಾದರೂ ಇವರ ಕೋಣೆಯ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆಯದ ಕಾರಣ ಶಿಪೋಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

Latest Videos

undefined

NEHA MURDER CASE: ಅದು ಲವ್ ಜಿಹಾದ್ ಅಲ್ಲ ಬ್ರೇಕ್ಅಪ್ ಕಹಾನಿ ಅಂದ ಸರ್ಕಾರ! ನೇಹಾ ಕೊಲೆಗೆ ಫಯಾಜ್ ಕೊಟ್ಟ ಉತ್ತರ?

ಮಾಹಿತಿ ಮೇರೆಗೆ ಪೊಲೀಸರು ಬಂದು ಕೊಠಡಿಯ ಬಾಗಿಲು ಒಡೆದು ನೋಡಿದಾಗ ವಿಜಯಕುಮಾರ್ ಮತ್ತು ಸಂಧ್ಯಾ ಒಂದೇ ಹಗ್ಗಕ್ಕೆ ನೇಣು ಹಾಕಿಕೊಂಡಿದ್ದಾರೆ. ಇದರಿಂದ ಅಚ್ಚರಿಗೊಂಡ ಪೊಲೀಸರು ಇಬ್ಬರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ವಿಜಯಕುಮಾರ್ ಅವರ ಕೊಠಡಿಯಲ್ಲಿ ಬರೆದಿಟ್ಟಿದ್ದ ಪತ್ರವನ್ನೂ ವಶಪಡಿಸಿಕೊಂಡಿದ್ದಾರೆ. ಸಾಲದ ಸಮಸ್ಯೆಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಆ ಪತ್ರದಲ್ಲಿ ಬರೆದಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಉಂಟಾದ ನಷ್ಟದಿಂದ ಸಾಲದ ಬಾಧೆ ತಾಳಲಾರದೆ ಯುವಕನೊಬ್ಬ ಗರ್ಭಿಣಿ ಪತ್ನಿಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಈ ಪ್ರದೇಶದಲ್ಲಿ ಆಘಾತಕ್ಕೆ ಕಾರಣವಾಗಿದೆ.

ಜೈನ ಸಂನ್ಯಾಸಿ ಹತ್ಯೆ To ನೇಹಾ ಮರ್ಡರ್‌: ಕರ್ನಾಟಕದಲ್ಲಿ ಕುರುಡಾಯ್ತು ಕಾನೂನು..!

 

click me!