Bengaluru: ಕುಖ್ಯಾತ ರೌಡಿ ಕುಣಿಗಲ್ ಗಿರಿ ಕೊಲೆ ಸಂಚು, ತಿಪ್ಪಸಂದ್ರ ರೌಡಿಶೀಟರ್ ಜೋಶ್ವಾ ಅಟ್ಟಾಡಿಸಿದ ಗ್ಯಾಂಗ್!

By Suvarna News  |  First Published Apr 20, 2024, 9:34 AM IST

ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ ಕೊಲೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಇನ್ನೊಂದು ಕಡೆ ತಿಪ್ಪಸಂದ್ರದಲ್ಲಿ ರೌಡಿಶೀಟರ್ ಜೋಶ್ವಾ ಎಂಬಾತನ ಮೇಲೆ ಪುಡಿ ರೌಡಿಗಳು ದಾಳಿ ಮಾಡಿದ್ದಾರೆ.


ಬೆಂಗಳೂರು (ಏ.20): ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ ಕೊಲೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಜೈಲಿನಿಂದಲೇ ಕುಣಿಗಲ್ ಗಿರಿ ಕೊಲೆಗೆ ಸ್ಕೆಚ್ ಹಾಕಿದ್ದು, ಜೈಲಿನಲ್ಲಿರುವ ರಾಬರಿ ಕಿಟ್ಟಿಯಿಂದ ಕುಣಿಗಲ್ ಗಿರಿ ಕೊಲೆಗೆ ಹುನ್ನಾರ ಹಾಕಿ ಸ್ಕೆಚ್‌ ರೆಡಿ ಮಾಡಿದ್ದ. ಆದರೆ ಖಚಿತ ಮಾಹಿತಿ ಮೇರೆ ದಾಳಿ ಮಾಡಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುಣಿಗಲ್ ಗಿರಿ ಕಾಮಾಕ್ಷಿಪಾಳ್ಯ ರೌಡಿಶೀಟರ್ ಆಗಿದ್ದಾನೆ. ಇನ್ನು ರಾಬರಿ ಕಿಟ್ಟಿ , ಕ್ಯಾಪ್ಟರ್ ಸೂರಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ. ಕುಣಿಗಲ್ ಗಿರಿಯನ್ನು ಮುಗಿಸಬೇಕೆಂದುಕೊಂಡಿದ್ದ ರಾಬರಿ ಕಿಟ್ಟಿ, ತನ್ನ ಶಿಷ್ಯನಾದ ಸಿಲಿಂಡರ್ ಸುನಿಲನಿಗೆ ಸುಪಾರಿ ನೀಡಿದ್ದ. ಈ ಸಿಲಿಂಡರ್ ಸುನಿಲ ಕೆಂಗೇರಿ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳ ಬಂಧನ ಮಾಡಿರುವ ಸಿಸಿಬಿ.

Tap to resize

Latest Videos

undefined

 ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಬೆಂಗಳೂರು ಉದ್ಯಮಿ ಜೊತೆಗೆ 1.5ಕೋಟಿ ಡೀಲ್‌ ಮಾಡಿದ್ದ ಗ್ಯಾಂಗ್ ಅರೆಸ್ಟ್!

ಸದ್ಯ ಸಿಲಿಂಡರ್ ಸುನಿಲ ಹಾಗೂ ಅವಿನಾಶ್ ಎಂಬಿಬ್ಬರ  ಬಂಧನವಾಗಿದ್ದು, ಪರಾರಿಯಾಗಿರುವ ಮತ್ತಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾರವಾರ ಶಾಸಕ ಅಸ್ನೋಟಿಕರ್‌ ಹತ್ಯೆ ಪ್ರಕರಣ: ಶಾರ್ಪ್‌ ಶೂಟರ್ ಹಂತಕನಿಗೆ ಜೀವಾವಧಿ ಶಿಕ್ಷೆ ಖಾಯಂ

ತಿಪ್ಪಸಂದ್ರದಲ್ಲಿ  ಮತ್ತೆ ಝಳಪಿಸಿದ ಲಾಂಗು ಮಚ್ಚು:
ಬೆಂಗಳೂರಲ್ಲಿ ಮತ್ತೆ ಲಾಂಗು ಮಚ್ಚು ಝಳಪಿಸಿದೆ. ರೌಡಿಶೀಟರ್ ಮೇಲೆ ಪುಡಿರೌಡಿಗಳು ಅಟ್ಯಾಕ್ ಮಾಡಿದ್ದಾರೆ. ರೌಡಿಶೀಟರ್ ಜೋಶ್ವಾ ಎಂಬಾತನ ಮೇಲೆ   ಅಟ್ಯಾಕ್ ಮಾಡಿದ್ದು, ಜೀವನಬೀಮಾನಗರ ಠಾಣಾ ವ್ಯಾಪ್ತಿಯ ತಿಪ್ಪಸಂದ್ರದದಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.  

ಲಾಂಗ್ ಹಿಡಿದು ಜೋಶ್ವಾ ಮೇಲೆ ನಡು ರಸ್ತೆಯಲ್ಲೇ ಪುಡಿರೌಡಿಗಳು ಅಟ್ಯಾಕ್ ಮಾಡಿದ್ದು, ಅಟ್ಯಾಕ್ ನ ಸಿಸಿಟಿವಿ ದೃಶ್ಯ ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

click me!