ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಮಾಡಿದ ಹಂತ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣವಾಗಿದೆ. ಈತ ಆಸ್ತಿ ವಿಚಾರಕ್ಕೆ ಸ್ವತಃ ತಂದೆಯ ಮೇಲೆಯೇ ಹಲ್ಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ (ಏ.20): ಹುಬ್ಬಳ್ಳಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕಾಲೇಜಿನ ಆವರಣದಲ್ಲಿಯೇ ಕಾರ್ಪೋರೇಟರ್ ಪುತ್ರಿ ನೇಹಾ ಹಿರೇಮಠ್ ಎಂಬ ಯುವತಿಯನ್ನು ಕೊಲೆಗೈದ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣವಾಗಿದೆ.
ಈತ ಪ್ರೀತಿಯನ್ನು ನಿರಾಕರಣೆ ಮಾಡಿದ ಹುಡುಗಿಯನ್ನು ಕೊಲೆ ಮಾಡಿರುವುದು ಮಾತ್ರವಲ್ಲ, ಆಸ್ತಿ ಹಾಗೂ ಹಣಕ್ಕಾಗಿ ತನ್ನ ಅಪ್ಪ ಬಾಬಾಸಾಹೇಬ್ ಕೊಂಡುನಾಯ್ಕ್ ಅವರ ಮೇಲೂ ಹಲ್ಲೆ ಮಾಡಿ ಕೊಲೆ ಮಾಡುವುದಕ್ಕೆ ಮುಂದಾಗಿದ್ದನು ಎಂಬ ಮತ್ತೊಂದು ಕರಾಳ ಮುಖ ಅನಾವರಣವಾಗಿದೆ. ಫೈಯಾಜ್ ಕಳೆದ ಮೂರು ತಿಂಗಳ ಹಿಂದೆ ತಂದೆಯ ಮೇಲೆಯೇ ಹಲ್ಲೆ ಮಾಡಿದ್ದಮು. ಈತನಿಗೆ ಯಾರೇ ಬುದ್ಧಿ ಹೇಳಿದರೂ ಕೇಳುವ ಮನಸ್ಥಿತಿ ಇರಲಿಲ್ಲ. ಮಗನ ಕೃತ್ಯದಿಂದ ಅವರ ತಂದೆಯೇ ಸ್ವತಃ ಸವದತ್ತಿ ಪೊಲೀಸ್ ಠಾಣೆಗೆ ತೆರಳಿ ತಮಗೆ ರಕ್ಷಣೆ ಕೊಡಿ ಎಂದು ದೂರು ಸಲ್ಲಿಕೆ ಮಾಡಿದ್ದರು.
undefined
ನನ್ನ ಮಗ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವೆ, ಯಾವ ಮಕ್ಕಳು ತಪ್ಪು ಮಾಡಿದ್ರೂ ತಪ್ಪೇ: ಫಯಾಜ್ ತಾಯಿ ಮಮ್ತಾಜ್
ಹೌದು, ಕೊಲೆಗಡುಕ ಮಗ ಫಯಾಜ್ ವಿರುದ್ಧವೇ ರಕ್ಷಣೆ ಕೊಡಿಸಿ ಅಂತಾ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಫಯಾಜ್‌ನನ್ನು ಠಾಣೆಗೆ ಕರೆಯಿಸಿಕೊಂಡಿದ್ದ ಪೊಲೀಸರು ಬುದ್ದಿವಾದ ಹೇಳಿದ್ದರು. ಈ ವೇಳೆ ಸವದತ್ತಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಫಯಾಜ್‌ನಿಂದ ಮುಚ್ಚಳಿಕೆ ಬರೆಯಿಸಿಕೊಂಡು ವಾಪಸ್ ಕಳಿಸಿದ್ದರು. ಮತ್ತೆನಾದ್ರೂ ತಂದೆ ಮೇಲೆ ಹಲ್ಲೆ ಮಾಡಿದ್ರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದರು. ಆಸ್ತಿ ವಿಚಾರದಲ್ಲಿ ತಂದೆ-ತಾಯಿ ಜಗಳದ ನಡುವೆ ಮಗ ಫಯಾಜ್ ತಾಯಿ ಪರವಾಗಿ ನಿಂತು ಜಗಳವಾಡಿದ್ದನು. ಗಂಡ ಹೆಂಡತಿ ಮಕ್ಕಳ ಜಗಳ ಅಂತಾ ಬುದ್ದಿವಾದ ಹೇಳಿ ವಾಪಸ್ ಕಳುಹಿಸಿದ್ದರು. ಆದರೆ, ಈಗ ಆತ ಬಾಳಿ ಬದುಕಬೇಕಿದ್ದ ನೇಹಾ ಹಿರೇಮಠ್ ಎಂಬ ಕಾಲೇಜು ಯುವತಿಯನ್ನು ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ.
ಕೊಲೆಗಾರ ಫಯಾಜ್‌ನನ್ನು ಗಲ್ಲಿಗೇರಿಸುವಂತೆ ಆಗ್ರಹ: ಬೆಳಗಾವಿಯಲ್ಲಿ ಕೂಡ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಆರೋಪಿ ಫಯಾಜ್‌ನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಯರಗಟ್ಟಿಯಲ್ಲಿ ಅಂಜುಮನ್ ಇಸ್ಲಾಮ್ ಕಮೀಟಿಯಿಂದ ಪ್ರತಿಭಟನೆ ಮಾಡಿ ತಹಸೀಲ್ದಾರ ಕಚೇರಿ ಮೂಲಕ ಸರ್ಕಾರಕ್ಕೆ ಆಗ್ರಹ ಮಾಡಿದರು. ಈ ಘಟನೆ ನಡೆದಿರುವುದು ಮನುಕುಲಕ್ಕೆ ಆತಂಕ ತಂದಿದೆ ಎಂದ ಮುಸ್ಲಿಂ ನಾಯಕರು ನೇಹಾ ಹಿರೇಮಠ್ ಸಾವಿಗೆ ಸಂತಾಪ ವ್ಯಕ್ತಪಡಿಸಿದರು.
ಕಾರ್ಪೋರೇಟರ್ ಪುತ್ರಿ ಹತ್ಯೆ: ನ್ಯಾಯಾಂಗ ಬಂಧನದಲ್ಲಿರೋ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಮುಸ್ಲಿಮರ ಪ್ರತಿಭಟನೆ
ಚಿತ್ರದುರ್ಗದಲ್ಲಿಯೂ ಕೂಡ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡುವಂತೆ ಆಗ್ರಹಿಸಿ ಚಿತ್ರದುರ್ಗ ನಗರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಯಿತು. ಮದಕರಿ ನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಆರೋಪಿ ಫಯಾಜ್ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ ಮಾಡಿದರು. ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹೆಚ್ಚು ಹೊತ್ತು ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಲಿಲ್ಲ. ಈ ವೇಳೆ ಎಬಿವಿಪಿ ಕಾರ್ಯಕರ್ತರು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಕೆ ಮಾಡಿದರು.