
ಮಂಗಳೂರು (ಆ.13): ಪ್ರೇಮ ಪೈಫಲ್ಯದಿಂದ ವಿದ್ಯಾರ್ಥಿನಿಗೆ ಕತ್ತರಿಯಿಂದ ಯುವಕ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ನಡೆದಿದೆ. ನಿನ್ನೆ (ಸೋಮವಾರ) ಮುಂಜಾನೆ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ತುಮಕೂರು ಮೂಲದ ಮಂಜುನಾಥ್‌ನನ್ನು ಮೂಡಬಿದಿರೆ ಪೋಲೀಸರು ಬಂಧಿಸಿದ್ದಾರೆ.
ಆಳ್ವಾಸ್‌ನಲ್ಲಿ ಪಿಯುಸಿ ಓದುತ್ತಿರುವ ತುಮಕೂರು ಮೂಲದ ಯುವತಿಗೆ ಕತ್ತರಿಯಿಂದ ಮಂಜುನಾಥ್ ಇರಿದಿದ್ದಾನೆ. ಮಂಜುನಾಥ್ ಹಾಗು ಯುವತಿ ಪಿಯುಸಿ ತನಕ ಜೊತೆಯಲ್ಲೇ ವಿದ್ಯಾಭ್ಯಾಸ ನಡೆಸಿದ್ದರು. ಇನ್ನು ಕಾಲೇಜು ತೊರೆದು ಮಂಜುನಾಥ್ ಮನೆಗೆ ತೆರಳಿದ್ದ. ಮೆಸೇಜ್‌ಗೆ ಉತ್ತರಿಸುತ್ತಿಲ್ಲ ಎಂದು ಕುಪಿತಗೊಂಡಿದ್ದ ಯುವಕ ಮಂಜುನಾಥ್, ತುಮಕೂರಿನಿಂದ ಮೂಡಬಿದರೆಗೆ ಬಂದಿದ್ದ.
ನನಗೆ ಪೂರ್ಣಾವಧಿ ಅಧಿಕಾರ ಸಿಕ್ಕರೆ ರೈತರ ಸಮಸ್ಯೆಗಳಿಗೆ ಪರಿಹಾರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಜೊತೆಗೆ ಯುವತಿಯ ಭೇಟಿಗೆ ಹಲವು ಬಾರಿ ಮುಂದಾಗಿದ್ದ. ಭೇಟಿ ಸಾಧ್ಯವಾಗದಕ್ಕೆ ಕುಪಿತಗೊಂಡಿದ್ದ ಮಂಜುನಾಥ್ ನಿನ್ನೆ ತರಗತಿಗೆ ತೆರಳಿ ಯುವತಿಗೆ ಕತ್ತರಿಯಿಂದ ಇರಿದಿದ್ದ. ಘಟನೆಯಲ್ಲಿ ಯುವತಿ ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಯುವಕನನನ್ನು ಹಿಡಿದು ವಿದ್ಯಾರ್ಥಿಗಳು ಪೊಲೀಸರಿಗೆ ಒಪ್ಪಿಸಿದ್ದು, ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ