* ಕುಡಿಯಲು ಹಣ ಕೊಡಲಿಲ್ಲ ಎಂದು ಹೆತ್ತ ತಾಯಿಯನ್ನೇ ಕೊಂದ
* ಪಾಪಿ ಮಗನ ಏಟಿಗೆ ಕುಸಿದು ಬಿದ್ದ ತಾಯಿ
* ಬಿಬಿಎಂಪಿ ಹೆಸರಲ್ಲಿ ದೋಖಾ ನಡೆಸುತ್ಇತದ್ದ ವಂಚಕರ ಬಂಧನ
ಬೆಂಗಳೂರು(ಫೆ. 26) ಪಾಪಿ ಪುತ್ರರ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತ ಇರುತ್ತವೆ. ಇದು ಸಹ ಅಂಥದ್ದೇ ಒಂದು ಪ್ರಕರಣ. ಕುಡಿಯಲು (Liquor) ಹಣ ಕೊಡದ್ದಕ್ಕೆಮ ಈ ಪಾಪಿ ಹೆತ್ತ ತಾಯಿಯನ್ನೇ(Mother) ಹತ್ಯೆ (Murder) ಮಾಡಿದ್ದಾನೆ.
ಬೆಂಗಳೂರಿನ (Bengaluru) ಮಾರತ್ ಹಳ್ಳಿಯ ದೇವರ ಬಿಸನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಪಾಪಿ ಕೃತ್ಯ ಎಸಗಿದ್ದಾನೆ. ಯಮುನಮ್ಮ (70) ಕೊಲೆಯಾದ ತಾಯಿ. ಮಗ ಅಂಬರೀಶ್ ಎಂಬಾತನೇ ಕೊಂದ ಪಾಪಿ.
ಕುಡಿಯಲು ಹಣ ನೀಡುವಂತೆ ತಾಯಿ ಬಳಿ ಗಲಾಟೆ ಮಾಡಿದ್ದ. ಹಣ ನೀಡದ ಕೋಪಕ್ಕೆ ತಾಯಿಯ ಕೆನ್ನೆಗೆ ಹೊಡೆದಿದ್ದಾನೆ. ತೀವ್ರ ಸ್ವರೂಪದ ಏಟು ಬಿದ್ದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ತಾಯಿ ಮೃತಪಟ್ಟಿದ್ದಾರೆ.
ಮನೆ ಕೆಲಸ ಮಾಡಿಕೊಂಡು ಶೆಡ್ ನಲ್ಲಿ ವಾಸವಾಗಿದ್ದ ತಾಯಿಗೆ ಮಗ ಪ್ರತಿದಿನ ಕಿರುಕುಳ ನೀಡುತ್ತಿದ್ದ ಕೆಲಸಕ್ಕೂ ಹೋಗದೆ ಕುಡಿದು ಪ್ರತಿ ನಿತ್ಯ ಗಲಾಟೆ ಮಾಡುತ್ತಿದ್ದ ಪ್ರಕರಣ ದಾಖಲಿಸಿಕೊಂಡ ಮಾರತ ಹಳ್ಳಿ ಪೊಲೀಸರಿಂದ ಆರೋಪಿಯನ್ನು ಬಂಧಿಸಿದ್ದಾರೆ.
ಕ್ಲುಲ್ಲಕ ಕಾರಣಕ್ಕೆ ಮಗಳನ್ನೇ ಕೊಂದ ತಂದೆ
ಓಟಿಪಿ ವಂಚಕರ ಸೆರೆ: ಓಟಿಪಿ ಪಡೆದು ಅಕೌಂಟ್ ನಿಂದ ಹಣ ಎಗರಿಸುತ್ತಿದ್ದ ಆರೋಪಿಗಳು ಕೊನೆಗೂ ಸೆರೆ ಸಿಕ್ಕಿದ್ದಾರೆ. ಶಿವಪ್ರಸಾದ್ ಮತ್ತು ಪಂಕಜ್ ಚೌಧರಿ ಬಂಧಿತ ಆರೋಪಿಗಳು. ಬಿಬಿಎಂಪಿ ವಾರ್ಡ್ ಆಫೀಸಿನಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ ವಂಚಿಸುತ್ತಿದ್ದರು.
ಡೆಬಿಟ್ ಕಾರ್ಡ್ ನಂಬರ್, ಸಿವಿವಿ, ಎಕ್ಸ್ಪೈರಿ ಡೇಟ್ ಮತ್ತು ಓಟಿಪಿ ಪಡೆದು ವಂಚನೆ ಮಾಡುತ್ತಿದ್ದರು ವಂಚನೆ ಮಾಡಿ ಪಡೆಯುತ್ತಿದ್ದ ಹಣವನ್ನ ನಕಲಿ ಖಾತೆಗೆ ಹಾಕಿಕೊಳ್ಳುತ್ತಿದ್ದರು. ಅಥಾವ ಅನ್ಲೈನ್ ಮೂಲಕ ಮೊಬೈಲ್ ಖರೀದಿಸಿ ಓಎಲ್ ಎಕ್ಸ್ ನಲ್ಲಿ ಮಾರಾಟಮಾಡುತ್ತಿದ್ದರು. ಕೃತ್ಯಕ್ಕೆ ನಕಲಿ ಸಿಮ್ ಕಾರ್ಡ್ ಗಳನ್ನ ಬಳಕೆ ಮಾಡಿ ಮಾಹಿತಿ ಸಿಗದಂತೆ ನೋಡಿಕೊಳ್ಳುತ್ತಿದ್ದರು.
ಬಂಧಿತ ಆರೋಪಿಗಳಿಂದ 22 ಸಾವಿರ ನಗದು 9 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಈಶಾನ್ಯ ವಿಭಾಗದ ಸಿಇಎನ್ ಠಾಣೆಯ 3 ಪ್ರಕರಣ, ಕೇಂದ್ರ ವಿಭಾಗದ 1 ಪ್ರಕರಣ, ಪಶ್ಚಿಮ ವಿಭಾಗದ 1 ಪ್ರಕರಣ, ದಕ್ಷಿಣ ವಿಭಾಗದ 1 ಪ್ರಕರಣ, ಮತ್ತು ರಾಯಚೂರು ಸಿಇಎನ್ ಠಾಣೆಯ 2 ಪ್ರಕರಣಗಳು ಪತ್ತೆಯಾಗಿವೆ. ಈಶಾನ್ಯ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾಯಾಂಗನೆ ಜಾಲ: ಆನ್ಲೈನ್ ಪ್ರೀತಿಯ ಜಾಲಕ್ಕೆ ಬಿದ್ದ ಯುವಕನೋರ್ವ ಹುಡುಗಿಯ ಮುಖವನ್ನೂ ನೋಡದೆ ಕೇಳಿ ಕೇಳಿದಷ್ಟು ಹಣವನ್ನು ಹಾಕಿ ಈಗ ಹಿಂಗು ತಿಂದ ಮಂಗನಂತಾಗಿ ನ್ಯಾಯಕ್ಕಾಗಿ ಪೊಲೀಸರ ಬಳಿ ಮೊರೆಯಿಟ್ಟಿರೋ ಘಟನೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ. ತಂತ್ರಜ್ಞಾನ ಬೆಳಿಯೋ ವೇಗಕ್ಕಿಂತ ಡಬ್ಬಲ್ ಸ್ಪೀಡ್ ನಲ್ಲಿ ಸೈಬರ್ ಅಪರಾಧಗಳೂ ಕೂಡಾ ಹೆಚ್ಚಾಗ್ತಾನೆ ಇವೆ. ಇವನ್ನ ತಡೆಯೋಕೆ ಅಂತಾ ಪೊಲೀಸ್ ಇಲಾಖೆ ಎಷ್ಟೆಲ್ಲ ಕಷ್ಟ ಪಡ್ತಿದೆ ಆದ್ರೂ ಕೂಡಾ ಇಂತಾ ಎಜುಕೇಟೆಡ್ ಫೂಲ್ ಗಳು ಸ್ಮಾರ್ಟ್ ವರ್ಕ್ ನೆಪದಲ್ಲಿ ಮೋಸ ಹೋಗ್ತಿದ್ದಾರೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ.. ಫೇಸ್ ಬುಕ್ ನೊಡುವಾಗ ಅಲ್ಲಿ ಬರುವ ಶೈನಿ ಆಫ್ ಕ್ವೀನ್ ಆನ್ ಲೈನ್ ಡೇಟ್ ಅಪ್ಲಿಕೇಷನ್ ನಿಂದರ್ ಪರಿಚಯವಾದ ಹುಡುಗಿ ಯುವಕನ ಬಳಿ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಹಣ ಪೀಕಿದ್ದಾಳೆಂದು ಯುವಕ ನಗರದ ಸೈಬರ್ ಕ್ರೈಮ್ಪೊಲೀಸ್ ಠಾಣೆಯ ಕದ ತಟ್ಟಿದ್ದಾನೆ.
ಚಿಕ್ಕಮಗಳೂರು ಮೂಲದ ಯುವಕ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲ್ಸ ಮಾಡ್ತಿದ್ದ. ಈ ಯುವಕ ಸದ್ಯ ವರ್ಕ್ ಫ್ರಮ್ ಹೋಮ್ ನಲ್ಲಿದ್ದಾನೆ..ಫೇಸ್ ಬುಕ್ ನಲ್ಲಿ ಸಿಕ್ಕಿದ ಶೈನಿ ಅಪ್ಲಿಕೇಷನ್ ಲಿಂಕ್‌ನಿಂದ ಯುವತಿಯೊಬ್ಬಳ ಪರಿಚಯವಾಗಿದೆ, ಕ್ರಮೇಣ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಚಾಲಾಕಿ ಐನಾತಿ ಹುಡುಗಿ ಮನಸೋ ಇಚ್ಛೆ ಹಣ ಕಿತ್ತಿದ್ದಾಳೆ. ಕೊನೆಗೆ ಈ ಯುವಕನ ಅಕೌಂಟ್ ಬ್ಲಾಕ್ ಮಾಡಿರೋದು ಕನ್ಫರ್ಮ್ ಆಗ್ತಿದ್ದಂತೆ ಯುವಕ ದಾರಿ ಕಾಣದೆ ಚಿಕ್ಕಮಗಳೂರಿನ ಸೈಬರ್ ಅಪರಾಧ ವಿಭಾಗದ ಪೊಲೀಸರ ಬಳಿ ಬಂದು ನ್ಯಾಯ ಕೊಡಿಸಿ ನ್ಯಾಯದ ಜೊತೆ ಕಳೆದುಕೊಂಡಿರೋ ಹಣವನ್ನೂ ವಾಪಸ್ ಕೊಡ್ಸಿ ಎಂದು ದುಂಬಾಲು ಬಿದ್ದಿದ್ದಾನೆ.