ತನಗೆ ರಾತ್ರಿ ಸಹಕಾರ ಕೊಡುತ್ತಿಲ್ಲವೆಂದು ಪತ್ನಿಗೆ ಗಂಡ ಹೀಗಾ ಮಾಡೋದು...

Published : Feb 26, 2022, 08:49 PM IST
ತನಗೆ ರಾತ್ರಿ ಸಹಕಾರ ಕೊಡುತ್ತಿಲ್ಲವೆಂದು ಪತ್ನಿಗೆ ಗಂಡ ಹೀಗಾ ಮಾಡೋದು...

ಸಾರಾಂಶ

* ತನಗೆ ರಾತ್ರಿ ಸಹಕಾರ ಕೊಡುತ್ತಿಲ್ಲವೆಂದು ಪತ್ನಿಗೆ ಗಂಡ ಹೀಗಾ ಮಾಡೋದು... * ಪತ್ನಿ ಸಹಕಾರ ಕೊಡುತ್ತಿಲ್ಲ ಎಂದ ಪತಿರಾಯ *ನೇರವಾಗಿ ಪೊಲೀಸರ ಮುಂದೆ ಹೇಳಿದ

ಬೆಂಗಳೂರು, (ಫೆ.26): ಕಟ್ಟಿಕೊಂಡ  ಪತ್ನಿಯನ್ನೇ ಪತಿರಾಯನೊಬ್ಬ ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಭೈರಪ್ಪಲೇಔಟ್‌ನಲ್ಲಿ ನಡೆದಿದೆ.

ಮುಜಾಮಿಲ್ ಪಾಷಾ ಎಂಬಾತ ಪತ್ನಿ ಆಯೇಷಾ ಭಾನು ಎಂಬುವರನ್ನ ಭೀಕರವಾಗಿ ಹತ್ಯೆ ಮಾಡಿದ್ದಾನೆ. ತಡರಾತ್ರಿ ತನ್ನ ಪತ್ನಿಯನ್ನೇ ಕೊಚ್ಚಿ ಕೊಂದ ಆರೋಪಿ ಪತಿ, ಇಂದು (ಶನಿವಾರ) ಬೆಳಗ್ಗೆ 3ರ ಸುಮಾರಿಗೆ ಗೋವಿಂದಪುರ ಪೊಲೀಸ್ ಠಾಣೆಗೆ ಆಗಮಿಸಿದ್ದ. ತಾನು ತನ್ನ ಪತ್ನಿಯನ್ನ ಕೊಂದಿದ್ದೇನೆ ಎಂದು ಪೊಲೀಸರ ಮುಂದೆ ಮಚ್ಚು ಸಮೇತ ಶರಣಾಗಿದ್ದಾನೆ.

Illicit Relationship : ಕುಡಿದ ಮತ್ತಿನಲ್ಲಿ  ಪತ್ನಿಯ  ಕುತ್ತಿಗೆಗೆ ಸೀರೆ ಸುತ್ತಿ ಕೊಲೆ! ಪಾಪಿ ಗಂಡ

ಮೂಲತಃ ರಾಮನಗರ ನಿವಾಸಿಯಾಗಿರುವ ಆರೋಪಿ, ನಗರದಲ್ಲಿ ಆಟೋ ಓಡಿಸಿಕೊಂಡಿದ್ದ. ಹನ್ನೊಂದು ವರ್ಷದ ಹಿಂದೆ ಆಯೇಷಾ ಭಾನುವನ್ನ ಮದುವೆಯಾಗಿದ್ದ. ಮುಜಾಮಿಲ್ ಪಾಷಾ ದಂಪತಿಗೆ ಈಗಾಗಲೇ ಮೂರು ಮಕ್ಕಳಿವೆ.

ಗಂಡನಿಗೆ ಆಯೇಷಾ ಭಾನು ಸಹಕಾರ ನೀಡದ ಹಿನ್ನೆಲೆ ಇಬ್ಬರ ನಡುವೆ ಕಿರಿಕ್​ಗಳು ನಡೆಯುತ್ತಲೇ ಇತ್ತು ಎನ್ನಲಾಗಿದ್ದು, ಇದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚಿಗೆ ಮಕ್ಕಳನ್ನ ಬೇರೆ ಕೊಠಡಿಯಲ್ಲಿ ಮಲಗಿಸಿ ಬಳಿ ಬರುತ್ತಿದ್ದ  ಪತ್ನಿ, ವ ಕೀಳಾಗಿ ಬೈಯುತ್ತಿದ್ದಳಂತೆ. ಈ ಹಿನ್ನೆಲೆ ಹಿರಿಯರ ನಡುವೆ ರಾಜಿ ಪಂಚಾಯ್ತಿ ಕೂಡ ನಡೆದಿತ್ತು. ಆದರೆ, ಯಾವುದೂ ಪ್ರಯೋಜನವಾಗಿರಲಿಲ್ಲ.

ಪ್ರತಿ ದಿನ ಮನೆಯಲ್ಲಿ ಜಗಳವಿದ್ದ ಕಾರಣ ಮುಜಾಮಿಲ್ ಖಿನ್ನತೆಗೆ ಒಳಗಾಗಿದ್ದನಂತೆ. ನಿನ್ನೆ ಕೂಡ ಇದೇ ವಿಚಾರಕ್ಕೆ ಜಗಳ ನಡೆದಿತ್ತು. ಕೊನೆಗೆ ಮಧ್ಯರಾತ್ರಿ ಪತ್ನಿಯ ಕತ್ತನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ‌ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸಿ‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ. ಈ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಹೆಂಡ್ತಿ ಫೋಟೋ ಹಾಕಿ 'RIP' ಎಂದ ಗಂಡ
ಬೆಂಗಳೂರು: ಬರ್ತ್ ಡೇ ಪಾರ್ಟಿ ವಿಚಾರಕ್ಕೆ ಜಗಳ ನಡೆದು, ಮರುದಿನ ಗಂಡ ಹೆಂಡತಿಯ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಿ ರಿಪ್ (RIP ) ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಉದನಹಳ್ಳಿಯಲ್ಲಿ ನಡೆದಿದೆ.

ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣ, ತನ್ನ ಹೆಂಡತಿ ಲೀಲಾವತಿಯ ಫೋಟೋ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ ಎನ್ನಲಾಗಿದೆ. ಫೇಸ್ ಬುಕ್ ಪೋಸ್ಟ್ ನೋಡಿ ಗಾಬರಿಗೊಂಡ ಪೋಷಕರು, ಮಗಳನ್ನು ಹುಡುಕಿಕೊಂಡು ಆಕೆಯ ಗಂಡನ ಮನೆಗೆ ಬಂದಿದ್ದಾರೆ. ಈ ವೇಳೆ ಆಕೆ ನಾಪತ್ತೆಯಾಗಿರುವ ವಿಚಾರ ಗೊತ್ತಾಗುತ್ತದೆ. ಹಾಗಾಗಿ, ಅಳಿಯ ಮುನಿಕೃಷ್ಣ ನಮ್ಮ ಮಗಳನ್ನು ಕೊಲೆ ಮಾಡಿದ್ದಾನೆ. ಈಗ ನಾಪತ್ತೆಯಾಗಿದ್ದಾಳೆ ಎಂದು ನಾಟಕ ಆಡ್ತಿದ್ದಾನೆ ಎಂದು ಲೀಲಾವತಿ ಪೋಷಕರು ಕಣ್ಣೀರು ಹಾಕಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆದರೆ, ಪ್ರಕರಣದ ಬಗ್ಗೆ ಮುನಿಕೃಷ್ಣ ಮನೆಯವರು ಬೇರೆಯದ್ದೇ ಕಥೆ ಹೇಳುತ್ತಿದ್ದಾರೆ. ಗಂಡ - ಹೆಂಡತಿ ನಡುವೆ ಜಗಳ ನಡೆದು, ಮುನಿಕೃಷ್ಣ ಹೆಂಡತಿಗೆ ಹೊಡೆದಿದ್ದು ನಿಜ. ಆದರೆ, ಆ ಬಳಿಕ ಲೀಲಾವತಿ ಮನೆ ಬಿಟ್ಟು ಹೋಗಿದ್ದಾಳೆ. ಇದರಲ್ಲಿ ಮುನಿಕೃಷ್ಣನದ್ದು ಏನು ತಪ್ಪಿಲ್ಲ. ಅಲ್ಲದೆ, ಲೀಲಾವತಿ ಹೋಗುವಾಗ ಗಂಡನ ಮೊಬೈಲ್ ತೆಗೆದುಕೊಂಡು ಹೋಗಿದ್ದು, ಅದರಿಂದಲೇ ಆಕೆಯ ಫೋಟೋ ಹಾಕಿ ರಿಪ್ ಎಂದು ಬರೆದಿದ್ದಾಳೆ ಎನ್ನುತ್ತಿದ್ದಾರೆ. ಸದ್ಯ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯಿಂದ ಸತ್ಯಾ ಸತ್ಯತೆ ತಿಳಿದು ಬರಬೇಕಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking: ಬಿಕ್ಲು ಶಿವ ಕೊಲೆ ಕೇಸ್ ಬೈರತಿಗೆ ರಿಲೀಫ್, ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು
ಮೈಸೂರು: ಬಲೂನ್ ಹೀಲಿಯಂ ಸಿಲಿಂಡರ್ ಸ್ಫೋಟ; ಮೃತ ಸಲೀಂ ವಿರುದ್ಧ ಎಫ್‌ಐಆರ್ ದಾಖಲು