* ಅಕ್ರಮ ಸಂಬಂಧದ ಶಂಕೆ
* ಪತ್ನಿಯನ್ನು ದಾರುಣ ರೀತಿ ಹತ್ಯೆ ಮಾಡಿದ ಗಂಡ
* ಉಸಿರುಕಟ್ಟಿಸಿ ಪತ್ನಿ ಹತ್ಯೆ
ಚಿಕ್ಕೋಡಿ( ಫೆ. 26) ಪತ್ನಿ ಮೇಲೆ ಅಕ್ರಮ (Illicit Relationship) ಸಂಬಂಧ ಸಂಶಯ ಪಟ್ಟುಕೊಂಡ ಗಂಡ ದಾರುಣ ರೀತಿಯಲ್ಲಿ ಪತ್ನಿಯನ್ನು ಹತ್ಯೆ (Murder) ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಸೀರೆಯಿಂದ ಕುತ್ತಿಗೆಗೆ ಉರುಳು ಹಾಕಿ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.
ಆಶಾ ಪ್ರದೀಪ ಕಾಂಬಳೆ (35 ) ಗಂಡನಿಂದಲೇ ಹತ್ಯೆಯಾಗಿದ್ದಾಳೆ.. ಪ್ರತಾಪ್ ಅಲಿಯಾಸ್ ಪ್ರದೀಪ ಕಾಂಬಳೆ (40 ) ಪತ್ನಿಯನ್ನೇ ಹತ್ಯೆಗೈದ ದುರುಳ. ರಾಯಬಾಗ (Raibag)ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಗಂಡ ಪತ್ನಿಯ ಹತ್ಯೆ ಮಾಡಿದ್ದಾನೆ. ಕೊಲೆ ಆರೋಪಿ ಕಾಂಬಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗಳ ಸಂಸಾರವನ್ನೇ ಕೊಂದು ಮುಗಿಸಿದ ಅಪ್ಪ: ಪಿಎಸ್‌ಐ ಪುತ್ರನ ಹತ್ಯೆ(Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು(Police) ನಾಲ್ವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.
Online Dating Fraud : ಆನ್ ಲೈನ್ ಮಾಯಾಂಗನೆ ವಿಡಿಯೋ ಚಾಟಿಂಗ್ ಮೋಹ, ಲಕ್ಷ ಲಕ್ಷ ಕಳಕೊಂಡ ಚಿಕ್ಕಮಗಳೂರು ಟೆಕ್ಕಿ!
ಪಾಲಿಕೆ ಮಾಜಿ ಸದಸ್ಯ ರೌಫ ಶೇಖ, ರೌಫ ಪುತ್ರ ಆತೀಫ್ ಶೇಖ, ವಿಲಾಸ ರಾಠೋಡ, ಅನಿಲ ಚವ್ಹಾಣ ಬಂಧಿತ ಆರೋಪಿಗಳು. ಪಾಲಿಕೆ ಮಾಜಿ ಸದಸ್ಯ ರೌಫ ಶೇಖ ಅವರ ಪುತ್ರಿ ಅತೀಕಾಳನ್ನು ಗಾಂಧಿ ಚೌಕ ಕ್ರೈಂ ಪಿಎಸ್‌ಐ ರಿಯಾಜ ಕೂಡಗಿ ಅವರ ಪುತ್ರ ಮುಸ್ತಕಿನ್ ಕೂಡಗಿ ಪ್ರೇಮಿಸಿ ಮದುವೆಯಾಗಿದ್ದ. ಈ ಸಿಟ್ಟಿನಿಂದಾಗಿ ಫೆ.15ರಂದು ವಿಜಯಪುರ (Vijayapura) ನಗರದ ರೇಡಿಯೋ ಕೇಂದ್ರದ ಬಳಿ ಮುಸ್ತಕಿನ್ ಕೂಡಗಿ ಭೀಕರ ಹತ್ಯೆ ನಡೆದಿತ್ತು. ಇದು ವಿಜಯಪುರ ನಗರದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ನಾಲ್ವರು ಆರೋಪಿಗಳು ಬಂಧಿಸಿದ್ದಾರೆ.
8 ಗಂಟೆಯಲ್ಲೇ ಐವರು ಅಪಹರಣಕಾರರ ಹೆಡೆಮುರಿ ಕಟ್ಟಿದ ಪೊಲೀಸರು: ಬೇಕರಿ ಮಾಲೀಕನನ್ನು ಅಪಹರಣ(Kidnap) ಮಾಡಿ 20 ಲಕ್ಷ ಹಣದ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು(Accused) ಕೇವಲ ಎಂಟು ಗಂಟೆಯೊಳಗೆ ಬಂಧಿಸಿ ಬೇಕರಿ ಮಾಲೀಕನನ್ನು ರಕ್ಷಣೆ ಮಾಡಿದ್ದ ಪ್ರಕರಣ ಇಂಡಿಯಿಂದ ವರದಿಯಾಗಿತ್ತು.
ಬೇಕರಿ ಇಟ್ಟುಕೊಂಡಿದ್ದ ಮಾನಸಿಂಗ್ ಎಂಬುವವರನ್ನು ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ವಿಜಯಪುರ ರಸ್ತೆಯ ಭಾರತ ಗ್ಯಾಸ್ ಏಜೆನ್ಸಿ ಬಳಿ ಕಾರ್‌ನಲ್ಲಿ ಹಾಕಿಕೊಂಡು ಹೋಗಿ 20 ಲಕ್ಷ ಹಣಕ್ಕೆ(Money) ಬೇಡಿಕೆ ಇಟ್ಟಿದ್ದರು. ಕಿಡ್ನಾಪ್ ಮಾಡಿ ಬೇಕರಿ ಮಾಲೀಕನ ಕೈ ಹಾಗೂ ಕಾಲಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದಾರೆ. ಇಂಡಿ ಪೊಲೀಸರು(Police) ಮಿಂಚಿನ ಕಾರ್ಯಾಚರಣೆ ನಡೆಸಿದ್ದರ ಪರಿಣಾಮ ಲೋಣಿ ಕ್ರಾಸ್ ಬಳಿ ಆರೋಪಿತರ ಕಾರು ಬೆನ್ನಟ್ಟಿ ಕಾರು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು