* ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ತಮ್ಮ
* ಪ್ರಿಯಕರನ ಜೊತೆಗೆ ಸೇರಿ ತಮ್ಮನನ್ನೇ ಕೊಂದ ಅಕ್ಕ
* ರಹಸ್ಯವನ್ನು ಭೇದಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿ
ವರದಿ: ಗುರುರಾಜ್ ಹೂಗಾರ್
ಹುಬ್ಬಳ್ಳಿ, (ಮೇ.16): ನೂಲ್ವಿ ಗ್ರಾಮದಲ್ಲಿ ನಡೆದ ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊನ್ನೆಯಷ್ಟೇ ನೂಲ್ವಿ ಗ್ರಾಮದ ಹೊರವಲಯದಲ್ಲಿ ನಡೆದ ಭೀಕರ ಕೊಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ತಮ್ಮನನ್ನೇ ಅಕ್ಕ ಕೊಲೆ ಮಾಡಿರುವುದು ಪೊಲೀಸ್ ತನಿಖೆ ಮೂಲಕ ಹೊರ ಬಂದಿದೆ.
ಹೌದು...ಕಳೆದ ಎರಡೂ ದಿನಗಳ ಹಿಂದೆ ಶಂಭುಲಿಂಗ ಕಮಡೊಳ್ಳಿ(35) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಿಸಿಕೊಂಡ 24 ಗಂಟೆಯಲ್ಲಿಯೆ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಲಾಡ್ಜ್‌ನಲ್ಲಿ ಬಡಿದಾಡಿಕೊಂಡ ತೃತೀಯ ಲಿಂಗಿಗಳು, ಯುವಕನ ಮಧ್ಯೆ ಬಡಿದಾಟ..!
ಅನೈತಿಕ ಸಂಬಂಧಕ್ಕೆ ಸಹೋದರ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಸಹೋದರಿ ಬಸವ್ವ ನರಸಣ್ಣವರ ಹಾಗೂ ಆಕೆಯ ಪ್ರಿಯಕರ ಚನ್ನಪ್ಪ ಮರೆಪ್ಪಗೌರಡ ಸೇರಿಕೊಂಡು ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದರು.
ಪೊಲೀಸರಿಗೆ ಸಂಶಯ ಬಾರದಿರಲ್ಲಿ ಎಂದು ಸಹೋದರಿ ಸಹೋದರನ ಶವದ ಎದುರು ಕುಳಿತು ಕಣ್ಣಿರು ಹಾಕಿ ನಾಟಕವಾಡಿದ್ದರು. ಪೊಲೀಸ್ ತನಿಖೆಯಲ್ಲಿ ಅನೈತಿಕ ಸಂಬಂಧಕ್ಕೆ ಕೊಲೆ ಮಾಡಿರುವದನ್ನು ಆರೋಪಿಗಳು ಒಪ್ಪಿಕೊಂಡಿದ್ದು,ತನ್ನ ಕಾಮದಾಟಕ್ಕೆ ಒಡ ಹುಟ್ಟಿದ ತಮ್ಮನನ್ನೇ ಕೊಲೆ ಮಾಡಲು ಸಂಚು ರೂಪಿಸಿದ ಅಕ್ಕ ಬಸವ್ವ ಹಾಗೂ ಆಕೆಯ ಪ್ರಿಯಕರನನ್ನು ಇದೀಗ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಒಂದು ಹೆಣ್ಣಿಗಾಗಿ ಇಬ್ಬರ ಕಿತ್ತಾಟ, ಕೊಲೆಯಲ್ಲಿ ಅಂತ್ಯ
ರಾಯಚೂರು: ಓರ್ವ ಮಹಿಳೆಗಾಗಿ ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯಕಂಡಿದೆ. ಈ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿ ಜವಳಗೇರಾ ಸಮೀಪ ನಡೆದಿದೆ.
ಒಬ್ಬಳು ಮಹಿಳೆ ಜೊತೆ ಗೆಳೆಯರು ಅನೈತಿಕ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಸ್ನೇಹಿತನ್ನು ಕೊಲೆ ಮಾಡಿ ಬಳಿಕ ಮುಖಕ್ಕೆ ಬೆಂಕಿ ಹಚ್ಚಿದ್ದಾನೆ. ಬಸವರಾಜ್ (35)ಕೊಲೆಯಾಗಿದ್ದ ವ್ಯಕ್ತಿ.
ಜವಳಗೇರಾ ಮೂಲದ ಜಗದೀಶ್ ಹಚ್ಚೋಳ್ಳಿ ಎನ್ನುವಾತ ತಲೆಖಾನ್ ಮೂಲದ ಬಸವರಾಜ್ ಈ ಇಬ್ಬರು ಓರ್ವ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಜಗದೀಶ್ ಆ ಮಹಿಳೆ ಜೊತೆ ಕಳೆದ ಮೂರು ವರ್ಷಗಳಿಂದ ಸಂಬಂಧ ಇಟ್ಟುಕೊಂಡಿದ್ದ. ಇದರ ಮಧ್ಯೆ ಬಸವರಾಜ್ ಎಂಬಾತ ಎಂಟ್ರಿಯಾಗಿದ್ದಾನೆ.
ಇದು ಇಬ್ಬರ ನಡುವಿನ ದ್ವೇಷಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಬಸವರಾಜ್ನನ್ನು ಕೊಲ್ಲಬೇಕು ಅಂತ ಜಗದೀಶ್, ಜಗದೀಶ್ನನ್ನ ಕೊಲ್ಲಬೇಕು ಅಂತ ಮೃತ ಬಸವರಾಜ್ ಪ್ಲಾನ್ ಮಾಡಿದ್ದ.
ಇದರ ಮಧ್ಯೆ ಬಸವರಾಜಗೆ ಹಣದ ಅವಶ್ಯಕತೆ ಇತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಜಗದೀಶ್, ಸಾಲ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಜವಳಗೇರಾ ಹಾಗೂ ದಿದ್ದಿಗಿ ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಬೈಕ್ ಓಡಿಸುತ್ತಿದ್ದ ಬಸವರಾಜ್ ಕುತ್ತಿಗೆಯನ್ನು ಶೇವಿಂಗ್ ಮಾಡೋ ಕತ್ತಿಯಿಂದ ಕುಯ್ದಿದ್ದಾನೆ. ಬಳಿಕ ಬೈಕ್ನಲ್ಲಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಬಳಿಕ ಹೆಣ ಬಿದ್ದಿರುವುದನ್ನು ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಬಳಗಾನೂರು ಪೊಲೀಸ್ರು ಪರಿಶೀಲನೆ ನಡೆಸಿ, ಬಳಿಕ ಮೃತನ ಬೆರಳಿನಲ್ಲಿದ್ದ ಉಂಗುರಗಳು, ಚಪ್ಪಲಿ ಆಧಾರದಲ್ಲಿ ಕೇಸ್ ಪತ್ತೆ ಮಾಡಿದ್ದಾರೆ. ನಂತರ ಮೃತನ ಮೊಬೈಲ್ ಫೋನ್ ಟ್ರೇಸ್ ಮಾಡಿ ಆರೋಪಿ ಜಗದೀಶ್ ಹಚ್ಚೋಳ್ಳಿ ಎನ್ನುವಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ನಾನು ಒಬ್ಬನೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈಗಾಗಲೇ ಪೊಲೀಸ್ರು ಆರೋಪಿಯನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದು, ಈ ಪ್ರಕರಣದ ಹಿಂದೆ ಬೇರೆ ಕೈಗಳು ಇದ್ದಾವೆಯೇ ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.