ಆಫ್ತಾಬ್ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಬಯಸಿದ್ದ ಶ್ರದ್ಧಾ, ವ್ಯಾಟ್ಸ್ಆ್ಯಪ್ ಚಾಟ್ ಬಹಿರಂಗ!

By Suvarna NewsFirst Published Nov 18, 2022, 7:51 PM IST
Highlights

ಶ್ರದ್ಧಾ ಮರ್ಡರ್ ಕೇಸ್ ತನಿಖೆಯಲ್ಲಿ ಹೊಸ ಹೊಸ ಮಾಹಿತಿಗಳು ಬಹಿರಂಗವಾಗುತ್ತಿದೆ. ಇದೀಗ ಶ್ರದ್ಧ ವ್ಯಾಟ್ಸ್ಆ್ಯಪ್ ಚಾಟ್ ಬಹಿರಂಗವಾಗಿದೆ. ಸ್ನೇಹಿತರಲ್ಲಿ ಅಳಲು ತೋಡಿಕೊಂಡ ಶ್ರದ್ಧಾ, ಆಫ್ತಾಬ್ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಬಯಸಿದ್ದಳು. 

ನವದೆಹಲಿ(ನ.18): ಹಿಂದೂ ಹುಡುಗಿ ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಶ್ರದ್ಧಾಳನ್ನು 35 ತುಂಡು ಕತ್ತರಿಸಿ ಎಸೆದ ಆರೋಪಿ ಅಫ್ತಾಬ್ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಇದರ ನಡುವೆ ಪೊಲೀಸರು ಶ್ರದ್ಧಾ ವ್ಯಾಟ್ಸ್ಆ್ಯಪ್ ಚಾಟ್ ಹಿಸ್ಟರಿ ತೆಗೆದಿದ್ದಾರೆ. ಗೆಳೆಯರ ಜೊತೆಗಿನ ಸಂಭಾಷಣೆ ತುಣುಕುಗಳು ಲಭ್ಯವಾಗಿದೆ. ಶ್ರದ್ಧಾ ಸಾವಿಗೂ ಮುನ್ನ ಹೇಗಾದರೂ ಮಾಡಿ ಆಫ್ತಾಬ್‌ನಿಂದ ತಪ್ಪಿಸಿಕೊಳ್ಳಲು ಬಯಸಿದ್ದಳು. ಶ್ರದ್ಧಾ ಬದುಕಿನಲ್ಲಿ ಈ ರೀತಿಯ ಜಗಳ ಸಾಮಾನ್ಯವಾಗಿದ್ದ ಕಾರಣ ಸ್ನೇಹಿತರು ಧೈರ್ಯ ತುಂಬಿದ್ದಾರೆ. ಆದರೆ ಈ ಧೈರ್ಯದ ಮಾತುಗಳಿಂದ ಶ್ರದ್ಧಾ ಬದುಕುಳಿಯಲಿಲ್ಲ.  ಆಫ್ತಾಬ್ ಜೊತೆ ಲಿವ್ ಇನ್ ರಿಲೇಶನ್‌ನಲ್ಲಿ ಬಂದ ಬಳಿಕ ಶ್ರದ್ಧಾ ಬದುಕಿನಲ್ಲಿ ಕಿತ್ತಾಟ, ಜಗಳ, ಹಿಂಸೆ ಸಾಮಾನ್ಯವಾಗಿತ್ತು. 

ಎರಡು ವರ್ಷದ ಹಿಂದೆಯೂ ಇದೇ ರೀತಿಯ ಜಗಳ ನಡೆದಿತ್ತು. ಈ ಜಗಳದ ಬಳಿಕ ಸ್ನೇಹಿತರಿಗೆ ವ್ಯಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದ ಶ್ರದ್ಧಾ, ಅಳಲು ತೋಡಿಕೊಂಡಿದ್ದಳು. ಅಫ್ತಾಬ್ ಕೋಪಕ್ಕೆ ಶ್ರದ್ಧ ಮೂಗು, ಬೆನ್ನು ಎಲ್ಲವೂ ಮುರಿದಿತ್ತು. ಶುಗರ್ ಲೋ ಆಗಿತ್ತು. ಹಾಸಿಗೆಯಿಂದ ಮೇಲೆಳಲು ಆಗದೆ ನರಳಾಡಿದ್ದಳು. ಅಫ್ತಾಬ್ ಹೊರಗೆ ಹೋದರೆ ಹೇಗಾದರು ಮಾಡಿ ಹೊರಗೆ ಬರಬೇಕು ಎಂದು ಸ್ನೇಹತರಿಗೆ ಮೇಸೆಜ್ ಮಾಡಿದ್ದಳು.

ಹಿಂದೂ ಯುವತಿಯ ಪೀಸ್ ಪೀಸ್ ಮಾಡಿದ ಬಾಂಗ್ಲಾದ ಅಬು ಬಕ್ರ್, ಮತ್ತೊಬ್ಬಳ ಜೊತೆ ಪರಾರಿ!

ಅಫ್ತಾಬ್‌ ಮಂಪರು ಪರೀಕ್ಷೆಗೆ ದಿಲ್ಲಿ ಕೋರ್ಚ್‌ ಸಮ್ಮತಿ
ಶ್ರದ್ಧಾ ವಾಕರ್‌ ಹಂತಕ ಅಫ್ತಾಬ್‌ ಪದೇ ಪದೇ ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಕಾರಣಕ್ಕೆ ಆತನ ಮಂಪರು ಪರೀಕ್ಷೆ ನಡೆಸಲು ದೆಹಲಿ ಕೋರ್ಚ್‌ ಬುಧವಾರ ಸಮ್ಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಶ್ರದ್ಧಾ ಹತ್ಯೆ ಬಳಿಕ ಆಕೆಯ ಫೋನನ್ನು ಏನು ಮಾಡಿದ್ದ ಎಂಬ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾನೆ. ವಿಚಾರಣೆ ವೇಳೆ ಒಮ್ಮೆ ಶ್ರದ್ಧಾಳ ಪೋನು ಮಹಾರಾಷ್ಟ್ರದಲ್ಲಿ ಎಸೆದ ಎಂದಿದ್ದರೆ ಇನ್ನೊಮ್ಮೆ ಫೋನನ್ನು ದೆಹಲಿಯಲ್ಲೇ ನಾಶಪಡಿಸಿದ್ದಾಗಿ ಹೇಳಿ ಪದೇ ಪದೇ ತನ್ನ ಉತ್ತರಗಳನ್ನು ಬದಲಾಯಿಸುತ್ತಿದ್ದಾನೆ. ಹೀಗಾಗಿ ಆತನ ಮಂಪರು ಪರೀಕ್ಷೆಗೆ ದಕ್ಷಿಣ ದೆಹಲಿಯ ಸಾಕೇತ್‌ನಲ್ಲಿರುವ ಕೋರ್ಚ್‌ ಅನುಮತಿ ನೀಡಿದೆ ಎಂದು ಮೂಲಗಳು ಹೇಳಿವೆ. ಮಂಪರು ಪರೀಕ್ಷೆ ನಡೆಸುವಾಗ ಆರೋಪಿಗೆ ಇಂಜೆಕ್ಷನ್‌ ನೀಡಿ ಸಮ್ಮೋಹನದ ಹಂತಕ್ಕೆ ತಲುಪುವಂತೆ ಮಾಡಲಾಗುವುದು. ಪ್ರಜ್ಞೆಯಲ್ಲಿರುವಾಗ ಮುಚ್ಚಿಡಲು ಬಯಸುವ ಮಾಹಿತಿಯನ್ನು ಈ ವೇಳೆ ಆರೋಪಿ ಒಪ್ಪಿಕೊಳ್ಳುವ ಸಾಧ್ಯತೆಗಳಿರುತ್ತದೆ. ಮಂಪರು ಪರೀಕ್ಷೆ ನಡೆಸುವಾಗ ಪೊಲೀಸರ ತಂಡದ ಜೊತೆಗೆ ಮನೋವೈದ್ಯರು ಕೂಡಾ ಇರುತ್ತಾರೆ.

ಶ್ರದ್ಧಾ ರೀತಿ ಮತ್ತೊಂದು ಪ್ರಕರಣ, ಲೀವ್ ಇನ್ ಸಂಗಾತಿಯ ನೀರಿನ ಟ್ಯಾಂಕ್‌ಗೆ ತಳ್ಳಿದ ಪಾಪಿ!

ಶ್ರದ್ಧಾ ಬಿಟ್ಟು ಹೋದಳೆಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಪಾಪಿ
ಪ್ರೇಯಸಿ ಶ್ರದ್ಧಾಳ ಕತ್ತುಹಿಸುಕಿ ಕೊಂದು 35 ಪೀಸುಗಳಾಗಿ ಮಾಡಿದ್ದ ಅಫ್ತಾಬ್‌ ಪೂನಾವಾಲಾ ತಾನು ಅಮಾಯಕ ಎಂದು ಪೊಲೀಸರನ್ನು ದಿಕ್ಕು ತಪ್ಪಿಸಲು ಯತ್ನಿಸಿದ್ದನಾದರೂ, ತಾನೇ ಮಾಡಿದ ಆನ್‌ಲೈನ್‌ ಹಣ ವರ್ಗಾವಣೆ, ಇನ್‌ಸ್ಟಾಗ್ರಾಂ ಚಾಟ್‌ನಿಂದಾಗಿ ಅಂತಿಮವಾಗಿ ಸಿಕ್ಕಿಬಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಮೊದಲಿಗೆ ಶ್ರದ್ಧಾ ನಾಪತ್ತೆಯಾಗಿರುವ ವಿಷಯದಲ್ಲಿ ತನ್ನದೇನೂ ತಪ್ಪಿಲ್ಲ, ನನ್ನ ಬಿಟ್ಟು ಹೋಗಿದ್ದಾಳೆ ಎಂದು ಧೈರ್ಯವಾಗಿ ಮಹಾರಾಷ್ಟ್ರ ಮತ್ತು ದೆಹಲಿ ಪೊಲೀಸರ ಮುಂದೆ ವಾದಿಸಿದ್ದ ಅಫ್ತಾಬ್‌, ಇನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿವಾಗುತ್ತಲೇ ಬಿಕ್ಕಿಬಿಕ್ಕಿ ಅತ್ತು ತನ್ನ ತಪ್ಪನ್ನು ಒಪ್ಪಿಕೊಂಡ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

click me!