ಟ್ರೋಲಿ ಬ್ಯಾಗ್‌ನಲ್ಲಿ ಯುವತಿ ಶವ ಪತ್ತೆ, ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಶಂಕೆ!

By Suvarna NewsFirst Published Nov 18, 2022, 5:12 PM IST
Highlights

ಎಕ್ಸ್‌ಪ್ರೆಸ್ ವೇ ಹೆದ್ದಾರಿ ಪಕ್ಕದಲ್ಲಿ ಯುವತಿಯ ಶವ ಪತ್ತೆಯಾಗಿದೆ. 21 ರಿಂದ 22 ಹರೆಯದ ಯುವತಿಯ ಶವ ಟ್ರೋಲಿ ಬ್ಯಾಗ್‌ನಲ್ಲಿ ಪತ್ತೆಯಾಗಿದೆ. ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿಗಳು ಬಹಿರಂಗವಾಗಿದೆ

ಮಥುರಾ(ನ.18):  ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಭೀಕರ ಹತ್ಯೆಗೆ ಆಕ್ರೋಶಗಳು ಹೆಚ್ಚಾಗುತ್ತಿದೆ. ಈ ಘಟನೆ ನಡುವೆ ಇದೀಗ ಯಮುನಾ ಎಕ್ಸ್ಪ್ರೆಸ್ ಹೈವೇಯ ಮಥುರಾ ಬಳಿ ಯುವತಿ ಶವ ಪತ್ತೆಯಾಗಿದೆ. ಟ್ರೋಲಿ ಬ್ಯಾಗ್‌ನಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಪೊಲೀಸರು ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೆಲ ಮಾಹಿತಿಗಳು ಲಭ್ಯವಾಗಿದೆ.  ಸದ್ಯ ಯುವತಿ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಬೇರೆ ರಾಜ್ಯದಲ್ಲಿ ಹತ್ಯೆ ನಡೆಸಿ ಮಥುರಾ ಬಳಿ ಎಸೆದಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್ ವೇ ಹಾದು ಹೋಗುವ ಮಥುರಾ ಬಳಿ ಕೆಂಪು ಬಣ್ಣದ ಟ್ರೋಲಿ ಬ್ಯಾಗ್ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಂಬ್ ಇರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬ್ಯಾಗ್ ತೆರೆದಿದ್ದಾರೆ. ಈ ವೇಳೆ ಪ್ಲಾಸ್ಟಿಕ್‌ನಲ್ಲಿ ಸುತ್ತಿಟ್ಟ ಮಹಿಳೆಯ ಶವ ಪತ್ತೆಯಾಗಿದೆ. 

ಹಿಂದೂ ಯುವತಿಯ ಪೀಸ್ ಪೀಸ್ ಮಾಡಿದ ಬಾಂಗ್ಲಾದ ಅಬು ಬಕ್ರ್, ಮತ್ತೊಬ್ಬಳ ಜೊತೆ ಪರಾರಿ!

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. 21 ರಿಂದ 22ರ ಹರೆಯ ಯುವತಿಯ ಶವ ಇದಾಗಿದ್ದು, ಗುರುತು ಪತ್ತೆಯಾಗಿಲ್ಲ. ಹೀಗಾಗಿ ಹತ್ತಿರದ ಠಾಣೆಗಳಲ್ಲಿ ಯುವತಿ ಮಿಸ್ಸಿಂಗ್ ಕೇಸ್ ಕುರಿತ ದಾಖಲೆಯನ್ನು ಪೊಲೀಸರು ಕೇಳಿದ್ದಾರೆ.  

ಶ್ರದ್ಧಾ ಕೇಸ್ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಯುವತಿಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶ್ರದ್ಧಾ ಕೊಲೆ ಪ್ರಕರಣದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನನ್ನ ಅಬ್ದುಲ್ಲ ಹಾಗಲ್ಲ ಅನ್ನೋ ಹ್ಯಾಶ್ ಕೀ ಟ್ರೆಂಡ್ ಆಗಿತ್ತು. ಇದೇ ಟ್ರೆಂಡಿಂಗ್‌ನಲ್ಲಿ ಅಬ್ದುಲ್ಲಾ ನಂಬಿ ಹೋಗುವ ಹಿಂದೂ ಹುಡುಗಿಯರು ಸೂಟ್‌ಕೇಸ್‌ನಲ್ಲಿ ಪತ್ತೆಯಾಗುತ್ತಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು. ಇದೀಗ  ಮಥುರಾದಲ್ಲಿ ಯುವತಿಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

Love jihad: ಲವ್‌ ಜಿಹಾದ್‌ಗೆ ಸಿಲುಕಿದ ಹಿಂದೂ ಮಹಿಳೆಯ ನರಳಾಟ

ಶ್ರದ್ಧಾ ಹತ್ಯೆ ಪ್ರಕರಣದ ಸ್ಪೋಟಕ ಮಾಹಿತಿ
ದೆಹಲಿಯ 35 ಪೀಸ್‌ ಮರ್ಡರ್‌ ಕೇಸ್‌ ಎಂದೇ ಕುಖ್ಯಾತಿ ಪಡೆದಿರುವ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣದಲ್ಲಿ ಇನ್ನಷ್ಟುಆಘಾತಕಾರಿ ವಿಷಯಗಳು ಬೆಳಕಿಗೆ ಬರುತ್ತಿವೆ. ಶ್ರದ್ಧಾ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಬಳಿಕ ಆಕೆಯ ಗುರುತು ಪತ್ತೆಯಾಗದಂತೆ ಮಾಡಲು ಮುಖವನ್ನು ಸುಟ್ಟಿದ್ದಾಗಿ ಹಂತಕ ಅಫ್ತಾಬ್‌ ಒಪ್ಪಿಕೊಂಡಿದ್ದಾನೆ ಎಂದು ದೆಹಲಿ ಪೊಲೀಸರ ಮೂಲಗಳು ತಿಳಿಸಿವೆ. ಜೂನ್‌ನಲ್ಲಿ ಪೂರ್ವ ದೆಹಲಿ ಪೊಲೀಸರಿಗೆ ದೆಹಲಿಯ ತ್ರಿಲೋಕಪುರಿ ಪ್ರದೇಶದಲ್ಲಿ ಗುರುತು ಹಚ್ಚಲಾಗದ ಸ್ಥಿತಿಯಲ್ಲಿ ರುಂಡ ಹಾಗೂ ಕೈ ಸಿಕ್ಕಿತ್ತು. ಆಗ ಇವುಗಳ ಆಧಾರದ ಮೇಲೆ ವ್ಯಕ್ತಿಯ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಪತ್ತೆಯಾದ ದೇಹದ ಭಾಗಗಳ ಡಿಎನ್‌ಎ ಮಾದರಿಯನ್ನು ಶ್ರದ್ಧಾಳ ಡಿಎನ್‌ಎ ಜತೆ ಹೊಂದಾಣಿಕೆಯಾಗುತ್ತದೆಯೇ ಎಂಬುದನ್ನು ನೋಡಲು ಪರೀಕ್ಷೆಗೆ ಕಳುಹಿಸಲಾಗಿದೆ. ಇದರೊಂದಿಗೆ ಮೆಹ್ರೌಲಿಯಲ್ಲಿ ಸಿಕ್ಕ ಮೂಳೆಗಳನ್ನು ಕೂಡಾ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಶೀಘ್ರದಲ್ಲೇ ವರದಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ರಕ್ತದ ಕಲೆ ಅಳಿಸುವ ಬಗ್ಗೆ ಗೂಗಲ್‌ ಮಾಡಿದ ಹಂತಕ
ಶ್ರದ್ಧಾ ಕೊಂದ ಬಳಿಕ ಆಕೆಯ ರಕ್ತದ ಕಲೆಯನ್ನು ಅಳಿಸುವ ವಿಧಾನದ ಬಗ್ಗೆ, ದೇಹವನ್ನು ಕತ್ತರಿಸುವ ಮೊದಲು, ಮಾನವನ ದೇಹ ರಚನೆ ಬಗ್ಗೆ, ಹತ್ಯೆ ಬಳಿಕ ಸಾಕ್ಷ್ಯ ಹೇಗೆ ನಾಶಪಡಿಸುವುದು ಹೇಗೆ ಎಂದು ಅಫ್ತಾಬ್‌ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದ.


 

click me!