ಫೇಸ್‌ಬುಕ್‌ ಫ್ರೆಂಡ್‌ನಿಂದ ಮೆಟ್ರೋ ಸ್ಟೇಷನ್ ಬಳಿ ಯುವತಿ ಮೇಲೆ ಗ್ಲಾಸ್‌ ಬಾಟಲ್‌ನಿಂದ ಹಲ್ಲೆ

By Anusha Kb  |  First Published Nov 18, 2022, 5:45 PM IST

ಚೆನ್ನೈನಲ್ಲಿ ಯುವಕನೋರ್ವ ಯುವತಿ ಮೇಲೆ ಗ್ಲಾಸ್‌  ಬಾಟಲ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ ಆಕೆಯ ಕಿವಿ ಹಾಗೂ ಕೆನ್ನೆಗೆ ಗಾಯಗಳಾಗಿವೆ. 


ಚೆನ್ನೈ: ಕೆಲದಿನಗಳಿಂದ ದೇಶಾದ್ಯಂತ ದೆಹಲಿಯಲ್ಲಿ ನಡೆದ, ಪ್ರಿಯಕರ ಅಫ್ತಾಬ್‌ನಿಂದ ಭೀಕರವಾಗಿ ಕೊಲೆಯಾದ ಶ್ರದ್ಧಾ ಕೊಲೆ ಪ್ರಕರಣವೇ ಗುಂಯ್‌ಗುಡುತ್ತಿದೆ. ಈ ಘಟನೆಯ ನಂತರ ದೇಶದ ವಿವಿಧ ಭಾಗಗಳಲ್ಲಿ ನಡೆದ ಒಂದಕ್ಕಿಂತ ಒಂದು ಭೀಕರವೆನಿಸಿದ ಹಲವು ಕೊಲೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇವೆಲ್ಲಾ ಘಟನೆಗಳು ಜನ ಮಾನಸದಿಂದ ಮರೆಯಾಗುವ ಮೊದಲೇ ಚೆನ್ನೈನಲ್ಲಿ ಯುವಕನೋರ್ವ ಯುವತಿ ಮೇಲೆ ಗ್ಲಾಸ್‌  ಬಾಟಲ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ ಆಕೆಯ ಕಿವಿ ಹಾಗೂ ಕೆನ್ನೆಗೆ ಗಾಯಗಳಾಗಿವೆ. 

ಹಲ್ಲೆ ಮಾಡಿದ ಯುವಕನನ್ನು 24 ವರ್ಷದ ನವೀನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ತಮಿಳುನಾಡಿನ ಚೆನ್ನೈನ ಕಿಲಪಾಕ್ ಮೆಟ್ರೋ ನಿಲ್ದಾಣದ (Kilpauk Metro Station) ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಅಂದಹಾಗೆ ನವೆಂಬರ್ 14 ರಂದು ಈ ಘಟನೆ ನಡೆದಿದ್ದು, 15 ರಂದು ಆರೋಪಿಯನ್ನು ಬಂಧಿಸಲಾಗಿದೆ. ಕಳೆದ ಮೂರು ತಿಂಗಳಿನಿಂದ ಈ ನವೀನ್ ಯುವತಿ ಹಿಂದೆ ಬಿದ್ದಿದ್ದು, ಆಕೆಯನ್ನು ಪ್ರೀತಿಸುವುದಾಗಿ ದುಂಬಾಲು ಬಿದ್ದಿದ್ದ. ಆದರೆ ಯುವತಿ ನವೀನ್‌ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಳು ಆದರೂ ಆತ ಪ್ರೀತಿಸುವಂತೆ ಆಕೆಯ ಹಿಂದೆ ಬಿದ್ದು ಕಿರುಕುಳ ನೀಡಲು ಶುರು ಮಾಡಿದ್ದ ಎಂದು ತಿಳಿದು ಬಂದಿದೆ. 

Tap to resize

Latest Videos

ಟ್ರೋಲಿ ಬ್ಯಾಗ್‌ನಲ್ಲಿ ಯುವತಿ ಶವ ಪತ್ತೆ, ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಶಂಕೆ!

ಘಟನೆಯ ಬಳಿಕ ನವೀನ್ ಸ್ಥಳದಿಂದ ಪರಾರಿಯಾಗಿದ್ದ ಆದರೆ ಮಾರನೇ ದಿನ ಆರೋಪಿಯನ್ನು ಬಂಧಿಸುವಲ್ಲಿ ಕಿಲ್ಪಾಕು ಪೊಲೀಸರು ಯಶಸ್ವಿಯಾಗಿದ್ದಾರೆ. ಹಲ್ಲೆಗೊಳಗಾದ ಯುವತಿ ಕೇರಳ ಮೂಲದವಳಾಗಿದ್ದು, ಮೂರು ತಿಂಗಳ ಹೋಟೇಲ್ ಸ್ಟಾಪ್ ತರಬೇತಿಗಾಗಿ ಕಿಲ್ಪಾಕುವಿನಲ್ಲಿರುವ ಅಬು ಪ್ಯಾಲೇಸ್‌ ಹೊಟೇಲ್‌ಗೆ (Abu Palace Hotel) ಆಗಮಿಸಿದ್ದಳು. ಆರು ತಿಂಗಳ ಹಿಂದೆ ನವೀನ್ ಈಕೆಗೆ ಫೇಸ್‌ಬುಕ್‌ನಲ್ಲಿ (Facebook) ಪರಿಚಯವಾಗಿದ್ದ. ಅಲ್ಲದೇ ನವೀನ್‌ಗೆ ಯುವತಿಗೆ ತಾನು ನೌಕಾಸೇನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಬೊಗಳೆ ಬಿಟ್ಟಿದ್ದ. ಅಲ್ಲದೇ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದ.

ಹಿಂದೂ ಯುವತಿಯ ಪೀಸ್ ಪೀಸ್ ಮಾಡಿದ ಬಾಂಗ್ಲಾದ ಅಬು ಬಕ್ರ್, ಮತ್ತೊಬ್ಬಳ ಜೊತೆ ಪರಾರಿ!


ನವೆಂಬರ್ 14 ರಂದು ರಾತ್ರಿ 8.30ರ ಸುಮಾರಿಗೆ ಯುವತಿ ತನ್ನ ಕೆಲಸ ಮುಗಿಸಿ ತಾನು ವಾಸವಿದ್ದ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ  ನವೀನ್ ಆಕೆಯನ್ನು ಹಿಂಬಾಲಿಸಿದ್ದಾನೆ. ನಂತರ ಇಬ್ಬರ ಮಧ್ಯೆ ವಾಗ್ವಾದವಾಗಿದ್ದು, ಈ ವೇಳೆ ನವೀನ್ ತನ್ನ ಕೈಯಲ್ಲಿದ್ದ ಗ್ಲಾಸ್ ಬಾಟಲ್‌ನಿಂದ (glass bottle) ಆಕೆಯ ಮೇಲೆ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅಲ್ಲೇ ಇದ್ದ ಆಟೋ ಚಾಲಕನೋರ್ವ ಯುವತಿಗೆ ಸಹಾಯ ಮಾಡಿದ್ದು, ಆಕೆಯನ್ನು ಪೂನಮಲ್ಲೆ ಹೆದ್ದಾರಿಯಲ್ಲಿರುವ (Poonamallee Highway) ಖಾಸಗಿ ಆಸ್ಪತ್ರಗೆ (private hospital) ದಾಖಲಿಸಿದ್ದಾನೆ. ಹಲ್ಲೆಯಿಂದ ಮಹಿಳೆಗೆ ಗಂಭೀರ ಗಾಯವಾಗಿದ್ದು, ಮುಖಕ್ಕೆ 20 ಸ್ಟಿಚ್‌ಗಳನ್ನು ಹಾಕಲಾಗಿದೆ. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ಯುವತಿ ಗುಣಮುಖಳಾಗಿದ್ದಾಳೆ. 

Love jihad: ಲವ್‌ ಜಿಹಾದ್‌ಗೆ ಸಿಲುಕಿದ ಹಿಂದೂ ಮಹಿಳೆಯ ನರಳಾಟ

ಘಟನೆಯ ಬಳಿಕ ಮಹಿಳೆ ಕೇರಳಕ್ಕೆ ಹೊರಟು ಹೋಗಿದ್ದು, ನವೀನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ತಮಿಳುನಾಡು (Tamil Nadu) ಮಹಿಳಾ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ. 

ಇದು ಮತಾಂಧ ರಕ್ಕಸರ ಅಸಲಿ ರೂಪ: ಲವ್ ಜಿಹಾದ್‌ಗೆ ಪ್ರಾಣ ಕೊಟ್ಟ ಹಿಂದೂ ಹೆಣ್ಣು ಮಕ್ಕಳೆಷ್ಟು?

click me!