Gokak Murder Case: 9 ತಿಂಗಳ ಹಿಂದಿನ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್‌..!

By Girish Goudar  |  First Published Apr 29, 2022, 7:54 AM IST

*  ಸಿಎಂ, ಗೃಹ ಸಚಿವರಿಗೂ ಪತ್ರ ಬರೆದು ಸೂಕ್ತ ತನಿಖೆಗೆ ಮನವಿ 
*  ಫೋಟೋ ರಿಲೀಸ್ ಮಾಡಿದ ಕೊಲೆಯಾದ ಯುವಕನ ಕುಟುಂಬಸ್ಥರು
*  ಬೆಳಗಾವಿ ಎಎಸ್‌ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ಮುಂದುವರಿದ ತನಿಖೆ


ಬೆಳಗಾವಿ(ಏ.28): ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ಒಂಬತ್ತು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ. ಕೊಲೆ ಕೇಸ್‌ನಲ್ಲಿ ಅಮಾಯಕರನ್ನ ಫಿಟ್ ಮಾಡಿ 15 ಲಕ್ಷ ವಸೂಲಿ ಮಾಡಿದ್ದಾರೆಂದು ಪೊಲೀಸರ ವಿರುದ್ಧ ಗಂಭೀರ ಆರೋಪವನ್ನ ಅರೆಸ್ಟ್ ಆದವರ ಕುಟುಂಬಸ್ಥರು ಮಾಡಿದ್ರೇ, ಇತ್ತ ಆರೋಪಿಗಳ ಕುಟುಂಬಸ್ಥರ ವಿರುದ್ಧ ಕೊಲೆಯಾದ ಯುವಕನ ಕುಟುಂಬಸ್ಥರು ಸುದ್ದಿಗೋಷ್ಠಿ ನಡೆಸಿ ಅದೊಂದು ಫೋಟೋ‌ ಬಿಡುಗಡೆ ಮಾಡಿದ್ದಾರೆ. 

ಬೆಳಗಾವಿ(Belagavi) ಜಿಲ್ಲೆ ಗೋಕಾಕ್‌ನಲ್ಲಿ(Gokak) 9 ತಿಂಗಳ ಹಿಂದೆ ನಡೆದ ಕೊಲೆ(Murder) ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಯುವಕನ ಕೊಲೆ ಪ್ರಕರಣದಲ್ಲಿ ಎರಡು ಕುಟುಂಬಗಳು ಗಿರಕಿ ಹೊಡೆಯುತ್ತಿವೆ.‌ 2021ರ ಜುಲೈ 17 ರಂದು ಗೋಕಾಕ ನಗರದ ಮಹಾಂತೇಶ್ ನಗರದಲ್ಲಿ ಮಂಜುನಾಥ ಮುರಕಿಭಾವಿ ಎಂಬ ಯುವಕನ ಹತ್ಯೆಯಾಗಿತ್ತು‌. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಗೋಕಾಕ್‌ನ ಸಿದ್ದಪ್ಪ ಬಬಲಿ ಹಾಗೂ ಮಕ್ಕಳಾದ ಕೃಷ್ಣಾ, ಅರ್ಜುನ್ ಬಂಧಿಸಲಾಗಿತ್ತು.

Tap to resize

Latest Videos

ಬಾಡೂಟಕ್ಕೆ ಹೋದವನ ಬರ್ಬರ ಹತ್ಯೆ, ಜಿಮ್ ಬಾಡಿಗೆ ಚಾಕುವಿನಿಂದ ಚುಚ್ಚಿ ಕೊಲೆ

ಕೊಲೆಯಾದ ಮಂಜುನಾಥ ಸಿದ್ದಪ್ಪನ ಮೊಮ್ಮಗಳನ್ನ‌ ಪ್ರೀತಿಸುತ್ತಿದ್ದನಂತೆ(Love). ಆಕೆಯ ಮದುವೆಯಾದ ಬಳಿಕವೂ ಸಂಪರ್ಕದಲ್ಲಿದ್ದರಿಂದ ಸಿದ್ದಪ್ಪ ಹಾಗೂ ಆತನ ಮಕ್ಕಳಾದ ಕೃಷ್ಣ, ಅರ್ಜುನ ಸೇರಿ ಕೊಲೆ ಮಾಡಿದ್ದಾರೆಂಬ ಆರೋಪದಡಿ ಮೂವರು ಆರೋಪಿಗಳ ಬಂದಿಸಲಾಗಿತ್ತು(Arrest). ಆದ್ರೆ ತಾವು ಕೊಲೆ ಮಾಡಿಲ್ಲ ಪೊಲೀಸರು(Police) ಟಾರ್ಚರ್ ನೀಡಿ ಒಪ್ಪಿಸಿದ್ದಾರೆಂದು ಪೊಲೀಸರ ಮೇಲೆಯೇ ಬಬಲಿ ಕುಟುಂಬಸ್ಥರು ಆರೋಪಗಳ ಸುರಿಮಳೆಗೈದಿದ್ದರು‌. ಜಾಮೀನಿನ(Bail) ಮೇಲೆ ಹೊರ ಬಂದ ಸಿದ್ದಪ್ಪನಿಂದ ಸಿಪಿಐ & ಸಿಬ್ಬಂದಿ ವಿರುದ್ಧ ಗಂಭೀರ ಆರೋಪ.‌ ಕೊಲೆ ಕೇಸ್‌ನಲ್ಲಿ ತಮ್ಮದೇನೂ ತಪ್ಪಿಲ್ಲದಿದ್ದರೂ ಬಂಧಿಸಿದ್ದಾರೆ. 

ಅಲ್ಲದೇ ಹಂತ ಹಂತವಾಗಿ ತಮ್ಮ ಬಳಿ 15 ಲಕ್ಷ ಹಣ ವಸೂಲಿ ಮಾಡಿದ್ದಾರೆಂದು ಆರೋಪಿಸಿ ಈ ಸಂಬಂಧ ಲೋಕಾಯುಕ್ತ, ರಾಜ್ಯ ಮಹಿಳಾ ಆಯೋಗಕ್ಕೆ ಆರೋಪಿ ಸಿದ್ದಪ್ಪ ಪತ್ನಿ ಕಲ್ಲವ್ವ & ಕುಟುಂಬಸ್ಥರು ದೂರು ನೀಡಿದ್ರು. ಇತ್ತ ಕೊಲೆಗೆ ಸಿದ್ದಪ್ಪನ ಮೊಮ್ಮಗಳ‌ ಜೊತೆ ಕೊಲೆಯಾದ ಮಂಜುನಾಥ ಸಂಬಂಧ ಹೊಂದಿದ್ದೆ ಕಾರಣ ಎಂಬ ಆರೋಪವನ್ನು ಸಿದ್ದಪ್ಪನ ಮೊಮ್ಮಗಳು ಅಲ್ಲಗಳೆದಿದ್ದಳು‌. ಮಾಧ್ಯಮಗಳ ಎದುರು ಮಾತನಾಡಿದ್ದ ಸಿದ್ದಪ್ಪನ ಮೊಮ್ಮಗಳು 'ನನಗೂ ಹಾಗೂ ಕೊಲೆಯಾದ ಮಂಜುನಾಥನಿಗೂ ಸಂಬಂಧವೇ ಇಲ್ಲ‌.ನನ್ನ ಮದುವೆಯಾಗಿ ಮೂರು ವರ್ಷ ಆಗಿದೆ. ಒಂದು ವರ್ಷದ ಮಗು ಇದೆ. ಕೊಲೆಯಾದ ಯುವಕನಿಗೂ ನನಗೂ ಪರಿಚಯವೇ ಇಲ್ಲ. ಇಲ್ಲದ ಸಲ್ಲದ ಹೇಳಿ ನನ್ನ‌ ಬಾಳು ಹಾಳು ಮಾಡಿದ್ದಾರೆ, ನನ್ನ ಮಾನ ಹರಾಜು ಆಗಿದೆ.‌ ಗಂಡನ ಮನೆಯಲ್ಲಿ ನನ್ನ‌ ಕರೆದುಕೊಳ್ಳುತ್ತಿಲ್ಲ' ಅಂತಾ ಯುವತಿ ಕಣ್ಣೀರಿಟ್ಟಿದ್ದಳು‌.

ಕೊಲೆಯಾದ ಮಂಜು ಜೊತೆ ಯುವತಿ ಇರೋ ಫೋಟೋ ರಿಲೀಸ್

ಇತ್ತ ಕೊಲೆ ಪ್ರಕರಣದಲ್ಲಿ ಪೊಲೀಸರು ಅಮಾಯಕರ ಬಂಧಿಸಿ 15 ಲಕ್ಷ ವಸೂಲಿ ಆರೋಪ ಬೆನ್ನಲ್ಲೇ ಕೊಲೆಯಾದ ಮಂಜುನಾಥ ಮುರಕಿಭಾವಿ ಕುಟುಂಬಸ್ಥರು ಗೋಕಾಕ್ ಹಾಗೂ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾಗಿ ತಿಳಿಸಿದ್ದಾರೆ‌. ಇತ್ತ ಸಿದ್ದಪ್ಪನ ಮೊಮ್ಮಗಳ ಹೇಳಿಕೆ ವಿರುದ್ದ ಫೋಟೋಗಳನ್ನು ಸಹ ಮಂಜುನಾಥ ಕುಟುಂಬಸ್ಥರು ರಿಲೀಸ್ ಮಾಡಿದ್ದಾರೆ‌. ಮಂಜು ಹಾಗೂ ಸಿದ್ದಪ್ಪನ ಮೊಮ್ಮಗಳು ಏಕಾಂತದ ಕ್ಷಣಗಳ ಫೋಟೊ ರಿಲೀಸ್ ಮಾಡಿ ಕಣ್ಣೀರಿಟ್ಟಿದ್ದಾರೆ‌. ಈ ಕುರಿತು ಮಾತನಾಡಿರುವ ಕೊಲೆಯಾದ ಮಂಜುನಾಥನ ಸಹೋದರಿ ಸಿದ್ದವ್ವ ಕುರಿ, 'ಪೊಲೀಸರು ಸರಿಯಾಗಿ ತನಿಖೆ ನಡೆಸಿಯೇ ಆರೋಪಿಗಳ ಬಂಧಿಸಿದ್ದಾರೆ. ಬಬಲಿ ಕುಟುಂಬಸ್ಥರಿಂದ ನಮಗೆ ಜೀವ ಬೆದರಿಕೆ‌ ಇದೆ. ಮೃತ ಮಂಜು ಮುರಖಿಬಾವಿ ಹಾಗೂ ಬಬಲಿ ಕುಟುಂಬದ ಯುವತಿ ಪರಸ್ಪರ ‌ಪ್ರೀತಿ‌ ಮಾಡುತ್ತಿದ್ದರು. ಆಕೆಯ ಮದುವೆಯಾಗಿ ಒಂದು ಮಗುವಾದ ಬಳಿಕ ಸೇಡು ಇಟ್ಟುಕೊಂಡು ಕೊಲೆ ಮಾಡಿದ್ದಾರೆ‌. ಕೊಲೆ ಪ್ರಕರಣ ತಿರುಚಲು ಬಬಲಿ ಕುಟುಂಬ ಯತ್ನ ನಡೆಸಿದೆ. ಸಿದ್ದಪ್ಪ ಬಬಲಿ ಜಾಮೀನಿನ ಮೇಲೆ ಹೊರ ಬಂದು ಜೀವ ಬೆದರಿಕೆ ಹಾಕಿದ್ದಾನೆ. ಆತನ ಜಾಮೀನು ರದ್ದು ಮಾಡಬೇಕು' ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಎಪಿಎಂಸಿ ಬಡಾವಣೆ ನಿವಾಸಿಯಾಗಿದ್ದ 22 ವರ್ಷದ ಮಂಜುನಾಥ ಗ್ಯಾರೇಜ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಮಂಜುನಾಥನ ಅಣ್ಣ ಮತ್ತು ತಂದೆ ಸ್ವಂತ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಆದ್ರೇ ಈ ಮಂಜುನಾಥ ತಂದೆ ಅಥವಾ ಅಣ್ಣನೊಂದಿಗೆ ಕೆಲಸ ಮಾಡದೇ ತಾನೂ ಕೂಡ ಸ್ವಂತ ಉದ್ಯೋಗ ಮಾಡಬೇಕು, ಸ್ವಂತ ಗ್ಯಾರೇಜ್ ಓಪನ್ ಮಾಡಬೇಕು ಅಂತಾ ಕನಸು ಕಂಡಿದ್ದ. ಮನೆಯ ಹತ್ತಿರವೇ ಇರುವ ಗ್ಯಾರೇಜ್ ಒಂದರಲ್ಲಿ ಕೆಲಸಕ್ಕೆ ಸೇರಿ ಸ್ವಾವಲಂಬನೆ ಜೀವನ ಸಾಗಿಸುತ್ತಿದ್ದ. ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇದ್ದ ಈತ ಜುಲೈ 17 ರಂದು ಆರು ಗಂಟೆ ಸುಮಾರಿಗೆ ಕೆಲಸದಿಂದ ಮನೆಗೆ ಬಂದಿದ್ದ ಮಂಜುನಾಥ್ ಗಡಿಬಿಡಿಯಲ್ಲಿ ತಾನೂ ಸಂಪಾದಿಸಿದ ಹಣವನ್ನ ತೆಗೆದುಕೊಂಡು ಮನೆಯಿಂದ ಹೊರ ಹೋಗಿದ್ದ. ಹೀಗೆ ಮನೆಯಿಂದ ಹೊರಗೆ ಹೋಗಿದ್ದ ಮಂಜುನಾಥ್ ರಾತ್ರಿ 10 ಗಂಟೆಯಾದ್ರೂ ಮನೆಗೆ ವಾಪಸ್ ಆಗದ ಹಿನ್ನಲೆ ಇಡೀ ರಾತ್ರಿ ಹುಡುಕಾಟ ನಡೆಸಿದ್ದರು.

ಇದಾದ ಬಳಿಕ ಮಾರನೇ ದಿನ ಮಂಜುನಾಥನ ಮೃತದೇಹ ಮಹಾಂತೇಶ್ ನಗರದ ನಿರ್ಜನ ಪ್ರದೇಶದಲ್ಲಿ ಸಿಕ್ಕಿತ್ತು . ಪ್ರಕರಣವನ್ನ ದಾಖಲಿಸಿಕೊಂಡ ಗೋಕಾಕ್ ಪೊಲೀಸರು ಮೂರು ಜನರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಕೊಲೆಯ ಹಿಂದೆ ಅದೊಂದು ಯುವತಿಯ ಹೆಸರು ಕೇಳಿ ಬಂದಿತ್ತು. ಬೇಡಾ ಅಂದ್ರೂ ಆ ಯುವತಿ ಹಿಂದೆ ಬಿದ್ದಿದ್ದಕ್ಕೆ ಯುವತಿಯ ಸಂಬಂಧಿಕರು ಕೊಲೆ ಮಾಡಿದ್ದಾರೆ ಅಂತಾ ಮಂಜುನಾಥನ ಕುಟುಂಬಸ್ಥರು ಆರೋಪ ಮಾಡಿದ್ದರು. ಆಗ ಪೊಲೀಸರು ಕೂಡ ಆಕೆ ಯಾರು ಮತ್ತು ಅವರ ಕುಟುಂಬಸ್ಥರು ಯಾರು ಅಂತಾ ಮಾಹಿತಿ ಪಡೆದು ಮೂರು ಜನರಾದ ಸಿದ್ದಪ್ಪ ಬಬಲಿ, ಆತನ ಮಕ್ಕಳಾದ ಕೃಷ್ಣಾ ಬಬಲಿ, ಅರ್ಜುನ್ ಬಬಲಿಯನ್ನ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಮೂರು ಜನರು ಸೇರಿಕೊಂಡು ಮಂಜುನಾಥನ ಕೊಲೆ ಮಾಡಿದ್ದಾರೆ ಗೊತ್ತಾಗಿ ಪೂರಕ ಸಾಕ್ಷ್ಯ ಸಿಕ್ಕ ಹಿನ್ನೆಲೆ ಎಂಬುದು ಪೊಲೀಸ್ ಮೂಲಗಳ ಮಾಹಿತಿ. ಹೀಗೆ ಮೂರು ಜನರು ಅರೆಸ್ಟ್ ಆದ ಬಳಿಕ ಅದಕ್ಕೆ ಬೇಕಾದ ಪೂರಕ ಸಾಕ್ಷಿಗಳನ್ನ ಕಲೆಹಾಕುವ ಕೆಲಸ ಕೂಡ ಪೊಲೀಸರು ಮಾಡಿದ್ದು ಈಗಾಗಲೇ ಕೇಸ್ ನ ಜಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ‌. ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ಕೂಡ ನಡೆಯುತ್ತಿದೆ. ಇನ್ನೂ ಆರೋಪಿಗಳು ಅರೆಸ್ಟ್ ಆಗಿದ್ದು ಅವರಿಗೆ ತಕ್ಕ ಶಿಕ್ಷೆ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿ ಕಟುಂಬಸ್ಥರು ಕೂಡ ನಿಟ್ಟುಸಿರು ಬಿಟ್ಟಿದ್ದರು. ಈ ಎಲ್ಲ ಬೆಳವಣಿಗೆ ನಡೆವೆ ಒಂಬತ್ತು ತಿಂಗಳ ನಂತರ ಕೇಸ್ ಮತ್ತೆ ಮರುಜೀವ ಪಡೆದುಕೊಂಡಿದೆ. 

ಮಧ್ಯರಾತ್ರಿ ಪತ್ನಿಯಿಂದ ಪತಿ ಮೇಲೆ ಅಟ್ಯಾಕ್‌ : ಬ್ಲೇಡ್ ತಂದು ಕುತ್ತಿಗೆ ಕೊಯ್ದ ವೈಫ್‌

ಅರೆಸ್ಟ್ ಆಗಿದ್ದ ಸಿದ್ದಪ್ಪ ಬಬಲಿ ಕಳೆದ ಎರಡು ತಿಂಗಳ ಹಿಂದಷ್ಟೇ ಆರೋಗ್ಯ ಸಮಸ್ಯೆ ಇರೋ ಕಾರಣಕ್ಕೆ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಹೀಗೆ ಜಾಮೀನಿನ ಮೇಲೆ ಹೊರ ಬಂದಿರುವ ಸಿದ್ದಪ್ಪ, ಘಟನೆ ನಡೆದು 9 ತಿಂಗಳ ಬಳಿಕ ಮಾಧ್ಯಮಗಳ ಮುಂದೆ ಬಂದು ತಾವು ಕೊಲೆ ಮಾಡಿಲ್ಲ ಪೊಲೀಸರು ಟಾರ್ಚರ್ ನೀಡಿ ಒಪ್ಪಿಸಿದ್ದಾರೆಂದು ಆರೋಪಿಸಿದ್ದಾರೆ. ಪೊಲೀಸರ ಮೇಲೆಯೇ ಬಬಲಿ ಕುಟುಂಬಸ್ಥರು ಆರೋಪಗಳ ಸುರಿಮಳೆಗೈದಿದ್ದಾರೆ. ಜಾಮೀನಿನ ಮೇಲೆ ಹೊರ ಬಂದ ಸಿದ್ದಪ್ಪ ಗೋಕಾಕ್ ಸಿಪಿಐ ಗೋಪಾಲ್ ರಾಥೋಡ್, ಪಿಎಸ್ಐ ನಾಗರಾಜ ಖಿಲಾರಿ & ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಕೊಲೆ ಕೇಸ್‌ನಲ್ಲಿ ತಮ್ಮದೇನೂ ತಪ್ಪಿಲ್ಲದಿದ್ದರೂ ಬಂಧಿಸಿದ್ದಾರೆ. ಅಲ್ಲದೇ ಹಂತ ಹಂತವಾಗಿ ತಮ್ಮ ಬಳಿ 15 ಲಕ್ಷ ಹಣ ವಸೂಲಿ ಮಾಡಿದ್ದಾರೆಂದು ಆರೋಪಿಸಿ ಈ ಸಂಬಂಧ ಲೋಕಾಯುಕ್ತ, ರಾಜ್ಯ ಮಹಿಳಾ ಆಯೋಗಕ್ಕೆ ಆರೋಪಿ ಸಿದ್ದಪ್ಪ ಪತ್ನಿ ಕಲ್ಲವ್ವ & ಕುಟುಂಬಸ್ಥರು ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಕೊಲೆ‌ ನಡೆದು 9 ತಿಂಗಳ‌ ಬಳಿಕ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದ ಬಬಲಿ ಕುಟುಂಬಸ್ಥರು ಸಿಎಂ, ಗೃಹ ಸಚಿವರಿಗೂ ಪತ್ರ ಬರೆದು ಸೂಕ್ತ ತನಿಖೆಗೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಕೊಲೆಯಾದ ಯುವಕನ ಕುಟುಂಬಸ್ಥರು ಸುದ್ದಿಗೋಷ್ಠಿ ನಡೆಸಿ ಫೋಟೋ ರಿಲೀಸ್ ಮಾಡಿದ್ದಾರೆ. ಇತ್ತ ಕುಟುಂಬಸ್ಥರ ಆರೋಪ ಬಗ್ಗೆ ತನಿಖೆಗೆ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಆದೇಶಿಸಿದ್ದಾರೆ. ಬೆಳಗಾವಿ ಎಎಸ್‌ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ತನಿಖೆ ಬಳಿಕವಷ್ಟೇ ಎರಡು ಕುಟುಂಬಗಳು ಮಾಡುತ್ತಿರುವ ಆರೋಪದಲ್ಲಿ ಯಾವುದು ನಿಜ ಹಾಗೂ ಯಾವುದು ಸುಳ್ಳು ಎಂಬುವುದು ಗೊತ್ತಾಗಲಿದೆ.
 

click me!