*ಮಲೆನಾಡಿನಲ್ಲಿ ಅಡಿಕೆಗೆ ಬಂಗಾರದ ಬೆಲೆ
*ಅಡಿಕೆ ಕಳ್ಳತನ ಮಾಡುವುದು ಈಗ ಹೊಸ ಟ್ರೆಂಡ್
*ಮನೆಯಂಗಳದಲ್ಲಿದ್ದ ಅಡಿಕೆ ಕದ್ದವನ ಬಂಧನ
ಶಿವಮೊಗ್ಗ (ಜ. 15): ಶಿವಮೊಗ್ಗ ಜಿಲ್ಲೆ (Shivamogga) ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗ. ಈ ಮಲೆನಾಡಿನಲ್ಲಿ ಅಡಿಕೆಗೆ (Areca Nut) ಬಂಗಾರದ ಬೆಲೆ ಹೀಗಾಗಿ ಅಡಿಕೆ ಕಳ್ಳತನ ಮಾಡುವುದು ಈಗ ಇಲ್ಲಿನ ಹೊಸ ಟ್ರೆಂಡ್. ಇತ್ತಿಚೆಗೆ ಜಿಲ್ಲೆಯಲ್ಲಿ ಅಡಿಕೆ ಕಳ್ಳತನ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಈಗ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ಮನೆಯಂಗಳದಲ್ಲಿದ್ದ ಅಡಿಕೆ ಕಳ್ಳತನ ಮಾಡಿದ ಆರೋಪದಡಿ ಅಡಿಕೆ ವ್ಯಾಪಾರಿ ರಹೀಮ್ ಸಾಬ್‌ನನ್ನು ಪೋಲಿಸರು (Police) ಬಂಧಿಸಿದ್ದಾರೆ
ಹೊಸನಗರ (Hosanagara) ತಾಲ್ಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಆದರ್ಶ ಎಂಬುವವರ ಮನೆಯಲ್ಲಿ ಸಂಗ್ರಹಿಸಿದ್ದ ₹1.20 ಲಕ್ಷ ಮೌಲ್ಯದ ಅಡಿಕೆ ಕಳವು ಮಾಡಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆರೋಪಿಯನ್ನು ಹೊಸನಗರ ಪೋಲಿಸರು ಬಂಧಿಸಿದ್ದಾರೆ. ಬಟ್ಟೆಮಲ್ಲಪ್ಪ ಗ್ರಾಮದ ನಿವಾಸಿ, ಸಾಗರ ಪಟ್ಟಣದ ಅಡಿಕೆ ವ್ಯಾಪಾರಿ ರಹೀಮ್ ಸಾಬ್ ಬಂಧಿತ ಆರೋಪಿ. ಆದರ್ಶ ಅವರ ಮನೆಯಿಂದ ಸಿಪ್ಪೆಗೋಟು ಮತ್ತು ಚಾಲಿ ಅಡಿಕೆಯನ್ನು ಕಳವು ಮಾಡಿದ್ದ ಆರೋಪದಡಿ ರಹೀಮ್ ಸಾಬ್‌ನನ್ನು ಬಂಧಿಸಲಾಗಿದೆ. ಸಿಪಿಐ ಮಧುಸೂಧನ್ ಮತ್ತು ಪಿಎಸ್‌ಐ ರಾಜೇಂದ್ರ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಅಡಿಕೆ ಕಳ್ಳ ಈಗ ಪೋಲಿಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ: Theft Cases: ಜೇಬಿಗೆ ಕತ್ತರಿ ಹಾಕಿ ಚಿನ್ನಾಭರಣ ಕದ್ದಿದ್ದ 3 ಖದೀಮರ ಬಂಧನ
2 ಕೋಟಿ ಬೆಲೆಯ 171 ದುಬಾರಿ ವಾಚ್ ಕದ್ದಿದ್ದವ ಅರೆಸ್ಟ್
ಇಂದಿರಾನಗರದ ನೂರು ಅಡಿ ರಸ್ತೆಯ ವಾಚ್ ಶೋರೂಮ್‌ವೊಂದಕ್ಕೆ ನುಗ್ಗಿ ಬೆಲೆಬಾಳು ವಾಚ್‌ಗಳ(Watch) ಕಳವು ಮಾಡಿದ್ದ ಬಿಹಾರ(Bihar) ಮೂಲದ ಆರೋಪಿಯನ್ನು ಇಂದಿರಾನಗರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಬೆಂಗಳೂರಿನ ಮಂಗಮ್ಮನ ಪಾಳ್ಯದ ಮದೀನಾನಗರ ನಿವಾಸಿ ಅಖ್ತರ್(37) ಬಂಧಿತ. ಆರೋಪಿಯಿಂದ(Accused) ದುಬಾರಿ ಬೆಲೆಯ ರಾರಯಡೋ, ಲಾಂಗಿನ್ಸ್, ಓಮೇಗಾ ಕಂಪನಿಯ ಸುಮಾರು 2 ಕೋಟಿ ಮೌಲ್ಯದ 171 ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ. ಜ.5ರಂದು ಇಲ್ಲಿನ ನೂರಡಿ ರಸ್ತೆಯ ಜಿಮ್ಸನ್ ಟೈಮ್ಸ್ ಪ್ರೈ ಲಿ. ಹೆಸರಿನ ಶೋ ರೂಮ್‌ಗೆ ನುಗ್ಗಿ ದುಬಾರಿ ದರ ವಾಚ್‌ಗಳನ್ನು ಕಳವು(Theft) ಮಾಡಲಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ(Arrest). ಈ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Gang of Thieves: ಕುಖ್ಯಾತ ರಾಮ್‌ಜೀನಗರ ಗ್ಯಾಂಗ್‌ನ 11 ಮಂದಿ ಬಂಧನ
ಶೋ ರೂಮ್‌ಗಳೇ ಟಾರ್ಗೆಟ್!
ಆರೋಪಿಗಳು ಹಗಲು ವೇಳೆಯಲ್ಲಿ ವಾಚ್, ಕ್ಯಾಮರಾ, ಮೊಬೈಲ್ ಶೋ ರೂಮ್‌ಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬಾಗಿಲು ಮೀಟಿ ಕಳವು ಮಾಡುತ್ತಿದ್ದರು. ಬಿಹಾರ ಮೂಲದ ಈ ಗ್ಯಾಂಗ್ ಕಳ್ಳತನ ಮಾಡುವ ಸಲುವಾಗಿ ಮಹಾನಗರಗಳಲ್ಲಿ ಬಾಡಿಗೆ ಮನೆ ಮಾಡಿ ಉಳಿದುಕೊಳ್ಳುತ್ತಿದ್ದರು. ಗ್ರಾಹಕರ(Customers) ಸೋಗಿನಲ್ಲಿ ಐಷಾರಾಮಿ ಶೋ ರೂಮ್‌ಗಳಿಗೆ ಭೇಟಿ ನೀಡಿ ಅಲ್ಲಿನ ಭದ್ರತಾ ವ್ಯವಸ್ಥೆ, ಡೋರ್ ಸೇರಿದಂತೆ ಪ್ರತಿಯೊಂದನ್ನೂ ಕೂಲಂಕಷವಾಗಿ ಪರಿಶೀಲಿಸುತ್ತಿದ್ದರು. ಬಳಿಕ ಕಳ್ಳತನಕ್ಕೆ ಸ್ಕೆಚ್ ಸಿದ್ಧಪಡಿಸಿ, ರಾತ್ರಿ ವೇಳೆ ಕಳವು ಮಾಡಿ ಪರಾರಿಯಾಗುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೇಪಾಳ ಗಡಿಯಲ್ಲಿ ಸೇಲ್
ಆರೋಪಿಗಳು ಕದ್ದ ಎಲೆಕ್ಟ್ರಾನಿಕ್ ಉಪಕರಣಗಳು, ವಾಚ್‌ಗಳು ಹಾಗೂ ಮೊಬೈಲ್‌ಗಳನ್ನು ಬಿಹಾರ ಹಾಗೂ ನೇಪಾಳದ ಗಡಿಯಲ್ಲಿ(Nepal Border) ಗಿರಾಕಿ ಹುಡುಕಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಆರೋಪಿಗಳು ಕಳ್ಳತನವನ್ನೇ ವೃತ್ತಿ ಮಾಡಿಕೊಂಡು ಬೆಂಗಳೂರು(Bengaluru) ಮಾದರಿಯಲ್ಲಿ ದೇಶದ ವಿವಿಧ ನಗರಗಳಲ್ಲಿ ಕಳವು ಕೃತ್ಯ ಎಸಗಿರುವ ಸಾಧ್ಯತೆಯಿದೆ. ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.