Azim Premji ವಿರುದ್ಧ ದುರುದ್ದೇಶಪೂರಿತ ಕೇಸ್‌ ಹಾಕಿದ ವಕೀಲರಿಗೇ ಜೈಲು..!

Kannadaprabha News   | Asianet News
Published : Jan 15, 2022, 10:05 AM ISTUpdated : Jan 15, 2022, 10:30 AM IST
Azim Premji ವಿರುದ್ಧ ದುರುದ್ದೇಶಪೂರಿತ ಕೇಸ್‌ ಹಾಕಿದ ವಕೀಲರಿಗೇ ಜೈಲು..!

ಸಾರಾಂಶ

*   ಅಜೀಂ ಪ್ರೇಮ್‌ಜಿ, ಅವರ ಟ್ರಸ್ಟ್‌ ವಿರುದ್ಧ ಪ್ರಕರಣ *  ಎನ್‌ಜಿಪ ಪರ ವಾದಿಸುತ್ತಿದ್ದ ಸುಬ್ರಮಣಿಯನ್‌ಗೆ 2 ತಿಂಗಳು ಜೈಲು *  ಪ್ರಕರಣದ ಎಲ್ಲಾ ವಿವರ ಪರಿಶೀಲಿಸಿ ಈ ತೀರ್ಪು ನೀಡಿದ ನ್ಯಾಯಾಲಯ  

ಬೆಂಗಳೂರು(ಜ.15):  ವಿಪ್ರೋ(Wipro) ಸಂಸ್ಥೆಯ ಸಂಸ್ಥಾಪಕ ಅಜೀಂ ಪ್ರೇಮ್‌ಜಿ(Azim Premji) ಮತ್ತು ಅವರ ಟ್ರಸ್ಟ್‌ ವಿರುದ್ಧ ತನಿಖೆಗೆ ಕೋರಿ ಹಲವು ದೂರು ದಾಖಲಿಸಿದ ಪ್ರಕರಣದಲ್ಲಿ ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಪರೆನ್ಸಿ ಪ್ರೈವೇಟ್‌ ಲಿಮಿಟೆಡ್‌(India Awake For Transparency Private Limited) ಎಂಬ ಸರ್ಕಾರೇತರ ಸಂಸ್ಥೆಯನ್ನು (NGO) ಪ್ರತಿನಿಧಿಸುತ್ತಿದ್ದ  ವಕೀಲ ಆರ್‌.ಸುಬ್ರಮಣಿಯನ್‌ ಮತ್ತು ಪಿ.ಸದಾನಂದ ಅವರಿಗೆ ಎರಡು ತಿಂಗಳು ಜೈಲು ಶಿಕ್ಷೆ ಮತ್ತು ಎರಡು ಸಾವಿರ ರು. ದಂಡ ವಿಧಿಸಿ ಹೈಕೋರ್ಟ್‌(High Court of Karnataka) ಆದೇಶಿಸಿದೆ.

ವಿಪ್ರೋ ಸಂಸ್ಥೆ ಹಾಗೂ ಅಜೀಂ ಪ್ರೇಮ್‌ಜಿ ಮತ್ತಿತರರು ಸಲ್ಲಿಸಿದ್ದ ಕ್ರಿಮಿನಲ್‌ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾ.ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ಎಸ್‌.ಹೇಮಲೇಖ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ಈ ಆದೇಶ ನೀಡಿದೆ. ಆರೋಪಿಗಳಿಬ್ಬರೂ ದಂಡ ಪಾವತಿಸದಿದ್ದರೆ ಮತ್ತೆ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಹಾಗೂ ಅಜೀಂ ಪ್ರೇಮ್‌ಜೀ ಮತ್ತು ವಿಪ್ರೊ ಕಂಪನಿ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ರೀತಿಯ ಕೇಸ್‌ದಾಖಲಿಸಬಾರದು ಎಂದು ಆದೇಶಿಸಿದೆ.

ಅಜೀಂ ಪ್ರೇಮ್‌ಜಿ ವಿರುದ್ಧ ತನಿಖೆ ಕೋರಿದ್ದ ಸಂಸ್ಥೆಗೆ 10 ಲಕ್ಷ ದಂಡ

ಈ ಮಧ್ಯೆ ತೀರ್ಪು(Verdict) ಪ್ರಕಟಣೆ ನಂತರ ಆರೋಪಿಗಳ ಪರ ವಕೀಲರು, ಸುಪ್ರೀಂಕೋರ್ಟ್‌ನಲ್ಲಿ(Supreme Court) ಆದೇಶ ಪ್ರಶ್ನಿಸಲು ಸಮಯ ನೀಡಬೇಕು. ಅಲ್ಲಿಯವರೆಗೆ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಬೇಕು ಎಂದು ಕೋರಿದರು. ಆ ಮನವಿ ಒಪ್ಪಿದ ನ್ಯಾಯಪೀಠವು ನಾಲ್ಕು ವಾರಗಳ ಕಾಲ ತನ್ನ ತೀರ್ಪುನ್ನು ಅಮಾನತ್ತಿನಲ್ಲಿರಿಸಲು ಆದೇಶಿಸಿತು.

ಪ್ರಕರಣವೇನು:

ಅಜೀಂ ಪ್ರೇಮ್‌ಜಿ ಸೇರಿ ಕಂಪನಿಯ ಹಲವು ನಿರ್ದೇಶಕರು, ಆರ್‌ಬಿಐ(RBI) ಕಾಯ್ದೆ ಸೆಕ್ಷನ್‌ 451ಎ ಪ್ರಕಾರ ನೋಂದಣಿ ಮಾಡಿಸದೆ ಹಷಂ ಇನ್‌ವೆಸ್ಟೆಮಂಟ್‌ ಮತ್ತು ಟ್ರೇಡಿಂಗ್‌ ಲಿಮಿಟೆಡ್‌ ಎಂಬ ಕಂಪನಿ ಮೂಲಕ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಇಂಡಿಯಾ ಅವೇಕ್‌ಫಾರ್‌ ಟ್ರಾನ್ಸ್‌ಫರೆನ್ಸ್‌ ಎಂಬ ಎನ್‌ಜಿಒ ಆರ್‌ಬಿಐಗೆ ದೂರು ನೀಡಿತ್ತು. ದೂರಿಗೆ ಸಂಬಂಧಿಸಿದಂತೆ ಆರ್‌ಬಿಐ ಸಮಗ್ರ ಉತ್ತರ ನೀಡಿತ್ತು.

ಆದರೂ ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದ ಎನ್‌ಜಿಒ, ಅಜಿಂ ಪ್ರೇಮ್‌ಜಿ ಮತ್ತಿತರರ ವಿರುದ್ಧ ಕ್ರಿಮಿನಲ್‌ಕ್ರಮ ಜರುಗಿಸಬೇಕು ಎಂದು ಕೋರಿತ್ತು. ಅಧೀನ ನ್ಯಾಯಾಲಯ ದೂರನ್ನು ವಜಾಗೊಳಿಸಿ 2020ರ ಜು.28ರಂದು ಆದೇಶಿಸಿತ್ತು. ಇದರಿಂದ ಹೈಕೋರ್ಟ್‌ಗೆ ಎನ್‌ಜಿಒ ಅರ್ಜಿ ಸಲ್ಲಿಸಿತ್ತು. ಪ್ರಕರಣದಲ್ಲಿ ಎನ್‌ಜಿಒವನ್ನು ವಕೀಲ ಆರ್‌.ಸುಬ್ರಮಣಿಯನ್‌ಮತ್ತು ಪಿ.ಸದಾನಂದ ಪ್ರತಿನಿಧಿಸಿದ್ದರು.

ಕ್ರಿಮಿನಲ್‌ ಕೇಸ್‌ ಭೀತಿ: ಅಜೀಂ ಪ್ರೇಮ್‌ಜಿ ನಿರಾಳ

ಆ ಅರ್ಜಿಯನ್ನೂ ವಜಾಗೊಳಿಸಿದ್ದ ಹೈಕೋರ್ಟ್‌, ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಪರೆನ್ಸಿ ಸಂಸ್ಥೆಗೆ 10 ಲಕ್ಷ ರು. ದಂಡ(Fine) ವಿಧಿಸಿ 2021ರ ಫೆ.2ರಂದು ಆದೇಶಿಸಿತ್ತು. ಅಲ್ಲದೆ, ಇದೇ ವಿಚಾರವಾಗಿ ಒಟ್ಟಾರೆ ಐದು ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆ ಮೂಲಕ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥ ಮಾಡಿದ ಹಾಗೂ ನ್ಯಾಯಾಂಗವನ್ನು ದುರ್ಬಳಕೆ ಮಾಡಿಕೊಂಡಿರುವ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದ ಹೈಕೋರ್ಟ್‌, ಎನ್‌ಜಿಇ ಮತ್ತದನ್ನು ಪ್ರತಿನಿಧಿಸಿದ್ದವರ ವಿರುದ್ಧ ಕ್ರಿಮಿನಲ್‌ನ್ಯಾಯಾಂಗ ನಿಂದನೆ ಹೂಡಬಹುದು ಎಂದು ಆದೇಶಿಸಿತ್ತು. ಅದರಂತೆ ಅಜೀಂ ಪ್ರೇಮ್‌ಜಿ ಅವರು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿರುವ ವಿಭಾಗೀಯ ನ್ಯಾಯಪೀಠ, ಪ್ರಕರಣದ ಎಲ್ಲಾ ವಿವರ ಪರಿಶೀಲಿಸಿ ಈ ತೀರ್ಪು ನೀಡಿದೆ.

ಅಜೀಂ ಪ್ರೇಮ್‌ಜಿ ನಂ.1 ದಾನಿ, 2021ರಲ್ಲಿ 9,713 ಕೋಟಿ ದಾನ: ಅದಾನಿಗೆ 8ನೇ ಸ್ಥಾನ!

ಬೆಂಗಳೂರು ಮೂಲದ ಉದ್ಯಮಿ, ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಮತ್ತೊಮ್ಮೆ ಭಾರತದ ನಂ.1 ದಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 2021ರಲ್ಲಿ ಅಜೀಂ ನಿತ್ಯ 27 ಕೋಟಿ ರು.ನಂತೆ ಒಂದು ವರ್ಷದಲ್ಲಿ ಒಟ್ಟಾರೆ 9713 ಕೋಟಿ ರು.ಗಳನ್ನು ವಿವಿಧ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸಿದ್ದಾರೆ ಎಂದು ವರದಿಯೊಂದು ತಿಳಿಸಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ