'ಸ್ಟ್ರಿಪ್ ಚಾಟ್' ಲೈವ್ ವಿಡಿಯೋ ತೋರಿಸಿ ಹಣ ದೋಚುತ್ತಿದ್ದರು...ವಹಿವಾಟು 3 ಕೋಟಿ!

By Suvarna NewsFirst Published Oct 24, 2021, 12:45 AM IST
Highlights

* ಆನ್ ಲೈನ್ ಸೆಕ್ಸ್ ರಾಕೆಟ್ ಮೂಲ ಪತ್ತೆ ಮಾಡಿದ ಪೊಲೀಸರು
* ನೋಂದಣಿ ಮಾಡಿಕೊಂಡವರಿಗೆ ಅಶ್ಲೀಲ ಚಿತ್ರ ತೋರಿಸುತ್ತಿದ್ದರು
* ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು

ಗಜಿಯಾಬಾದ್(ಅ. 23)  ಗಜಿಯಾಬಾದ್ ಪೊಲೀಸರು  ಆನ್ ಲೈನ್ (Sextortion Racket) ಸೆಕ್ಸ್ ರಾಕೆಟ್ ಪ್ರಕರಣದ ಮೂಲ ಪತ್ತೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನ ಬಂಧನವಾಗಿದೆ.

ಆನ್ ಲೈನ್ (Online) ಫ್ಲಾಟ್ ಫಾರ್ಮ್ ನಲ್ಲಿ 'ಸ್ಟ್ರಿಪ್ ಚಾಟ್' ಎಂಬ ಹೆಸರಿನಲ್ಲಿ ಅಶ್ಲೀಲ ಚಿತ್ರ ಪ್ರದರ್ಶನ ಮಾಡಲಾಗುತ್ತಿತ್ತು. ಬೆತ್ತಲೆ (Nude) ವಿಡಿಯೋಗಳನ್ನು ಕಳಿಸಿ, ಲೈವ್ ನಲ್ಲಿ ತೋರಿಸಿ ಹಣ ದೋಚುವ ಕೆಲಸ ಮಾಡುತ್ತಿದ್ದರು.  ಮೊದಲು ಮೆಂಬರ್ ಶಿಪ್ ಮಾಡಿಕೊಳ್ಳುತ್ತಿದ್ದ ವ್ಯಕ್ತಿಗಳಿಗೆ ಅಶ್ಲೀಲ ಚಿತ್ರಗಳನ್ನು ತೋರಿಸುತ್ತಿದ್ದರು. ನೋಂದಣಿ ಮಾಡಿಕೊಂಡವರು ವಿಡಿಯೋ ನೋಡುವುದನ್ನು ರೆಕಾರ್ಡ್ ಮಾಡಿಕೊಂಡು ಅವರನ್ನು ಬ್ಲಾಕ್ ಮೇಲ್ ಮಾಡಲು ಆರಂಭಿಸುತ್ತಿದ್ದರು.

ನಟಿ ಮಾಡುತ್ತೇನೆ ಎಂದು ನಂಬಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ನಿರ್ಮಾಪಕ

ರಾಜ್ ಕೋಟ್ ಪೊಲೀಸರಿಂದ ನಮಗೆ ಮಾಹಿತಿ ಲಭ್ಯವಾಗಿತ್ತು. ವ್ಯಕ್ತಿಯೊಬ್ಬ ಎಂಭತ್ತು ಲಕ್ಷ ಕಳೆದುಕೊಂಡಿದ್ದ ಪ್ರಕರಣ ದಾಖಲಾಗಿತ್ತು. ಸೈಬರ್ ದಳ ಮತ್ತು ನಂದಗ್ರಾಮ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ವಂಚಕರು ಸಿಕ್ಕಿಬಿದ್ದರು. 

ವಂಚಕರ ತಾಣದ ಮೇಲೆ ದಾಳಿ ಮಾಡಿದಾಗ ಸೆಕ್ಸ್ ಟಾಯ್ಸ್, ಮಹಿಳೆಯರ ಒಳುಡುಪುಗಳಂತಹ ಆಭರಣಗಳು, ಮೊಬೈಲ್ ಪೋನ್ ಮತ್ತು ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಗಳಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಲಾಗಿದೆ. ಎಂಟು ಬ್ಯಾಂಕ್ ಖಾತೆ ಸೀಜ್ ಮಾಡಲಾಗಿದ್ದು ಇದರಲ್ಲಿ ವಹಿವಾಟು ಆದ ಮೊತ್ತ ಬರೋಬ್ಬರಿ  3 ಕೋಟಿ 80 ಲಕ್ಷ ರೂ. ! ಇನ್ನು ಕೆಲ ಬ್ಯಾಂಕ್ ಖಾತೆಗಳು ಇದೇ ಪ್ರಕರಣಕ್ಕೆ ಲಿಂಕ್ ಆಗಿದ್ದು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಮುಂಬೈ ಐಷಾರಾಮಿ ಹೋಟೆಲ್ ಒಂದರ ಮೇಲೆ ದಾಳಿ ಮಾಡಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ  ಸೇರಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. 

 

click me!