
ಬೆಂಗಳೂರು(ಅ. 23) ಕಸ ಗುಡಿಸುವಾಗ ಕಣ್ಣಿಗೆ ಕಸ ಬಂದಿದೆ ಎಂಬ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆಗೆ ಮುಂದಾಗಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಅವರ ಮನೆಗೆ ಸ್ನೇಹಿತ್ ಬೌನ್ಸರ್ ಗಳೊಂದಿಗೆ ನುಗ್ಗಿದ್ದರು. ಮನೆಗೆ ದಾಳಿ ಮಾಡಿ ಇಬ್ಬರು ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಬಂದಿದ್ದು ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು; ಕಿರಾತಕ ಐಡಿಯಾ.. ಲೆಹಂಗಾದಲ್ಲಿ ಸಿಕ್ತು ಕೆಜಿ ಕೆಜಿ ಡ್ರಗ್ಸ್!
ಹತ್ತು ಜನ ಬೌನ್ಸರ್ ಗಳೊಂದಿಗೆ ಸ್ನೇಹಿತ್ ರಜತ್ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ರಜತ್ ಮನೆಯಲ್ಲಿ ಮಹಿಳಾ ಸಿಬ್ಬಂದಿ ಕಸ ಗುಡಿಸುತ್ತಿದ್ದರು. ಈ ಕಸದ ಧೂಳು ತಮ್ಮ ಮೈಮೇಲೆ ಬಿದ್ದಿದೆ..ಕಣ್ಣಿಗೆ ಬಿದ್ದಿದೆ ಎನ್ನುವುದು ಸ್ನೇಹಿತ್ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಮಹಿಳಾ ಸಿಬ್ಬಂದಿಯನ್ನು ಮನಬಂದಂತೆ ಥಳಿಸಿದ್ದಾರೆ.
ಮಳೆಯರಿಗೆ ಬಟ್ಟೆ ಹರಿದು ಹೋಗಿ ರಕ್ತ ಸುರಿಯುವಂತೆ ಹಲ್ಲೆ ಮಾಡಲಾಗಿದೆ. ಈ ಹಿಂದೆಯೂ ಸ್ನೇಹಿತ್ ಮತ್ತು ಗ್ಯಾಂಗ್ ಹಲ್ಲೆ ಮಾಡಿದ್ದ ಆರೋಪ ಎದುರಿಸಿತ್ತು ಸಣ್ಣ ಪುಟ್ಟ ವಿಚಾರ ಎಂದು ರಜತ್ ಕುಟುಂಬ ಸುಮ್ಮನೆ ಇತ್ತು. ಆದರೆ ಈ ಸಾರಿ ದೂರು ನೀಡಿದೆ. ಸ್ನೇಹಿತ್ ಮತ್ತು ಇತರರ ವಿರುದ್ದ ಎಫ್ಐಆರ್ ದಾಖಲಾಗಿದೆ. ಸದ್ಯ ಹಲ್ಲೆಗೊಳಗಾದವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಐಪಿಸಿ ಸೆಕ್ಷನ್ 354-ಮಹಿಳೆ ಗೌರವಕ್ಕೆ ಧಕ್ಕೆ ಐಪಿಸಿ ಸೆಕ್ಷನ್ 323-ಕೈಯಿಂದ ಹಲ್ಲೆ ನಡೆಸುವುದು.. ಐಪಿಸಿ ಸೆಕ್ಷನ್ 448 ಅತಿಕ್ರಮಣ ಪ್ರವೇಶ, 506 ಜೀವ ಬೆದರಿಕೆ ಆರೋಪದಡಿ ದೂರು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ