ಬೆಂಗಳೂರು;  ಕಿರಾತಕ ಐಡಿಯಾ.. ಲೆಹಂಗಾದಲ್ಲಿ ಸಿಕ್ತು ಕೆಜಿ  ಕೆಜಿ ಡ್ರಗ್ಸ್!

By Suvarna NewsFirst Published Oct 23, 2021, 9:47 PM IST
Highlights

* ಬೆಂಗಳೂರಿಗೆ ತಪ್ಪದ ಡ್ರಗ್ಸ್ ಜಾಲದ ನಂಟು
* ಎನ್ ಸಿಬಿ ಅಧಿಕಾರಿಗಳಿಂದ ದಾಳಿ
* ಮೂರು ದಿನಗಳಲ್ಲಿ ಎರಡು ದೊಡ್ಡ ಜಾಲ
* ಮಾದಕ ವಸ್ತುವನ್ನು ಲೆಹಂಗಾದಲ್ಲಿ 

ಬೆಂಗಳೂರು(ಅ. 23)  ಬೆಂಗಳೂರಿನಲ್ಲಿ (Bengaluru)  ಎನ್ ಸಿಬಿ (Narcotics Control Bureau) ಅಧಿಕಾರಿಗಳು ದಾಳಿ ನಡೆಸಿ ಡ್ರಗ್ಸ್ (Drugs) ಜಾಲವನ್ನು ಪತ್ತೆ ಮಾಡಿದ್ದಾರೆ.  ಮೂರು ಕೆಜಿ ಮಾದಕ ದೃವ್ಯ ವಶಕ್ಕೆ ಪಡೆಯಲಾಗಿದೆ.

ಲೆಹಂಗಾದಲ್ಲಿ ಡ್ರಗ್ಸ್ ಬಚ್ಚಿಟ್ಟು ಆಸ್ಟ್ರೇಲಿಯಾಕ್ಕೆ (Australia) ಸಾಗಾಟ ಮಾಡುವ ಯತ್ನ ನಡೆಸಲಾಗಿತ್ತು. ಬೆಂಗಳೂರು ಜೋನ್ ನಿರ್ದೇಶಕ ಅಮಿತ್ ಘವಾಟೆ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮೂರು ಲೆಹಂಗಾದ ಅಡಿಯಲ್ಲಿ ಡ್ರಗ್ಸ್ ಬಚ್ಚಿಡಲಾಗಿತ್ತು.

ಆಂಧ್ರಪ್ರದೇಶದ ನರಿಸಪುರಮ್ ನಿಂದ  ಬುಕ್ ಆಗಿದ್ದು ಆಸ್ಟ್ರೇಲಿಯಾಕ್ಕೆ ಡ್ರಗ್ಸ್ ಪಾರ್ಸಲ್ ಮಾಡಲಾಗಿತ್ತು.  ಚೆನ್ನೈ ಮೂಲದ ಸೆಂಡರ್ ಇದರ ಹಿಂದೆ ಇದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಆರೋಪಿ ಚಾಣಾಕ್ಷನಾಗಿದ್ದು ನಕಲಿ  ಗುರುತಿನ ಪತ್ರ ನೀಡಿ ಆರ್ಡರ್ ಕಳಿಸಿದ್ದ. 

'ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದು ಹೀರೊಇನ್ ಅಲ್ಲ ಹೆರಾಯಿನ್'

ಮೂರು ದಿನಗಳಲ್ಲಿ ಎರಡು ಡ್ರಗ್ಸ್ ಭೇಟೆ ನಡೆಸಲಾಗಿದೆ.  ಕೆಜಿ ಸೆಡಿಯೋಪೆಡ್ರಿನ್ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ.  ಇನ್ನೊಂದು ಕಡೆ ಕಾರ್ಯಾಚರಣೆ ನಡೆಸಿ ಬೆಂಗಳೂರಿನ 6 ಮಂದಿ ಸೆರೆ ಹಿಡಿಯಲಾಗಿದ್ದು ಎಂಡಿಎಂಎ ಮಾತ್ರೆಗಳು, ಮೆಥೋಪೆಟಮೈನ್, ಮೆಥೋಕೋಲೋನ್ ಮತ್ತು ಹೈಗ್ರೇಡ್ ಗಾಂಜಾ ವಶಕ್ಕೆ ಪಡೆಯಲಾಗಿದೆ. 

ಕೆಲ ದಿನಗಳ ಹಿಂದ ಮುಂಬೈ ಪೊಲೀಸರು (Mumbai Police)  25  ಕೋಟಿ ರೂ. ಮೊತ್ತದ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದರು.  ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿಯೂ ಡ್ರಗ್ಸ್ ಪ್ರಕರಣ ಸದ್ದು ಮಾಡಿದ್ದವು. ಡ್ರಗ್ಸ್ ಪ್ರಕರಣದಲ್ಲಿಯೇ ಎನ್ ಸಿಬಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಬಂಧಿಸಿದ್ದು ವಿಚಾರಣೆ ನಡೆಯುತ್ತಲೇ ಇದೆ. 

click me!