ಸಿಡಿ ಯುವತಿ ಜತೆ ಸಂಪರ್ಕದಲ್ಲಿದ್ದ ರಾಜಕೀಯ ಮುಖಂಡರ ಹೆಸರು ಬಹಿರಂಗ?

By Suvarna NewsFirst Published Mar 18, 2021, 3:46 PM IST
Highlights

ಸಿಡಿ ಸ್ಫೋಟ ಪ್ರಕರಣ/ ಯುವತಿ ಕಿಡ್ನಾಪ್ ಕೇಸ್ ಬೆಳಗಾವಿಯಿಂದ ಬೆಂಗಳೂರಿಗೆ ವರ್ಗಾವಣೆ/ ಪ್ರಾಥಮಿಕ ಮಾಹಿತಿ ಕಲೆಹಾಕಿ ಎಸ್‌ಐಟಿಗೆ ನೀಡಿದ ಪೊಲೀಸರು/ ಯುವತಿ ಕುಟುಂಬದವರು ಬೆಳಗಾವಿಯಲ್ಲಿ ಕಿಡ್ನಾಪ್  ದೂರು ದಾಖಲಿಸಿದ್ದರು.

ಬೆಳಗಾವಿ/ ಬೆಂಗಳೂರು(ಮಾ. 18)  ಸಿಡಿ ಕೇಸ್ ಹೊಸದೊಂದಷ್ಟು ತಿರುವು ಪಡೆದುಕೊಳ್ಳುತ್ತಿದೆ. ಮಗಳು ಕಿಡ್ನಾಪ್ ಆಗಿದ್ದಾಳೆಂದು ಯುವತಿ ತಂದೆ ದೂರು ವಿಚಾರ ಒಂದು ಕಡೆಯಾದರೆ ಸಿಡಿ ಹಿಂದೆ ಇದ್ದಾರೆ ಎಂಭ ಶಂಕಿತರು ವಿಡಿಯೋ ಮೂಲಕ ಅಜ್ಞಾತ ಸ್ಥಳದಿಂದ ಮಾತನಾಡಿದ್ದಾರೆ.

ಎಸ್‌ಐಟಿಗೆ ಪ್ರಕರಣದ ಬಗ್ಗೆ ಮಹತ್ವದ ಮಾಹಿತಿಯನ್ನು ಬೆಳಗಾವಿ ಪೊಲೀಸರು ನೀಡಿದ್ದಾರೆ. ಸಿಡಿ ಲೇಡಿ ಕಿಡ್ನಾಪ್ ಕೇಸ್ ಬೆನ್ನು ಹತ್ತಿರುವ ಬೆಳಗಾವಿ ಪೊಲೀಸರು ಯುವತಿಯ ಸಹೋದರರಿಂದ ಮಹತ್ವದ ಅಂಶ ಕಲೆ ಹಾಕಿದ್ದಾರೆ. ಕಿಡ್ನಾಪ್ ಪ್ರಕರಣದ ತನಿಖೆ ನಡೆಸಿ ಪ್ರಾಥಮಿಕ ವರದಿ ಸಿದ್ದಪಡಿಸಿದ್ದಾರೆ. 

ಯುವತಿಯ ಇಬ್ಬರು ಸಹೋದರರಿಂದ ಮಹತ್ವದ ಮಾಹಿತಿ ಲಭ್ಯವಾಗಿದೆ. ಸಹೋದರರು ನೀಡಿರುವ ಮಾಹಿತಿಯನ್ನು  ಎಸ್ಐಟಿಗೆ ಟೀಮ್ ಗೆ ನೀಡಲಾಗಿದೆ. ಯುವತಿಗೆ ಕೆಲವು ರಾಜಕೀಯ ಮುಖಂಡರು ಸಂಪರ್ಕದಲ್ಲಿದ್ದಾರಾ? ಎನ್ನುವ ಪ್ರಶ್ನೆಯೂ ಮೂಡಿದೆ.

ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಶಂಕಿತರು ಹೇಳಿದ್ದೇನು?

ಆಗಾಗ ಯುವತಿಗೆ ಕೆಲವು ರಾಜಕೀಯ ನಾಯಕರು ಕರೆ ಮಾಡಿ ಮಾತನಾಡುತ್ತಿದ್ರೂ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲಿ ಯುವತಿಗೆ ಯಾರೆಲ್ಲಾ ಕರೆ ಮಾಡಿದ್ರೂ ಎನ್ನುವುದು ಬಹಿರಂಗವಾಗಲಿದೆ. ಯುವತಿಯ ಸಹೋದರರಿಂದಲೇ ವಿಚಾರ ಬಹಿರಂಗ ಆಗುವ ಸಾಧ್ಯತೆ ಇದೆ.

ಸಹೋದರರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಿಡಿಯಲ್ಲಿದ್ದ ಯುವತಿ ಸಹೋದರರಿಗೆ ವಾಟ್ಸಪ್ ಮೆಸೇಜ್, ದೂರವಾಣಿ ಕರೆ ಮಾಡುತ್ತಿದ್ದಳು. ಸಿಡಿ ರಿಲೀಸ್ ಆದ ಬಳಿಕವೂ ಸಹೋದರರ ಜೊತೆ ಸಂಪರ್ಕದಲ್ಲಿದ್ದ ಯುವತಿ ವಾಟ್ಸಪ್ ಮೆಸೇಜ್, ದೂರವಾಣಿ ಕರೆ ವೇಳೆ ಯಾವ ವಿಚಾರ ಹಂಚಿಕೊಂಡಿದ್ದಳು ಎಂಬುದನ್ನು ಕಲೆ ಹಾಕಲಾಗುತ್ತಿದೆ.

ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಎಸ್‌ಐಟಿಗೆ ಟೆಕ್ನಿಕಲ್ ಎವಿಡೆನ್ಸ್  ಬೆಳಗಾವಿ ಪೊಲೀಸರು ನೀಡಿದ್ದಾರೆ. ಎಸ್ಐಟಿ ಗೆ ಎಪಿಎಂಸಿ ಸಿಪಿಐ ಜಾವೇದ್ ಮುಷಾಪುರಿ ನೇತೃತ್ವದ ತಂಡ ಮಾಹಿತಿ ನೀಡಿದೆ.

ಇನ್ನೊಂದು ಕಡೆ  ಸಿಡಿ ಲೇಡಿ ಕಿಡ್ನಾಪ್ ಕೇಸ್ ಬೆಳಗಾವಿಯಿಂದ ಬೆಂಗಳೂರಿನ ಆರ್.ಟಿ.ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದ. ಪ್ರಕರಣದ ಪ್ರಾಥಮಿಕ ವರದಿ ಕೋರ್ಟ್‌ಗೆ ಸಲ್ಲಿಸಲಾಗಿದೆ. ಕೋರ್ಟ್‌ಗೆ ಸಲ್ಲಿಸಿ ಬಳಿಕ ಕೇಸ್ ಫೈಲ್ ಜೊತೆ ಬೆಂಗಳೂರಿಗೆ ರವಾನೆಯಾಗಿದೆ. ಕೇಸ್ ಫೈಲ್‌ನೊಂದಿಗೆ ಬೆಂಗಳೂರಿಗೆ ತೆರಳಿರುವ ಎಪಿಎಂಸಿ ಪೊಲೀಸರು, ಡಿಜಿ ಐಜಿಪಿಗೆ ಸಿಡಿ ಲೇಡಿ ಕಿಡ್ನಾಪ್ ಕೇಸ್ ಫೈಲ್ ನೀಡಿದ್ದಾರೆ. 

click me!