ಮಾನ್ವಿ: ಸಾಲಬಾಧೆ ತಾಳದೆ ವಿಷ ಸೇವಿಸಿ ರೈತ ಆತ್ಮಹತ್ಯೆ

Published : Mar 18, 2021, 03:16 PM IST
ಮಾನ್ವಿ: ಸಾಲಬಾಧೆ ತಾಳದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಸಾರಾಂಶ

ಕೃಷಿಗಾಗಿ ಬ್ಯಾಂಕ್‌ನಲ್ಲಿ 2 ಲಕ್ಷ ಮತ್ತು ಖಾಸಗಿ ಸಾಲ ಪಡೆದುಕೊಂಡಿದ್ದ ಮೃತ ರೈತ| ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಯಡಿವಾಳ ಗ್ರಾಮದಲ್ಲಿ ನಡೆದ ಘಟನೆ| ಮೃತನ ಪತ್ನಿ ನೀಡಿದ ದೂರಿನನ್ವಯ ಮಾನ್ವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಮಾನ್ವಿ(ಮಾ.18):  ಬೆಳೆನಷ್ಟ ಹಾಗೂ ಸಾಲಬಾಧೆ ತಾಳದೆ ಹೊಲದಲ್ಲಿ ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಯಡಿವಾಳ ಗ್ರಾಮದಲ್ಲಿ ಬುಧವಾರ ನಡೆದಿದೆ.

ಯಂಕಾರೆಡ್ಡಿ (43) ಮೃತ ರೈತ. ಕೃಷಿಗಾಗಿ ಪಿಜಿಬಿ ಬ್ಯಾಂಕ್‌ನಲ್ಲಿ 2 ಲಕ್ಷ ಮತ್ತು ಖಾಸಗಿ ಸಾಲ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ. 

ಬ್ಯಾಡ​ಗಿ: ಅಧಿಕಾರಿ ಕಿರುಕುಳಕ್ಕೆ ಬೇಸತ್ತು ಆತ್ಮ​ಹ​ತ್ಯೆಗೆ ಯತ್ನಿ​ಸಿದ ಸಾರಿಗೆ ನೌಕ​ರ

ಬೆಳೆ ನಷ್ಟ ಅನುಭವಿಸಿದ್ದರ ಪರಿಣಾಮ ಸಾಲ ಮರುಪಾವತಿಗೆ ತೊಂದರೆ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ನೀಡಿದ ದೂರಿನನ್ವಯ ಮಾನ್ವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮರ್ಚೆಂಟ್ ನೇವಿ ಅಧಿಕಾರಿಯನ್ನು ಕೊಚ್ಚಿ ಸಿಮೆಂಟ್ ಡ್ರಮ್‌ನಲ್ಲಿ ತುಂಬಿದ್ದ ಕಿರಾತಕರಿಗೆ ಗಲ್ಲು: ಮಹಾಭಾರತ ಉದಾಹರಿಸಿ ಮೀರತ್ ಕೋರ್ಟ್‌ ತೀರ್ಪು
Bengaluru: ಆಸ್ತಿಗಾಗಿ ಅಣ್ಣನ ಮಗನ ಕೊಂದು ಠಾಣೆಗೆ ಹೋಗಿ ಶರಣಾದ ಚಿಕ್ಕಪ್ಪ, ಮತ್ತೋರ್ವ ಯುವಕನ ಜೀವ ಉಳಿಸಿದ 'ಸಿನಿಮಾ'